ಹಾಸನದಲ್ಲಿ ಭಾರಿ ಮಳೆ- ರೈತರ ಮೊಗದಲ್ಲಿ ಹೊಸ ಕಳೆ

 

ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಮಳೆರಾಯನ ಆರ್ಭಟ ಜೋರಾಗಿದೆ.. ಅದರಲ್ಲೂ ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗುತ್ತಿದ್ದು, ಹೇಮಾವತಿ ನದಿಗೆ ಒಳ ಹರಿವು ದಾಖಲೆ ಪ್ರಮಾಣದಲ್ಲಿ ಹೆಚ್ಚಾಗಿದೆ.
ಸದ್ಯ ಡ್ಯಾಂಗೆ 40 ಸಾವಿರ ಕ್ಯೂಸೆಕ್ ಒಳ ಹರಿವು ಬರುತ್ತಿದೆ. ಇನ್ನು ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿಯಾಗಿದ್ದು, ಇಂದಿಗೆ ನೀರಿನ ಮಟ್ಟ 2888 ಅಡಿಗೆ ಏರಿಕೆಯಾಗಿದೆ. 37 ಟಿಎಂಸಿ ಸಾಮರ್ಥ್ಯ ಹೊಂದಿರುವ ಹೇಮಾವತಿ ಜಲಾಶಯದಲ್ಲಿ ಕಳೆದ ಮೂರು ದಿನಗಳಲ್ಲಿ 9 ಟಿಎಂಸಿಯಷ್ಟು ನೀರು ಬಂದಿದ್ದು, ಸದ್ಯ ಡ್ಯಾಂನಲ್ಲಿ 13.33 ಟಿಎಂಸಿ ಸಂಗ್ರಹವಾಗಿದೆ.
ಕಳೆದ ಮೂರು ವರ್ಷಗಳಿಂದ ತುಂಬದ ಹೇಮೆ, ಈ ಬಾರಿ ಉತ್ತಮ ಮಳೆಯಾಗುತ್ತಿರುವುದರಿಂದ ಭರ್ತಿಯಾಗುವ ನಿರೀಕ್ಷೆ ಇದ್ದು, ರೈತರ ಮೊಗದಲ್ಲಿ ಸಂತಸ ತರಿಸಿದೆ.. ಇನ್ನು ಸ್ವಲ್ಪಮಟ್ಟಿಗೆ ಇಂದು ಮಳೆ ಪ್ರಮಾಣ ಕುಗ್ಗಿದ್ದು, ಜನಜೀವನ ಎಂದಿನಂತಿದೆ..