ಭೀಮಾತೀರದ ಎನ್ ಕೌಂಟರ್ ನಲ್ಲಿ ಮಾಜಿ ಸಚಿವ !! ಬಂಧನದ ಭೀತಿಯಲ್ಲಿ ಪೊಲೀಸ್ ಅಧಿಕಾರಿ – ಪ್ರಭಾವಿಗಳು !!

ಭೀಮಾ ತೀರದ ನಕಲಿ ಎನ್​ಕೌಂಟರ್ ಪ್ರಕರಣ ಇದೀಗ ಹೊಸ ತಿರುವನ್ನು ಪಡೆದುಕೊಂಡಿದೆ. ಸಿದ್ದರಾಮಯ್ಯ ಸರಕಾರದಲ್ಲಿ ಪ್ರಭಾವಿ ಸಚಿವನಾಗಿದ್ದ ಹಾಲಿ ಶಾಸಕ ಸೇರಿದಂತೆ ಹಲವು ಪ್ರಭಾವಿಗಳು ಈ ನಕಲಿ ಎನ್ ಕೌಂಟರ್ ಭಾಗಿಯಾಗಿದ್ದು, ಬಂಧನದ ಭೀತಿ ಎದುರಿಸುತ್ತಿದ್ದಾರೆ.ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯನ್ನು ಬಂಧಿಸಲು ಸಿಐಡಿ ಸಜ್ಜಾಗಿದ್ದು, ಪ್ರಕರಣದಲ್ಲಿ ಶಾಮೀಲಾಗಿರುವ ಮಾಜಿ ಮಂತ್ರಿ ಬಂಧನಕ್ಕೂ ಬಲೆ ಬೀಸಲಾಗಿದೆ.ಪೊಲೀಸ್ ಇಲಾಖೆಯೆ ತಲೆ ತಗ್ಗಿಸುವ ಭೀಮಾತಿರದ ನಕಲಿ ಎನ್​ಕೌಂಟರ್ ಪ್ರಕರಣ.

ಮಹಾದೇವ್ ಸಾಹುಕಾರ ಭೈರಗೊಂಡನಿಂದ 5 ಕೋಟಿ ಸುಪಾರಿ ಪಡೆಯಲಾಗಿದೆ ಎಂಬ ಆರೋಪ ಇದೆ. ಸುಪಾರಿ ಪಡೆದು ವಿರೋಧಿ ಪಡೆಯ ಧರ್ಮರಾಜ್ ಮತ್ತು ಗಂಗಾಧರ ಚಡಚಣ ಹತ್ಯೆಯನ್ನು ಪೊಲೀಸರೇ ಯೋಜಿಸಿದ್ದರು. ಅದಕ್ಕಾಗಿ 5 ಕೋಟಿ ಸುಪಾರಿ ಪಡೆದುಕೊಂಡಿದ್ದ ಮಾಜಿ ಮಂತ್ರಿ, ಐಜಿಪಿ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಇದನ್ನು ಪೊಲೀಸರ ಮೂಲಕ ಜಾರಿ ಮಾಡುತ್ತಾರೆ.

 

 

