ಮಂಗಳೂರಿನ ಸಿಟಿ ಮಾಲ್ ನಲ್ಲಿ ಬೆಂಕಿ : ಸಾರ್ವಜನಿಕರು ಪ್ರಾಣಪಾಯದಿಂದ ಪಾರು

ಮಂಗಳೂರಿನ ಸಿಟಿ ಮಾಲ್ ನಲ್ಲಿ ಬೆಂಕಿ :

ಗುರುವಾರ ಮಧ್ಯಾಹ್ನ ಮಂಗಳೂರಿನ KS ರಾವ್ ರೋಡ್ ನಲ್ಲಿರುವ ಸಿಟಿ ಸೆಂಟರ್ ಮಾಲ್ ನ ನಾಲ್ಕನೇ ಬೆಂಕಿ ಅವಘಡ ಸಂಭಸಿದ್ದು. ಮಂಗಳೂರಿನ ಹಂಪನಕಟ್ಟೆ ಬಳಿಯ ಸಿಟಿ ಸೆಂಟರ್ ಶಾಪಿಂಗ್ ಮಾಲ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್​ನಿಂದಾಗಿ ಫುಡ್ ಕೋರ್ಟ್ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.


ದುರಂತದಲ್ಲಿ ಶಾಪಿಂಗ್ ಮಾಲ್‌ನಲ್ಲಿ ದಟ್ಟ ಹೊಗೆ ಆವರಿಸಿಕೊಂಡಿತು. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಬೆಂಕಿ ನಂದಿಸುವಲ್ಲಿ ನಿರತರಾದರು. ಸದ್ಯ ಮಾಲ್​ನಲ್ಲಿದ್ದ ಗ್ರಾಹಕರು ಅಪಾಯದಿಂದ ಪಾರಗಿದ್ದರೆ.
ಆನಂತರ ಮೂರು ಅಗ್ನಿಶಾಮಕ ದಳ ತಂಡ ಸ್ಥಳದಲ್ಲಿ ಕಾರ್ಯಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.