ಯಶ್​​​ಗೆ ಮುಗಿಯದ ಬಾಡಿಗೆ ಸಂಕಷ್ಟ! ರಾಕಿಂಗ್​ ಸ್ಟಾರ್​ ತಾಯಿ ಮೇಲೆ ದೂರು ನೀಡಿದ ಮನೆ ಮಾಲೀಕ!!

ಕೆಜಿಎಫ್​ ಯಶಸ್ಸಿನ ಅಲೆಯಲ್ಲಿ ಕೆಜಿಎಫ್​​-2 ಗೆ ಸಿದ್ಧವಾಗುತ್ತಿರುವ  ರಾಕಿಂಗ್ ಸ್ಟಾರ್ ಯಶ್​​ಗೆ ಒಂದಾದ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿವೆ. ಬಾಡಿಗೆ ಮನೆ ವಿವಾದಕ್ಕೆ ಯಶ್​ ಅಂತ್ಯ ಹಾಡಿದ್ದರೂ  ಸಂಕಷ್ಟ ಅವರನ್ನೇ ಕಾಡುತ್ತಿದೆ. ಹೌದು ಬಾಡಿಗೆ ಮನೆಯನ್ನು ವಾಸಕ್ಕೆ ಯೋಗ್ಯವಲ್ಲದ ರೀತಿ ನಾಶಪಡಿಸಿ ಮಾಲೀಕರಿಗೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ನಟ ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪ ಹಾಗೂ ಇತರರ ವಿರುದ್ಧ ಗಿರಿನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಹೈಕೋರ್ಟ್ ಆದೇಶದಂತೆ ಯಶ್ ಬೆಂಗಳೂರು ಬನಶಂಕರಿಯಲ್ಲಿನ ತಮ್ಮ ಬಾಡಿಗೆ ಮನೆ ಖಾಲಿ ಮಾಡಿ ಜೂ.7 ರಂದು ಸಂಜೆ 6.30ಕ್ಕೆ ಅವರ ವಕೀಲರ ಮೂಲಕ ಮನೆಯ ಕೀಲಿಯನ್ನು ಹಸ್ತಾಂತರಿಸಿದ್ದರು. ಆದರೆ ಮನೆ ಖಾಲಿ ಮಾಡಿಕೊಂಡು ಹೋಗುವ ವೇಳೆ ಒಳಾಂಗಣ ವಸ್ತುಗಳನ್ನು ಎತ್ತಿಕೊಂಡು ಹೋಗುವ ಜತೆಗೆ ಕೆಲವು ವಸ್ತುಗಳನ್ನು ಹಾನಿಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮನೆ ಓನರ್ ಡಾ.ವನಜಾರಿಂದ ಗಿರಿನಗರ ಪೊಲೀಸ್ ಠಾಣೆಗೆ ಐಪಿಸಿ ಕಲಂ 427 ಅಡಿ ದೂರು ದಾಖಲಿಸಿದ್ದಾರೆ.

ಎನ್ ಸಿ ಆರ್ ಮಾಡಿ ಕೋರ್ಟ್ ಅನುಮತಿ‌ ಪಡೆದು ಎಫ್ ಐಆರ್ ದಾಖಲಿಸಿರುವ ಮನೆ ಮಾಲೀಕಾರಾದ ಡಾ.ವನಜಾ ಉದ್ದೇಶ ಪೂರ್ವಕವಾಗಿ ಮನೆಗೆ ಹಾನಿ ಉಂಟು ಮಾಡಿದ್ದಾರೆ ಇದರಿಂದ 28 ಲಕ್ಷದಷ್ಟು ನಷ್ಟ ಉಂಟಾಗಿರೋದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ

ಸ್ಯಾಂಡಲ್​ವುಡ್​ನಲ್ಲಿ ರಾಕಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ನಟ ಯಶ್ ಹಲವು ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಹಲವರಿಗೆ ಮಾದರಿಯಂತಿದ್ದಾರೆ. ಆದರೆ ಈ ಬಾಡಿಗೆ ಮನೆ ವಿವಾದ ಮಾತ್ರ ಅವರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ ಅವರ ತಾಯಿ ಮೇಲೆ ಪ್ರಕರಣ ದಾಖಲಾಗಿದ್ದು, ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನನ್ನು ಕಾದುನೋಡಬೇಕಿದೆ.