ಕೃಷ್ಣನ ಸಹವಾಸ ಭಾರೀ ಡೇಂಜರ್ !! ಮಹಾರಾಷ್ಟ್ರದಲ್ಲಿ ಮಳೆಯಾದರೆ ಕರ್ನಾಟಕದಲ್ಲಿ ಕೊಡೆ ಹಿಡಿಯಬೇಕು !!

ಬತ್ತಿ ಹೋಗಿದ್ದ ಬಸವಸಾಗರ ಜಲಾಶಯ ಈಗ ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಗೆ ಈಗ ಭರ್ತಿಯಾಗಿದೆ. ನಾಲ್ಕು ಜಿಲ್ಲೆಯ ಜೀವನಾಡಿಯಾದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಸವಸಾಗರ ಜಲಾಶಯದ ಒಡಲು ಈಗ ಭರ್ತಿಯಾಗಿದೆ. ನೀರಿನ ಒಳ ಹರಿವು ಹೆಚ್ಚಳದಿಂದ ಬಸವಸಾಗರ ಜಲಾಶಯದ 10 ಗೇಟುಗಳು ತೆಗೆದು 103478 ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿ ಬಿಡಲಾಗುತ್ತಿದ್ದು ಬತ್ತಿದ್ದ ಕೃಷ್ಣಾ ನದಿ ಈಗ ಜಲಾಶಯದಿಂದ ನೀರು ಹರಿ ಬಿಡುತ್ತಿದ್ದರಿಂದ ನದಿ ಉಕ್ಕಿ ಹರಿಯುತ್ತಿದೆ.

 

33 ಟಿಎಂಸಿ ಸಾಮರ್ಥ್ಯ ದ ಜಲಾಶಯದಲ್ಲಿ ಈಗ 28.329 ಟಿಎಂಸಿ ನೀರು ಸಂಗ್ರವಾಗಿದೆ. ಆಲಮಟ್ಟಿ ಜಲಾಶಯದಿಂದ ಬಸವಸಾಗರ ಸಾಗರ ಜಲಾಶಯಕ್ಕೆ 106036 ಕ್ಯುಸೆಕ್ ನೀರು ಒಳ ಹರಿವು ನೀರು ಬಿಡಲಾಗಿದ್ದು ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಳವಾಗಿದೆ .ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವದರಿಂದ ನದಿ ತೀರದ ಗ್ರಾಮಸ್ಥರು ನದಿ ತೀರಕ್ಕೆ ತೆರಳದಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.