ಗುರು ಶಿಷ್ಯರ ಜಿದ್ದಾಜಿದ್ದಿನ ಕಣದಲ್ಲಿ ಜೆಡಿಎಸ್​-ಕಾಂಗ್ರೆಸ್​ ಕಾರ್ಯಕರ್ತರ ಹೋಯ್ ಕೈ!

 

adಹಾಸನ ಜಿಲ್ಲೆ ಹೊಳೇನರಸೀಪುರ ಇದೀಗ ಹಳೆ ಗುರು ಮತ್ತು ಶಿಷ್ಯನ ನಡುವಿನ ಜಿದ್ದಾಜಿದ್ದಿನ ಕಣವಾಗಿದೆ. ಹೌದು ಹೊಳೆನರಸೀಪುರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪುತ್ರ ಮಾಜಿ ಸಚಿವ ರೇವಣ್ಣ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಬಾಗೂರು ಮಂಜೇಗೌಡ್ರು ಕಣಕ್ಕಿಳಿದಿದ್ದಾರೆ. ಹೀಗಾಗಿ ಈ ಕ್ಷೇತ್ರ ದೇವೆಗೌಡರು ಮತ್ತು ಸಿಎಂ ನಡುವಿನ ಪ್ರತಿಷ್ಠೆಯ ಕಣ ಎನ್ನಿಸಿದೆ. ಹೀಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಪೈಪೋಟಿ ಜೋರಾಗ್ತಿದೆ.

 

ಕಳೆದ ರಾತ್ರಿ ಚನ್ನರಾಯಪಟ್ಟಣ ತಾಲೂಕು ಎ.ಕಾಳೇನಹಳ್ಳಿಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರು ಬಡಿದಾಡಿಕೊಂಡಿದ್ದಾರೆ. ಈ ವೇಳೆ ದಂಡಿಗನಹಳ್ಳಿ ಜಿ.ಪಂ.ಕ್ಷೇತ್ರದ ಕಾಂಗ್ರೆಸ್​ ಸದಸ್ಯ ಶ್ರೇಯಸ್ ಪಟೇಲ್ ಕಾರಿನ ಮೇಲೆ ಕೆಲವರು ಕಲ್ಲು ತೂರಿದ್ದಾರೆ. ಪ್ರಚಾರ ಮಾಡದಂತೆ ತಡೆದಿದ್ದಾರೆ. ಗ್ರಾಮದ ಉಮೇಶ್ ಎಂಬುವರ ಮನೆ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಇದ್ರಿಂದ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿತ್ತು. ಕೂಡ್ಲೇ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಸ್ವತಃ ಪೊಲೀಸ್​ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ರು. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.