ಕರ್ನಾಟಕಕ್ಕೆ ರಾಹುಲ್ ಗಾಂಧಿಯನ್ನು ನಾವೇ ಆಹ್ವಾನಿಸುತ್ತೇವೆ- ಯಾಕಂದ್ರೆ ಅವರು ಕಾಲಿಟ್ಟಲಲ್ಲಿ ಕಾಂಗ್ರೆಸ್ ವಾಶೌಟ್ ಆಗುತ್ತೆ- ಡಿಸಿಎಂ ಆರ್ ಅಶೋಕ್ ಟೀಕೆ

ಕಾಂಗ್ರೆಸ್​ನ ಯುವರಾಜ ರಾಹುಲ್ ಗಾಂಧಿ ಕಾಲ್ಗುಣ ಚೆನ್ನಾಗಿದೆ. ಅವರ‌ನ್ನು ಕಾಂಗ್ರೆಸ್ ನವರು ರಾಜ್ಯಕ್ಕೆ ಆಹ್ವಾನಿಸೋದು ಬೇಡ. ಖುದ್ದು ನಾವೇ ಕರೀತಿವಿ. ಯಾಕಂದ್ರೆ ರಾಹುಲ್​ ಗಾಂಧಿ ಕಾಲಿಟ್ಟೆಲ್ಲ ಕಾಂಗ್ರೆಸ್​ ವಾಶೌಟ್​​ ಆಗುತ್ತೆ. ಹೀಗೆಂದು ಮಾಜಿಮುಖ್ಯಮಂತ್ರಿ ಆರ್.ಅಶೋಕ್​ ರಾಹುಲ್​ ಗಾಂಧಿಯನ್ನು ಟೀಕಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್​​ನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಆರ್.ಅಶೋಕ್, ರಾಹುಲ್ ಗಾಂಧಿ ಕಾಲಿಟ್ಟಲೆಲ್ಲಾ ಕಾಂಗ್ರೆಸ್ ಸೋಲುತ್ತಿದೆ. ಹೀಗಾಗಿ ಅವರು ಕಾಲಿಟ್ಟಲ್ಲೆಲ್ಲ ಕಾಂಗ್ರೆಸ್​​ನ್ನು ಫಿನಾಯಿಲ್ ಹಾಕಿ ತೊಳೆಯೋದು ಎಂದರ್ಥ. ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಪಕ್ಷ ಗುಡಿಸಿ ಗುಂಡಾಂತರ ಆಗ್ತಾ ಇದೆ. ಇದು ಬಿಜೆಪಿಗೆ ಲಾಭ ಹಾಗಾಗಿ ನಾವೇ ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಕರೀತಿವಿ. ಅವರೇ ಸ್ವತಃ ಕರ್ನಾಟಕದಲ್ಲಿ ಕಾಂಗ್ರೇಸ್ ನ್ನು ಫಿನಾಯಲ್ ಹಾಕಿ ತೊಳೆಯಲಿ ಎಂದು ವ್ಯಂಗ್ಯವಾಡಿದ್ರು.

 

ಇನ್ನು ದೇಶದಲ್ಲಿ ೧೦ ವರ್ಷಗಳ ಕಾಲ ಪ್ರಧಾನ ಮಂತ್ರಿಯಾದ ಮನಮೋಹನ್ ಸಿಂಗ್ ತುಟಿಕ್ ಪಿಟಿಕ್ ಅಂತಿರಲಿಲ್ಲ. ಹಾಗಾಗಿಯೇ ಚೀನಾ, ಪಾಕಿಸ್ತಾನ ಎಲ್ಲಾ ನೆರೆಯ ದೇಶದವರು ನಮ್ಮ ಮೇಲೆ ಅಕ್ರಮಣ ಮಾಡತಿದ್ರು. ಈಗ ನೋಡಿ ಎಲ್ಲಾ ವೈರಿ ರಾಷ್ಟ್ರಗಳು ಬಾಲ ಮುದುಡಿ ಕುಂತಿವೆ. ಇದು ನಮ್ಮ ಪ್ರಧಾನಿಯವರ ತಾಕತ್ತು ಎಂದರು. ಒಟ್ಟಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕರು ಎಗ್ಗಿಲ್ಲದೇ ಟೀಕೆ ಆರಂಭಿಸಿದ್ದು ಕಾಂಗ್ರೆಸ್ ಮುಜುಗರ ತರ್ತಿದೆ.