ಸಂಸದ ಪ್ರತಾಪ್ ಸಿಂಹ ವಿರುದ್ದ ಮತ್ತೊಂದು ಎಫ್ ಐ ಆರ್ !! ದುಬಾರಿಯಾದ ಫೇಸ್ ಬುಕ್ ಸ್ಟೇಟಸ್ !!

ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಾಕಾರಿ ಮತ್ತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರೋ​ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಒನಕೆ ಓಬ್ಬವ್ವ ಸೇರಿದಂತೆ ಹಲವು ವೀರವನಿತೆಯರಿಗೆ ಅವಮಾನ ಮಾಡಿ ಪ್ರತಾಪ್ ಸಿಂಹ ಸ್ಟೇಟಸ್ ಹಾಕಿದ್ದರು. ಅದು ವಿವಾದಕ್ಕೆ ಎಡೆಯಾಗಿತ್ತು. ಮಹಿಳಾ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಪ್ರತಾಪ್ ಸಿಂಹ ವಿರುದ್ದ ಪ್ರತಿಭಟನೆ ನಡೆಸಿದ್ದರು. ಪ್ರತಾಪ ಸಿಂಹ ಸ್ಟೇಟಸ್ ಅನ್ನು ಹಂಚಿಕೊಂಡ ಅಭಿಮಾನಿಗಳ ವಿರುದ್ಧವೂ ಸೈಬರ್​ ಕ್ರೈಂನಲ್ಲಿ FIR ದಾಖಲಾಗಿದೆ.

ವೀರವನಿತೆಯರ ಬಗ್ಗೆ ಅವಹೇಳನಕಾರಿ ಪೋಸ್ಟ್ ಅಪ್ಲೋಡ್ ಮಾಡಿರೋದು ದೇಶದ ಸಾಂಸ್ಕ್ರತಿಕ ಶ್ರೀಮಂತಿಕೆಯನ್ನ ಅವಹೇಳನ ಮಾಡಲಾಗಿದೆ. ಸರ್ಕಾರಿ‌ ನೌಕರರು, ಪೊಲೀಸರ ಬಗ್ಗೆಯೂ ಅವಹೇಳನ ಮಾಡಿದ್ದಾರೆ. ಪ್ರಚೋದನಕಾರಿ ಪೋಸ್ಟ್​ನಿಂದ ಸಮಾಜದ ಸ್ವಾಸ್ಥ್ಯ ನಾಶವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಆನಂದ್​ ಎಂಬುವರಿಂದ ದೂರು ದಾಖಲಾಗಿದೆ. ಐಪಿಸಿ 505,153a, 205a ಮತ್ತು IT Act 2000 ಅಡಿ ಕೇಸ್ ದಾಖಲಾಗಿದೆ.