ಮಾಜಿಮೇಯರ್​ ಶಾಂತಕುಮಾರಿ ಪತಿ ಮೇಲೆ ಮಹಿಳೆಗೆ ವಂಚನೆ ಆರೋಪ..!

ಮಾಜಿ ಮೇಯರ್ ಶಾಂತಕುಮಾರಿ ಪತಿ ರವಿಕುಮಾರ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.

ಕನಕಪುರ ಮೂಲದ ಮಹಿಳೆಯನ್ನ ಮದುವೆಯಾಗಿ ವಂಚಿಸಿದ್ದಾರೆ ಅಂತಾ ರವಿಕುಮಾರ್​ ವಿರುದ್ಧ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಕಳೆದ 15 ವರ್ಷಗಳಿಂದ ಮಹಿಳೆ ಜತೆ ಸಂಪರ್ಕದಲ್ಲಿದ್ದ ರವಿಕುಮಾರ್​, ಮಹಿಳೆಗೆ ಹಲವು ಬಾರಿ ಹಣದ ಸಹಾಯ ಮಾಡಿದ್ದರು ಎನ್ನಲಾಗಿದೆ. ಹಣ ವಾಪಸ್​ ಕೊಡುವ ಬದಲು ಮದ್ವೆಯಾಗೋಣ ಅಂತ ಹೇಳಿ, ಪರಿಚಯವಾದ ಆರೇ ತಿಂಗಳಿಗೆ ಮದುವೆಯನ್ನೂ ಆಗಿದ್ದರಂತೆ.

 

 

ಆದ್ರೆ ಪತ್ನಿ ಶಾಂತಕುಮಾರಿ ಮೇಯರ್ ಆದ ನಂತ್ರ ವರಸೆ ಬದಲಿಸಿದ ರವಿಕುಮಾರ್​ ತನಗೇನೂ ಸಂಬಂಧವೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದಾರೆ.  ಮದುವೆ ಬಳಿಕ ಆ ಮಹಿಳೆಗೆ ಮಗುವಾಗಿದೆ. ಆದರೇ ಪತ್ನಿ ಮೇಯರ್ ಆಗುತ್ತಿದ್ದಂತೆ ರವಿಕುಮಾರ್ ಎರಡನೇ ಪತ್ನಿಯನ್ನುದೂರಮಾಡಿದ್ದಾರೆ. ಇದರಿಂದ ಬೇಸತ್ತ ಮಹಿಳೆ ರವಿಕುಮಾರ್ ವಿರುದ್ಧ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಲು ಹೋದ್ರೆ ಪೊಲೀಸ್ರು ಪ್ರಕರಣ ದಾಖಲಿಸಿಕೊಳ್ಳದೇ ವಾಪಸ್​ ಕಳುಹಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.