TDR ಹಗರಣ ಮಹತ್ವದ ಸಾಕ್ಷ್ಯಗಳು ಬೆಂಕಿಗಾಹುತಿ! ಅನುಮಾನ ಮೂಡಿಸಿದ ಅಗ್ನಿಆಕಸ್ಮಿಕ! ತನಿಖೆ ಚುರುಕುಗೊಳಿಸಿದ ಎಸಿಬಿ!!

ರಾಜ್ಯದ ಇತಿಹಾಸದಲ್ಲೇ ಅತಿದೊಡ್ಡ ಹಗರಣವಾಗಿ 10 ಸಾವಿರ ಕೋಟಿಯ ಟಿಡಿಆರ್​  ಹಗರಣ ಮುಚ್ಚಿಹಾಕಲು ವ್ಯವಸ್ಥಿತ ಪ್ರಯತ್ನಗಳು ನಡೆದಿದ್ದು,  ಮಹದೇವಪುರದ ಬೆಳ್ಳಂದೂರಿನ ಬಿಬಿಎಂಪಿ ಕಚೇರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. TDR ದಾಖಲೆಗಳನ್ನು ಇಟ್ಟಿದ್ದ ಪಾಲಿಕೆ ಕೊಠಡಿಗೆ ಬೆಂಕಿ ಹಚ್ಚಿ ಹಗರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳು ಭಸ್ಮಗೊಳಿಸುವ ಪ್ರಯತ್ನ ನಡೆದಿದ್ದು TDR ಹಗರಣಕ್ಕೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿವೆ.

ad

TDR ಹಗರಣಕ್ಕೆ ಸಂಬಂಧಪಟ್ಟಂತೆ ನಿನ್ನೆಯಷ್ಟೇ ಇದೇ ವಲಯದ ಎಂಜಿನಿಯರ್​ಗಳಾದ ಮುರಳೀಧರ್​​​, ಸುರೇಶ್​ರನ್ನು ಎಸಿಬಿ ಯವರು ವಿಚಾರಣೆ ನಡೆಸಿದ್ದರು. ಎಂಜಿನಿಯರ್​​ಗಳ ವಿಚಾರಣೆ ಬೆನ್ನಲ್ಲೇ ಬಿಬಿಎಂಪಿ ಕಚೇರಿಗೆ ಬೆಂಕಿ ಬಿದ್ದಿರುವುದರಿಂದ ಇದು ಉದ್ದೇಶಪೂರ್ವಕ ಕೃತ್ಯ ಎಂಬ ಅನುಮಾನ ಕೂಡ ಸೃಷ್ಟಿಯಾಗಿದೆ. ದಾಖಲೆಗಳನ್ನು ಹಾಗೂ ಸಾಕ್ಷಿಗಳು ನಾಶಮಾಡುವ ದೃಷ್ಟಿಯಿಂದ ಇಬ್ಬರು ಎಂಜಿನಿಯರ್​ಗಳೇ ದಾಖಲೆಗಳಿಗೆ ಬೆಂಕಿ ಹಚ್ಚಿಸಿರುವ ಶಂಕೆ ಮೂಡಿದೆ.

ಇನ್ನು TDR ದಾಖಲೆಗಳಿಗೆ ಬೆಂಕಿ ಬೀಳುತ್ತಿದ್ದಂತೆ ಎಸಿಬಿ ತನಿಖಾಧಿಕಾರಿಗಳು ಎಚ್ಚೆತ್ತು ಕೊಂಡು ಕೂಡಲೇ ದಾಖಲೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಕಮಿಷನರ್​ಗೆ ಪತ್ರ ಬರೆದಿದ್ದಾರೆ. ಅಲ್ಲದೆ ಯಾವ ಕೊಠಡಿ ಇದೀಗಾ ಸಂಪೂರ್ಣವಾಗಿ ಸುಟ್ಟು ಕರಕಲಾಗಿದಿಯೊ ಆ ಕೊಠಡಿಯಲ್ಲಿ ಯಾವೆಲ್ಲ ಪ್ರಮುಖ ಖಡತಗಳಿದ್ದವು ಎಂಬುದರ ಬಗ್ಗೆ ಇಂಚಿಂಚು ಮಾಹಿತಿಯನ್ನ ಕೊಡಿ ಎಂದು ಪತ್ರದಲ್ಲಿ ಕೇಳಿದ್ದಾರೆ .

ಬಿಡಿಎ TDR​​ ವಿಭಾಗದ AEE ಕೃಷ್ಣಲಾಲ್ ಮೇಲೆ ದಾಳಿ ನಡೆಸಿದ ಬಳಿಕ 2010ರಿಂದ 2015ರವರೆಗೆ ನಡೆದಿರುವ ಸಾವಿರಾರು ಕೋಟಿ ಬೃಹತ್​​​ ಹಗರಣ ಬಯಲಾಗಿತ್ತು. ​​ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಕಾರ್ಪೋರೇಟರ್​ಗಳು ಹಾಗೂ ಬಿಲ್ಡರ್ಸಗಳು ಕೂಡ ಎಸಿಬಿ ತೆಕ್ಕೆಗೆ ಬೀಳುವ ಸಾಧ್ಯತೆ ಇದೆ.

ಇದೀಗಾ TDR ಹಗರಣಕ್ಕೆ ಸಂಬಂಧಿಸಿದ ದಾಖಲೆಗಳು ಇದ್ದ ಕೊಠಡಿ ಬೆಂಕಿಯ ಕೆನ್ನಾಲಿಗೆಗೆ ಗುರಿ ಆಗಿರುವುದರಿಂದ ಹಲವು ಮಹತ್ವದ ದಾಖಲೆಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ACB ಮುಖ್ಯಸ್ಥ ಚಂದ್ರಶೇಖರ್​​​ ಮತ್ತು DYSP ರವಿಕುಮಾರ್​ ನೇತೃತ್ವದಲ್ಲಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ.