ಈಗ ಅಂತಿಮ ಯಾತ್ರೆಗೆ ಬೇಕಾಗುವ ಎಲ್ಲಾ ಸಾಮಗ್ರಿಗಳೂ ಆನ್ ಲೈನ್ ನಲ್ಲಿ ಲಭ್ಯ!!ಅಯ್ಯೋ.. ಇದನ್ನೆಲ್ಲ ಇಲ್ಲೂ ಮಾರ್ತಾರಾ ಅಂದ್ಕೊಂಡ್ರಾ.. ಈ ಸುದ್ದಿ ಓದಿ..

ಆನ್ ಲೈನ್ ನಲ್ಲಿ ಏನು ಸಿಗುತ್ತೆ ಏನಿಲ್ಲಾ ಅಂತ ಯೋಚಿಸಬೇಡಿ. ಮನುಷ್ಯನಿಗೆ ಬೇಕಾಗುವ ಎಲ್ಲಾ ಸಾಮಗ್ರಿಗಳೂ ಈಗ ಆನ್ ಲೈನ್ ನಲ್ಲಿ ಲಭ್ಯ. ಅದನ್ನ ಹುಡುಕಿ ನೀವೆಲ್ಲೂ ಹೋಗಬೇಕಾಗಿಲ್ಲ. ನಿಮ್ಮ ಮನೆ ಬಾಗಿಲಿಗೇ ತಂದು ಕೊಡುತ್ತಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಅಂದರೆ ಅಂತಿಮ ವಿಧಿ ವಿಧಾನದ ಸಾಮಗ್ರಿಗಳನ್ನೊಳಗೊಂಡ ಪೆಟ್ಟಿಗೆ.

ಇದೇನಪ್ಪಾ ಈ ಸುದ್ದಿ? ಇಂತಹ ವಸ್ತುಗಳೂ ಆನ್ ಲೈನ್ ನಲ್ಲಿ ಸಿಗುತ್ತಾ ಅಂತೀರಾ!! ನಿಜ ಕಣ್ರಿ. ಈ ವಸ್ತುಗಳೂ ಈಗ ಆನ್ ಲೈನ್ ನಲ್ಲಿ ಲಭ್ಯ.

ಹೌದು. ಸರ್ವಪೂಜಾ ಅನ್ನುವ ಒಂದು ಸಂಸ್ಥೆ ಮನುಷ್ಯ ಸತ್ತಾಗ ಆತನ ಅಂತಿಮ ಕಾರ್ಯಕ್ಕೆ ಬೇಕಾಗುವ ಎಲ್ಲಾ ಸಾಮಾನುಗಳನ್ನೂ ಪಟ್ಟಿ ಮಾಡಿ ಅದನ್ನ ಅಮೇಜಾನ್ ಸಂಸ್ಥೆಯ ಮೂಲಕ ಮಾರಾಟ ಮಾಡುತ್ತಿದೆ. ಈ ಸಾಮಗ್ರಿಗಳು ಹಿಂದೂ ಸಂಪ್ರದಾಯದಂತೆ ಮಾಡುವ ಅಂತಿಮ ಕ್ರಿಯೆಗೆ ಅನುಕೂಲವಾಗಲಿದೆ. ಇದನ್ನು Sarvapooja Final Rites Antim Kriya Kit – Box ಎಂದು ಮಾರಾಟ ಮಾಡಲಾಗುತ್ತಿದ್ದು ಇದರ ಬೆಲೆಯನ್ನು ಸದ್ಯ ರೂ.2950/-ಗೆ ನಿಗದಿಪಡಿಸಿದ್ದು ಸಾಗಣೆ ವೆಚ್ಚ ಉಚಿತ ಎಂದು ತಿಳಿಸಲಾಗಿದೆ.

ಹಾಗಾದರೆ ಈ ಕಿಟ್ ನಲ್ಲಿ ಏನೇನಿದೆ ಅಂತ ನೋಡಿದ್ರೆ ಬಿದಿರಿನ ಚಟ್ಟ,2 ಮಡಿಕೆ, ಬಿಳಿಬಟ್ಟೆ, ಶಾಲು, ಗೋಮೂತ್ರ, ಕರ್ಪೂರ, ಹತ್ತಿ, ಧೂಪ, ವಿಭೂತಿ, ಬಿಳಿದಾರ, ಸುಗಂಧ ದ್ರವ್ಯ, ಹಳದಿ, ಅಕ್ಕಿ,  ಚಂದನ, ಬ್ಲೇಡ್ ಸೇರಿದಂತೆ ಒಟ್ಟು 32 ವಸ್ತುಗಳು ಲಭ್ಯವಿದೆ.

ಈ ಮೊದಲು ಬೆರಣಿ ಸಹ ಅಮೇಜಾನ್ ನಲ್ಲಿ ಸಿಗುತ್ತದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಈಗ ಅದಕ್ಕೆ ಮುಂದಿನ ಭಾಗವಾಗಿ ಅಂತಿಮ ಯಾತ್ರೆಯ ಕಿಟ್ ಸಹ ಅಮೇಜಾನ್ ನಲ್ಲಿ ಸಿಗುತ್ತಿದೆ.

ಅಂದ ಹಾಗೆ ಇದನ್ನು ಈಗ ಆರ್ಡರ್ ಕೊಟ್ಟರೆ ಇನ್ನೆರಡು ದಿನದಲ್ಲಿ ಕೈಸೇರುತ್ತೆ. ಈ ವಸ್ತುಗಳನ್ನು ಯಾವಾಗ ಖರೀದಿಸಬೇಕು ಅನ್ನುವುದೇ ಮುಂದಿರುವ ಪ್ರಶ್ನೆ. ಅದನ್ನೇ ಜಾಲತಾಣಿಗರು ಕೇಳುತ್ತಿದ್ದಾರೆ.