ನನ್ನ ಮಗನಿಗೆ ಹೆಣ್ಣು ನೋಡಿ ಸ್ವಾಮೀಜಿ- ಅಂತ ಮನವಿ ಮಾಡಿದ ಶಾಸಕರ್ಯಾರು ಗೊತ್ತಾ?!

 

ad

ನಾಡಿನ ಹೆಸರಾಂತ ಉದ್ಯಮಿ ಅಶೋಕ್ ಖೇಣಿ ಸ್ವಾಮೀಜಿಯೊಬ್ಬರ ಬಳಿ ತಮ್ಮ ಮಗನಿಗೆ ಯೋಗ್ಯ ವಧು ನೋಡುವಂತೆ ಹೇಳಿ ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ. ಹೌದು ಮೈಸೂರಿನಲ್ಲಿ ಸ್ವಾಮಿಜೀ ನನ್ನ ಮಗನಿಗೆ ಒಳ್ಳೆ ಹುಡುಗಿ ನೋಡಿ ಅಂತಾ ಮಾಜಿ ಶಾಸಕ ಅಶೋಕ್ ಖೇಣಿ ಸುತ್ತೂರು ಶ್ರೀಗಳಿಗೆ ಮನವಿ ಮಾಡಿದ್ದು, ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಮೈಸೂರಿನ ಸುತ್ತೂರು ಮಠದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಶೋಕ್ ಖೇಣಿ, ಸನ್ಮಾನ ಸ್ವೀಕರಿಸಿ ಮಾತನಾಡುವಾಗ ಸ್ವಾಮೀಜಿ, ನನ್ನ ಮಗನಿಗೆ ಹುಡುಗಿ ನೋಡಿ. ನೋಡೊಕೆ ಸುಂದರವಾಗಿರಲಿ, ನಿಮ್ಮ ಆಶೀರ್ವಾದ ಇರಲಿ, ನಿಮ್ಮ ಮಠದಲ್ಲಿಯೇ ಮದುವೆ ಮಾಡ್ತೀನಿ ಅಂತಾ ಹೇಳಿದಾಗ ಅಶೋಕ್ ಖೇಣಿ ಮಾತು ಕೇಳಿ ಸುತ್ತೂರು ಶ್ರೀಗಳು ಮುಗುಳ್ನಕ್ಕರು.
ಇದೇ ಸಂದರ್ಭ ತಮ್ಮ ಸೋಲಿನ ಆತ್ಮಾವಲೋಕನ ಮಾಡಿಕೊಂಡ ಅಶೋಕ್ ಖೇಣಿ, ಸಂಸ್ಕಾರ ಇರೋ ನಮ್ಮ ಲಿಂಗಾಯತರೇ ಓಟಿಗೆ 200 ಪಡೆದು ನನ್ನನ್ನ ಸೋಲಿಸಿದರು ಅಂತಾ ಸುತ್ತೂರು ಶ್ರೀಗಳ ಮುಂದೆ ಮನದಲ್ಲಿನ ನೋವು ತೆರೆದಿಟ್ಟರು. ಇದೇ ವೇಳೆ ಶ್ರೀಗಳಿಗೆ ಮನವಿ ಮಾಡಿದ ಖೇಣಿ, ಸುತ್ತೂರು ಶ್ರೀಗಳೇ ನೀವು ಶಿಕ್ಷಣ ಅನ್ನದಾಸೋಹ ಕೊಡ್ತೀರಿ. ಇದರ ಜೊತೆಗೆ ಜನರಲ್ಲಿ ನೈತಿಕತೆ ಜಾಗೃತಿ ಕೂಡ ಮೂಡಿಸಿ ಅಂತಾ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಶಾಸಕರು ಹಾಗೂ ಸಚಿವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು. ಸುತ್ತೂರು ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯದ ಕಾರ್ಯಕ್ರಮಕ್ಕೆ ಸನ್ಮಾನಿತರು ಬಹುತೇಕರು ಗೈರು ಹಾಜರಾಗಿದ್ದರು. ಮಾಜಿ ಸಿಎಂ ಯಡಿಯೂರಪ್ಪ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಮಾಜಿ  ಸಚಿವರಾದ ಶಾಮನೂರು ಶಿವಶಂಕರಪ್ಪ, ಬಸವರಾಜ ಬೊಮ್ಮಾಯಿ, ಶಾಸಕರಾದ ನಿರಂಜನ್ ಕುಮಾರ್, ನಿಂಬಣ್ಣ, ಮಹಂತೇಶ್ ಕೌಟಗಿ ಮಠ, ವೀರಣ್ಣ ಚರಂತಿ ಮಠ , ರುದ್ರೆಗೌಡ, ಬಿಎಸ್.ಸುರೇಶ್. ವಿರುಪಾಕ್ಷಪ್ಪ ಬಳ್ಳಾರಿ. ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೇ ಬೆಳ್ಳಿ ಪ್ರಕಾಶ್, ಮುಖಂಡರಾದ ಅಲ್ಲಮ್ ವೀರಭದ್ರಪ್ಪ ಭಾಗಿಯಾಗಿದ್ದರು.