ಇಲ್ಲಿ ನಾಯಿಗೂ ನಡೆಯಿತು ಅಂತ್ಯಸಂಸ್ಕಾರ!

 

ಮಾನವೀಯತೆಯೇ ಮರೆಯಾಗ್ತಿರೋ ಈ ಕಾಲದಲ್ಲಿ ಮನುಷ್ಯರಿಗೆ ಬೆಲೆ ಇಲ್ಲದಂತಾಗಿದೆ. ಹೀಗಿರುವಾಗ ಪ್ರಾಣಿ-ಪಕ್ಷಿಗಳ ಪಾಡಂತೂ ದೇವರಿಗೆ ಪ್ರೀತಿ. ಆದರೇ ಇಲ್ಲೊಬ್ಬರು ಮಾತ್ರ ತಮ್ಮ ಮುದ್ದಿನ ನಾಯಿಗೆ ಸಾವಿನ ನಂತರವೂ ತಮ್ಮ ಪ್ರೀತಿ-ಆದರ ತೋರಿದ್ದು, ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ ಮಾಡಿ ಗೌರವ ಸಲ್ಲಿಸಿದ್ದಾರೆ.

ಹುಬ್ಬಳ್ಳಿಯ ಹೊಸೂರಿನ ಗಣೇಶ್ ಗಾಯವಾಡ ಎಂಬುವವರು ಕಳೆದ 15 ವರ್ಷದಿಂದ ಚಿಂಟು ಎಂಬ ನಾಯಿಯನ್ನು ಸಾಕಿದ್ರು. ಆದರೇ ಆ ನಾಯಿ ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದೆ. ಮನೆಮಗನಂತಿದ್ದ ನಾಯಿ ಸಾವಿನಿಂದ ನೊಂದ ಗಣೇಶ್​ ನಾಯಿಗೆ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ.
ಅಷ್ಟೇ ಅಲ್ಲ, ಮನುಷ್ಯರಿಗೆ ಮಾಡುವಂತೆಯೇ ಅಂತ್ಯಸಂಸ್ಕಾರದ ವಿಧಿವಿಧಾನ ನೆರವೇರಿಸಿ ಪ್ರೀತಿಯ ನಾಯಿಗೆ ಅಂತಿಮ ವಿದಾಯ ಹೇಳಿದ್ದಾರೆ. ಇದೀಗ ಗಣೇಶ್ ಅವರ ಈ ಪ್ರಾಣಿ ಪ್ರೀತಿ ಜನರ ಶ್ಲಾಘನೆಗೆ ಕಾರಣವಾಗಿದೆ.