ಮಾದರಿ ವಿಶ್ವವಿದ್ಯಾಲಯ ‘ಉತ್ತರ ಕರ್ನಾಟಕದ ಮೊದಲ ಪರಿಸರ ಸ್ನೇಹಿ ವಿವಿ’

ವಿದ್ಯುತ್‌ ಬಳಕೆಯನ್ನ ಸಂಪೂರ್ಣವಾಗಿ ಕುಗ್ಗಿಸಿ, ತಮ್ಮಲ್ಲಿಯೇ ಸೌರಶಕ್ತಿ ಮೂಲಕ ವಿದ್ಯುತ್‌ನ್ನ ಉತ್ದಾದಿಸಿ ಉತ್ತರ ಕರ್ನಾಟಕ ಭಾಗದ ಮೊದಲ ಪರಿಸರ ಸ್ನೇಹಿ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಕಲಬುರಗಿ ನಗರದ ಶ್ರೀ ಶರಣಬಸವ ವಿಶ್ವವಿದ್ಯಾಲಯ ಪಾತ್ರವಾಗಿದೆ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಡಿಯಲ್ಲಿ ಬರುವ ಸುಮಾರು 12 ಕಟ್ಟಡಗಳ ಮೇಲ್ಛಾವಣಿ ಮೇಲೆ ಸೋಲಾರ್ ಆಳವಡಿಸಲಾಗಿದ್ದು, ಇಡೀ ವಿಶ್ವವಿದ್ಯಾಲಯಕ್ಕೆ ಶೇಕಡಾ‌ 75 ರಷ್ಟು ವಿದ್ಯುತ್‌ನ್ನ ಪೂರೈಯಿಸುತ್ತಿದೆ.

ad

  

ಒಟ್ಟು 600 ಕಿಲೋವ್ಯಾಟ್ ವಿದ್ಯುತ್‌ನ್ನ ಉತ್ಪಾದಿಸುವ ಸಾಮಾಥ್ಯವಿದ್ದು, ಸೌರವಿದ್ಯುತ್ ಘಟಕದಿಂದ ವಿಶ್ವವಿದ್ಯಾಲಯಕ್ಕೆ ಪ್ರತಿತಿಂಗಳು ಮೂರು ಲಕ್ಷ ರೂಪಾಯಿ ಉಳಿತಾಯವಾಗುತ್ತಿದೆ. ಅಹ್ಮದಾಬಾದ್ ಮೂಲದ ಗೆನ್ಸೋಲ್ ಇಂಜಿನಿಯರಿಂಗ್ ಪ್ರಾವೈಟ್ ಲಿಮಿಟೆಡ್ ಕಂಪನಿಯು ಸುಮಾರು 2.5 ಕೋಟಿ ರೂಪಾಯಿ ವೆಚ್ಚದಲ್ಲಿ 1875 ಸೌರಫಲಕಗಳನ್ನ 10360 ಚದರ ಮೀಟರ್ ವಿಸ್ತೀರ್ಣದಲ್ಲಿ 12 ಮೇಲ್ಛಾವಣಿಗಳ ಮೇಲೆ ಅಳವಡಿಸಲಾಗಿದೆ.

ಹಸಿರು ಶಕ್ತಿ ಉತ್ಪಾದನೆಗಾಗಿ ಈ ವಿಧಾನವನ್ನ ಅಳವಡಿಸಿಕೊಂಡ ಉತ್ತರ ಕರ್ನಾಟಕದ ಏಕೈಕ ವಿಶ್ವವಿದ್ಯಾಲಯವಾಗಿದೆ. ಅಲ್ಲದೇ ವಿವಿ ಆವರಣದಲ್ಲಿ ಮಳೆ ನೀರು ಸಂಗ್ರಹ ಪದ್ದತಿಯನ್ನ ಸಹ ಅಳವಡಿಸಿಕೊಳ್ಳಲಾಗಿದ್ದು, ಕಟ್ಟಡಗಳ ಮೇಲೆ ಸಂಗ್ರಹವಾಗಿರುವ ಮಳೆ ನೀರನ್ನ ಪೈಪ್‌ಗಳ ಮೂಲಕ ತೊಟ್ಟಿಯಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಅದೆ ನೀರಿನಿಂದ ವಿವಿ ಆವರಣದಲ್ಲಿ ಸುಂದರವಾಗಿ ನಿರ್ಮಿಸಲಾಗಿರುವ ಹಚ್ಚಹಸುರ ಉದ್ಯಾನವನಕ್ಕೆ ನೀರನ್ನ ಹರಿಬಿಡಲಾಗುತ್ತದೆ. ಹೀಗೆ ಹತ್ತು ಹಲವು ಹೊಸ ಹೊಸ ಪ್ರಯತ್ನಗಳ ಮೂಲಕ ಅಭಿವೃದ್ದಿಯತ್ತ ಮುನ್ನುಗ್ಗುತ್ತಿರುವ ಶರಣಬಸವೇಶ್ವರ ವಿಶ್ವವಿದ್ಯಾಲಯ ಇದೀಗ ಸಂಪೂರ್ಣವಾಗಿ ಪರಿಸರ ಸ್ನೇಹಿ ವಿವಿಯಾಗುವತ್ತ ದಾಪುಗಾಲು ಇಡುತ್ತಿದೆ..