ಮತ್ತೆ ಕಿಡಿಗೇಡಿತನ ಪ್ರದರ್ಶಿಸಿದ ಪಾಕ್ !! ‘ಕಮಾಂಡರ್ ಗಾಗಿ ಕಾಯುತ್ತಿದೆ ತಾಯ್ನೆಲ’..

ಭಾರತೀಯ ವಾಯುಸೇನಾ ಪಡೆಯ ವಿಂಗ್​ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ಕಪಿಮುಷ್ಠಿಯಲ್ಲಿರುವುದಾಗಿ ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಭಾರತ ಇಲ್ಲಿಯವರೆಗೂ ಇದರ ಕುರಿತಾಗಿ ಯಾವುದೇ ಬಗೆಯ ಅಧೀಕೃತ ಮಾಹಿತಿ ನೀಡಿಲ್ಲ.

ಭಾರತದ ವಿಂಗ್​ ಕಮಾಂಡರ್​​​ ಅಭಿನಂದನ್ ಸೇರಿ ಇಬ್ಬರನ್ನು​​ ವಶಕ್ಕೆ ಪಡೆದಿದ್ದು, ಬಂಧನದ ವಿಚಾರವನ್ನು ಸುದ್ದಿಗೋಷ್ಠಿಯಲ್ಲಿ ಪಾಕ್ ಜನರಲ್ ಅಬ್ದುಲ್ ಗಫೂರ್​​ ಬಹಿರಂಗ ಪಡಿಸಿದ್ದರು. ಈ ಸಂಬಂಧ ಸದ್ಯದಲ್ಲೇ ವಿಡಿಯೋ ಸಾಕ್ಷ್ಯ ರಿಲೀಸ್ ಮಾಡುವುದಾಗಿಯೂ ಗಫೂರ್​ ಹೇಳಿದ್ದರು.

“ಪಾಕಿಸ್ತಾನ ನಮ್ಮ ಸೇನಾ ನೆಲೆಗಳನ್ನ ಟಾರ್ಗೆಟ್ ಮಾಡಿಕೊಂಡಿತ್ತು. ಇಂದು ಮುಂಜಾನೆ ಪಾಕಿಸ್ತಾನ ನಮ್ಮ ಮೇಲೆ ಎಫ್-16 ಯುದ್ಧ ವಿಮಾನಗಳ ಮೂಲಕ ದಾಳಿ ಪ್ರಯತ್ನ ನಡೆಸಿತ್ತು . ಈ ಸಂದರ್ಭದಲ್ಲಿ ನಾವು ಪಾಕ್ ಯುದ್ಧ ವಿಮಾನ ಹೊಡೆದುರುಳಿಸಿದ್ದೇವೆ. ಪಾಕ್​ನ ಎಫ್-16 ಒಂದು ಯುದ್ಧ ವಿಮಾನವನ್ನ ಧ್ವಂಸ ಮಾಡಿದ್ದೇವೆ. ಈ ಕಾರ್ಯಾಚರಣೆ ವೇಳೆ ನಮ್ಮ ಒಂದು ಮಿಗ್-21 ಯುದ್ಧ ವಿಮಾನವೂ ಪತನಗೊಂಡಿದೆ . ಮಿಗ್-21ನ ವಾಯುಸೇನೆಯ ಓರ್ವ ಪೈಲಟ್ ಕಾಣೆಯಾಗಿರುವುದು ನಿಜ. ಪಾಕ್​ ತನ್ನ ವಶದಲ್ಲಿ ಭಾರತದ ಪೈಲೆಟ್ ಇರೋ ಬಗ್ಗೆ ಹೇಳುತ್ತಿದೆ. ಸಾಕ್ಷ್ಯಗಳ ಆಧಾರದ ಮೇಲೆ ನಾವು ಜೈಶ್-ಎ ಮೇಲೆ ದಾಳಿ ಮಾಡಿದ್ದೇವೆ .ನಾವು ಈ ಬಗ್ಗೆ ಪರಿಶೀಲಿಸಬೇಕಿದೆ ” ಎಂದು ವಿದೇಶಾಂಗ ವಕ್ತಾರ ರವೀಶ್​ ಕುಮಾರ್ ಐಎಎಫ್ ಮತ್ತು ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