ನಟ ದರ್ಶನ್ ವಿರುದ್ಧ ರೈತನ ಆಕ್ರೋಶ- ಮಾತನಾಡುವಾಗ ಎಚ್ಚರ ಅಂದ ರೈತ ಭರತ್.

ನಟ ಚಾಲೇಂಜಿಗ್ ಸ್ಟಾರ್ ದರ್ಶನ್ ವಿರುದ್ಧ ಭರತ್ ಎಂಬ ರೈತ ಸಾಮಾಜಿಕ ಜಾಲಾತಾಣಗಳಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.

ad

ಕೆಲವು ದಿನಗಳ ಹಿಂದೆ ಬೆಂಗಳೂರಿನ BIT ಕಾಲೇಜಿನಲ್ಲಿ ಮಾತನಾಡಿದ ದರ್ಶನ್ ಸಾಲಮನ್ನಾ ಮಾಡುವುದು ಬೇಡ ರೈತರಿಗೆ ಬೆಂಬಲ ಬೆಲೆ ನೀಡಿದರೆ ಸಾಕು ಅವರೆ ಸಾಲವನ್ನು ತೀರಿಸಿಕೊಳ್ಳುತ್ತಾರೆ ಎಂದು ಸಿ.ಎಂ ಹೆಚ್.ಡಿ.ಕೆಗೆ ಟಾಂಗ್ ನೀಡಿದ್ದರು, ಸದ್ಯ ಈ ಹೇಳಿಕೆ ಕುರಿತಂತೆ ಭರತ್ ಎಂಬ ರೈತ ಸಾಮಾಜಿಕ ಜಾಲಾತಾಣಗಳಲ್ಲಿ ತನ್ನ ಅಸಮಾಧಾನವನ್ನು ಹೊರಹಾಕಿದ್ದಾರೆ. ರೈತ ಭರತ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ, ಕುಂದೂರು ಗ್ರಾಮದ ತಮ್ಮ ತೋಟದಲ್ಲಿ ಸುಮಾರು ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದರು. ಆದರೆ, ಗಾಳಿ ಮಳೆಯಿಂದಾಗಿ ಅವರು ಬೆಳೆದ ಬಾಳೆ ಮುರಿದು ಬಿದ್ದಿದೆ. ಇದರಿಂದ ರೈತ ಭರತ್ ಗೆ ಭಾರಿ ನಷ್ಟವಾಗಿದ್ದು,  ಕಂಗಾಲಾಗಿದ್ದಾರೆ. ಅದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ.

“ದರ್ಶನ್ ಅವರೇ ನೀವು ಸಾಲಮನ್ನಾ ಮಾಡಲಾಗದಿದ್ದರೆ ರೈತರಿಗೆ ಬೆಂಬಲ ಬೆಲೆ ನೀಡಿ ಎಂಬ ಹೇಳಿಕೆ ನೀಡಿದ್ದೀರಿ ಆದರೀಗ ನನ್ನ ಬಾಳೆ ತೋಟ ಬಿರುಗಾಳಿ, ಮಳೆಗೆ ನೆಲ ನಾಶವಾಗಿದೆ. ಬೆಳೆಯೇ ಇಲ್ಲ ಎಂದ ಮೇಲೆ ಬೆಂಬಲ ಬೆಲೆ ಎಲ್ಲಿಂದ ಕೊಡುತ್ತಾರೆ. ಹೀಗಾಗಿ ಇನ್ನು ಮುಂದೆ ಮಾತನಾಡುವ ಮುಂಚೆ ರೈತರ ಕಷ್ಟಗಳ ಬಗ್ಗೆ ರೈತರ ಜೊತೆ ಚರ್ಚಿಸಿ ಆನಂತರ ಮಾತನಾಡಿ ಎಂದು ರೈತ ಭರತ್ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ವಿರುದ್ಧ ವಾಗ್ಯುದ್ಧ ನಡೆಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ಎಲ್ಲೆಡೆ ವೈರಲ್ ಆಗಿದೆ. ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸಾಲಮನ್ನಾ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.