ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಎಫ್ ಐಆರ್ !! ಸೈಟ್ ಹಗರಣದಲ್ಲಿ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ !!

 

ad

ತನ್ನ ಸರಕಾರದ ಅವಧಿಯಲ್ಲಿ ಹಲವು ದೂರುಗಳಿಂದ ಬಚಾವ್ ಆಗುತ್ತಲೇ ಬಂದ ಸಿದ್ದರಾಮಯ್ಯ, ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಕಾನೂನು ಸಂಕಷ್ಟ ಎದುರಾಗಿದೆ.ಮಾಜಿ ಸಿಎಂ ಸಿದ್ದು ವಿರುದ್ಧ ಎಫ್​ಐಆರ್​ ದಾಖಲಿಸಲು ಮೈಸೂರಿನ 2ನೇ ಪ್ರಧಾನ ಸತ್ರ ನ್ಯಾಯಾಲಯದಿಂದ ಆದೇಶ ಆದೇಶ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

25 ವರ್ಷಗಳ ಹಳೆಯ ಪ್ರಕರಣಕ್ಕೆ ಈಗ ನ್ಯಾಯಾಲಯದ ಮೂಲಕ ಮರುಜೀವ ನೀಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮೈಸೂರಿನ ವಿಜಯನಗರ 2ನೇ ಹಂತದಲ್ಲಿ ಅಕ್ರಮ ನಿವೇಶನ ಪಡೆದಿದ್ದಾರೆ. ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆ ಉಲ್ಲಂಘಿಸಿ ಪಂಚಾಯ್ತಿಯಲ್ಲಿ ಈ ಅವ್ಯವಹಾರ ನಡೆದಿದೆ ಎನ್ನಲಾಗಿದೆ.ಸಿದ್ದರಾಮಯ್ಯ ಡಿಸಿಎಂ ಆಗಿದ್ದ ವೇಳೆ ನಡೆದಿದ್ದ ಭೂ ಅಕ್ರಮ ಇದಾಗಿದೆ. ಇದಲ್ಲದೆ,
ಸಿಎಂ ಆಗಿದ್ದ ವೇಳೆ ತನ್ನ ಆಪ್ತರಿಗೆ ಇದೇ ರೀತಿ ಮತ್ತೆ ನಿವೇಶನ ಮಂಜೂರು ಮಾಡಿದ್ದಾರೆ.

ಸಿಎಂ ಸೇರಿ ನಾಲ್ಕು ಜನರ ವಿರುದ್ಧ 9 ಕ್ರಿಮಿನಲ್ ಸೆಕ್ಷನ್​ಗಳಡಿ ಕೇಸ್​ ದಾಖಲಿಸಲು ಮೈಸೂರಿನ 2ನೇ ಪ್ರಧಾನ ಸತ್ರ ನ್ಯಾಯಾಲಯದಿಂದ ಆದೇಶ ನೀಡಿದೆ.ಕೋರ್ಟ್ ಆದೇಶದಂತೆ ಲಕ್ಷ್ಮೀಪುರಂ ಪೊಲೀಸ್​ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.ಸಿದ್ದು ಸಿಎಂ ಆಗಿದ್ದಾಗಲೇ ಕಾನೂನು ಹೋರಾಟ ಪ್ರಾರಂಭವಾಗಿತ್ತು. ವಕೀಲ ಗಂಗರಾಜು ಹಾಗೂ ಸಂಗಮೇಶ್ ಎಂಬುವರು ದಾಖಲಿಸಿದ್ದ ದೂರು ಇದೀಗ   ಆಗಿದ್ದು ಮಾಜಿ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ಎದುರಾಗಿದೆ.