ಸುಪಾರಿ ಪಡೆದ ತಂಡ ಪಿಎಸ್​ಐ ಗೋಪಾಲ್ ಹಳ್ಳೂರ್ ಮೂಲಕ ಕಾರ್ಯಾಚರಣೆ ನಡೆಸುತ್ತದೆ. ಮೊದಲು ಇಬ್ಬರನ್ನು ಬಂಧಿಸಿದ ಸಬ್ ಇನ್ಸ್​ಪೆಕ್ಟರ್​ ನಂತರ ಕೊಂಕಣಗಾಂವ್ ಬಳಿ ಧರ್ಮರಾಜ್ ಚಡಚಣ ನಕಲಿ ಎನ್​​ಕೌಂಟರ್​ನಲ್ಲಿ ಹತ್ಯೆ ನಡೆಸುತ್ತದೆ.  ನ್ನು 2017ರ ಅ.30ರಂದು ಮಹಾದೇವ್​ ಸಾಹುಕಾರನಿಗೆ ಸಬ್ ಇನ್ಸ್ ಸ್ಪೆಕ್ಟರ್ ಒಪ್ಪಿಸುತ್ತಾರೆ. ಗಂಗಾಧರ ಚಡಚಣನನ್ನು ಚಿತ್ರಹಿಂಸೆ ನೀಡಿ ತುಂಡುತುಂಡು ಮಾಡಿ ಭೀಮಾತೀರದ ಅಂಗರಕಿ ಬ್ಯಾರೇಜ್​ಗೆ ಮಹಾದೇವ್​ ಸಾಹುಕಾರನ ಗ್ಯಾಂಗ್ ಎಸೆದು ಬಿಡುತ್ತದೆ.ಪ್ರಕರಣದ ತನಿಖೆ ನಡೆಸಿದ ಐಜಿಪಿ ಅಲೋಕ್ಕುಮಾರ್​ಪ್ರಕರಣರಕ್ಕೆ ಸ್ಪೋಟಕ ತಿರುವು ನೀಡುತ್ತಾರೆ.

ಎಸ್​ಐ ಗೋಪಾಲ್ ಹಳ್ಳೂರ್ ಪೇದೆಗಳಾದ ಸಿದ್ದಾರೂಢ, ಚಂದ್ರಶೇಖರ್, ಗೆದ್ದಪ್ಪ ಬಂಧನವಾಗುತ್ತದೆ. ನನಗೆ ಖುದ್ದು ಆಗಿನ ಐಜಿಪಿ 35 ಲಕ್ಷ ಹಣ ನೀಡಿದ್ದರೆಂದು ವಿಡಿಯೋ ಸಾಕ್ಸ್ಯದಲ್ಲಿ ಸಬ್​ ಇನ್ಸ್​ಪೆಕ್ಟರ್​ ಹಳ್ಳೂರ್ ತನಿಖೆಯ ವೇಳೆಯ ಒಪ್ಪಿಕೊಳ್ಳುತ್ತಾರೆ. ಇಂದು ಐಪಿಎಸ್ ಅಧಿಕಾರಿ ಬಂಧನಕ್ಕೆ ಸಿಐಡಿ ಸಜ್ಜಾಗಿದ್ದು, ವಿಜಯಪುರಕ್ಕೆ ಸಿಐಡಿ ಎಡಿಜಿಪಿ ಹಾಗೂ ಖಡಕ್ ಐಪಿಎಸ್ ಅಧಿಕಾರಿ ಚರಣ್ ರೆಡ್ಡಿ ಆಗಮಿಸಿದ್ದಾರೆ. ಇದೇ ವೇಳೆ ಸುಪಾರಿ ಪಡೆದ ಮಾಜಿ ಮಂತ್ರಿ ಬಂಧನಕ್ಕೂ ಸಿಐಡಿ ಟೀಂ ಸಜ್ಜಾಗಿದೆ.ಎದುರಾಳಿ ಗ್ಯಾಂಗ್​ನಿಂದ ಸುಪಾರಿ ಪಡೆದು ಮತ್ತೊಬ್ಬನನ್ನು ಬಂಧಿಸಿ ಗ್ಯಾಂಗ್​ಗೆ ಒಪ್ಪಿಸಿದ್ದು ಇಡೀ ರಾಜ್ಯ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವ ಪ್ರಕರಣವಿದು. ಅಂದಿನ ಸರ್ಕಲ್ ಇನ್ಸ್​ಪೆಕ್ಟರ್​ ಎಂ.ಬಿ ಅಸೂಡೆ ಬಂಧನಕ್ಕೂ ಸಿಐಡಿ ಬಲೆ ಬೀಸಿದೆ.