ಈಗ ಸಿಎಂ ಎಚ್ ಡಿ ಕುಮಾರಸ್ವಾಮಿಗೆ “ಈಗ” ಕಾಟ !! ಮುಖ್ಯಮಂತ್ರಿಯನ್ನು ಕಾಡುತ್ತಿರುವ ಆ ನೊಣದ ಹಿಂದಿರುವ ಮಾಫಿಯಾ ಏನು ಗೊತ್ತಾ ?

ಇದು ಈಗ 2 ಸಿನೇಮಾವಲ್ಲ. ಕನ್ನಡದ ಸುದೀಪ್ ಅಭಿನಯದ ಈಗ ಬಹಳ ಫೇಮಸ್ ಆಗಿತ್ತು. ಈಗ ಎಚ್ ಡಿ ಕುಮಾರಸ್ವಾಮಿಗೆ ಈಗ ಕಾಟ ದೊಡ್ಡ ಸುದ್ದಿಯಾಗಿದೆ.

ad

ನೊಣಗಳ ಕಾಟದಿಂದ ಊಟ ಮಾಡಲಾಗದಂತ ಸ್ಥಿತಿ ನಿರ್ಮಾಣವಾಗಿದೆ ದಯವಿಟ್ಟು ನಮ್ಮ ಊರಿನಲ್ಲಿರುವ ನೊಣಗಳ ಸಮಸ್ಯೆಯನ್ನು ಬಗೆಹರಿಸಿ ಎಂದು ಕೊಪ್ಪಳದಲ್ಲಿ ಸಿ.ಎಂ ಕುಮಾರಸ್ವಾಮಿ ಅಭಿಮಾನಿಯೊಬ್ಬ ತನ್ನ ಫೇಸ್ಬುಕ್ ಮುಖಾಂತರ ಮನವಿ ಮಾಡಿಕೊಂಡಿದ್ದಾನೆ.
ಕೊಪ್ಪಳದ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ನೊಣಗಳ ಹಾವಳಿಗೆ ಬೇಸತ್ತ ಸಿ.ಎಂ ಎಚ್ ಡಿಕೆ ಅಭಿಮಾನಿ ವೀರೇಶ್ ಎಂಬಾತ ತನ್ನ ಫೇಸ್ಬುಕ್ ಪೇಜ್ ಅಲ್ಲಿ ಸಿ.ಎಂ ಕುಮಾರಸ್ವಾಮಿ ಅವರಿಗೆ ಟ್ಯಾಗ್ ಮಾಡಿ ಮನವಿ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೆ ಗ್ರಾಮದ ಮನೆಯೊಂದರಲ್ಲಿ ಬಾಲಕಿ ತಟ್ಟೆಯಲ್ಲಿ ಊಟ ಮಾಡುತ್ತಿರುವಾಗ ನೊಣಗಳು ಮುತ್ತಿಕಿರುವ ವಿಡಿಯೋ ಅನ್ನು ಫೇಸ್ಬುಕ್ ಅಲ್ಲಿ ಅಪ್ಲೋಡ್ ಮಾಡಿದ್ದಾನೆ.

ಈ ಊರಿನಲ್ಲಿ ಇಷ್ಟೊಂದು ನೊಣಗಳು ಬರೋದಕ್ಕೂ ಒಂದು ಕಾರಣವಿದೆ. ಕಡೆಕೊಪ್ಪ ಗ್ರಾಮದ ಸುತ್ತಮುತ್ತ ಕೋಳಿ ಫಾರ್ಮ್ ಗಳು ಇರೋದ್ರಿಂದ ಈ ಸಮಸ್ಯೆ ಉಲ್ಬಣ ಗೊಂಡಿದೆ ಈ ಬಗ್ಗೆ ಸಾಕಷ್ಟು ಸಾರಿ ಸಂಬಂದಪಟ್ಟ ಅಧಿಕಾರಿಗಳಿಗೆ ತಿಳಿಸಿದ್ರು ಏನೂ ಪ್ರಯೋಜನೆ ಆಗಿಲ್ಲಾ. ಅದಕ್ಕೆ ಫೇಸ್ಬುಕ್ ಪೇಜ್ ಅಲ್ಲಿ ಸಿ.ಎಂ ಅವರಿಗೆ ಮನವಿ ಮಾಡಿ ಅವರಿಗೆ ಫೋಸ್ಟ್ ಮಾಡಿದ್ದಾನೆ ವೀರೇಶ್. ಇನ್ನೂ ಇದರಿಂದ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ.