ಪ್ರಯಾಣಿಕರ ಸಮೇತ ಹೈಜಾಕ್ ಆಯ್ತು ಬಸ್- ಇದು ರೀಲ್ ಅಲ್ಲ ರಿಯಲ್ ಸ್ಟೋರಿ

 

ಫೈನಾನ್ಸ್ ಗಲಾಟೆ ಸಂಬಂಧ ಪೊಲೀಸರ ಸೋಗಿನಲ್ಲಿ ಬಸ್ ಹೈಜಾಕ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ ರಾತ್ರಿ ಬೆಂಗಳೂರಿನಿಂದ ಕೇರಳದ ಕಣ್ಣೂರಿಗೆ ಹೊರಟಿದ್ದ ಲಾಮಾ ಟ್ರಾವೆಲ್ಸ್ ನ ಬಸ್ ನ್ನು ಮೈಸೂರು ರಸ್ತೆಯ ಆರ್ ವಿ ಕಾಲೇಜು ಬಳಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ಮಾಡಿ ಪ್ರಯಾಣಿಕರ ಸಮೇತ ಬಸ್ ತೆಗೆದುಕೊಂಡು ಹೋಗಿದ್ದರು. ಹೀಗೆ ಬಸ್ ನ್ನು ಹೈಜಾಕ್ ಮಾಡಿದ ದುಷ್ಕರ್ಮಿಗಳು ನಗರದ ಹೊರವಲಯದ ಪಟ್ಟಣಗೆರೆ ಬಳಿಯ ಶೆಡ್ ಒಂದರಲ್ಲಿ ಹಾಕಿದ್ರು. ಇದ್ರಿಂದ ಗಾಬರಿಯಾದ ಪ್ರಯಾಣಿಕರು ಪೊಲೀಸ್ ಕಂಟ್ರೋಲ್ಬರೂಂ ಗೆ ಕರೆ ಮಾಡಿ ವಿಷ್ಯಾ ತಿಳಿಸಿದ್ರು. ತಕ್ಷಣ ಕಾರ್ಯ ಪ್ರವೃತ್ತರಾದ ರಾಜ ರಾಜೇಶ್ವರಿ ನಗರ ಪೊಲೀಸ್ರು ಹೋಗಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಸದ್ಯ ಮೂವರು ಆರೋಪಿಗಳು ಗೊಡಾನ್ ನಲ್ಲೆ ಸಿಕ್ಕಿ ಬಿದ್ದಿದ್ದಾರೆ. ನಾಲ್ವರು ಪರಾರಿಯಾಗಿದ್ದು ಪೊಲೀಸ್ರು ಹುಡುಕಾಟ ನಡೆಸಿದ್ದಾರೆ.

ಲಾಮಾ ಟ್ರಾವೆಲ್ಸ್ ನ ಮಾಲೀಕ ನೌಶದ್ ಎಂಬಾತ ಬೆಂಗಳೂರಿನ ಎಂ ಜಿ ರಸ್ತೆಯ ಫೈನಾನ್ಸ್ ಕಂಪನಿಯಿಂದ ಸಾಲ ಪಡೆದಿದ್ದ. ಇದೇ ವಿಚಾರವಾಗಿ ನೌಶದ್ ಗೆ ಫೈನಾನ್ಸ್ ಕಂಪನಿ ಹಣ ಕಟ್ಟುವಂತೆ ನಾಲ್ಕೈದು ಬಾರಿ ಸೂಚನೆ ನೀಡಿದ್ರು. ಆದ್ರೆ ನೌಶದ್ ಹಣ ಪಡೆದ ನಂತರ ಸರಿಯಾಗಿ ಕಂತುಗಳನ್ನು ಕಟ್ಟಿರಲಿಲ್ಲ ಹಾಗೂ ಫೈನಾನ್ಸ್ ಕಂಪನಿಯವರಿಗೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲವಂತೆ. ಇದ್ರಿಂದಾಗಿ ಕಪನಿ ಬಸ್ ನ್ನು ಸೀಜ್ ಮಾಡುವಂತೆ ಸೀಜಿಂಗ್ ಟೀಂ ಗೆ ಸೂಚನೆ ನೀಡಿತ್ತು.
ಹೀಗಾಗಿ ಕಳೆದ ರಾತ್ರಿ ಫೈನಾನ್ಸ್​​ ಕಡೆಯವರು ಗಾಡಿ ಸೀಜಿಂಗ್ ಮಾಡುವ ಬದಲು ಕಿಡ್ನಾಪ್ ಮಾಡಿದರು. ಎನ್ನಲಾಗಿದೆ. ಆದ್ರೆ ಪ್ರಯಾಣಿಕರ ಸಮೇತ ಬಸ್ ನ್ನು ಹೈಜಾಕ್ ಮಾಡಿ ಆಕ್ರಮ ಬಂಧನದಲ್ಲಿಟ್ಟಿದ್ದರಿಂದ ಸೀಜ್ ಮಾಡಿದವರ ವಿರುದ್ದ ಆಕ್ರಮ ಬಂಧನದಡಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಹೆಚ್ಚಿನ ತನಿಖೆ ನಡೆಸ್ತಾ ಇದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here