ರೋಹಿಣಿ ವಿರುದ್ಧ ಗುಡುಗಿದ ಮಾಜಿ ಸಚಿವ ಶಿವರಾಂ- ರೋಹಿಣಿ ಪರ ನಿಂತ ಎಚ್​ಡಿಡಿ- ಮುಂದುವರಿದ ಪರ-ವಿರೋಧ ಟೀಕೆ

ಹಾಸನ ಜಿಲ್ಲಾಧಿಕಾರಿ ಹಾಗೂ ದಕ್ಷ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ ಮತ್ತಷ್ಟು ತೀವ್ರಗೊಳ್ಳುತ್ತಲೇ ಇದೆ. ರೋಹಿಣಿ ವರ್ಗಾವಣೆ ವಿರೋಧಿಸಿ ಮಾಜಿ ಪ್ರಧಾನಿ ಎಚ್​ಡಿಡಿ ರೋಹಿಣಿ ಪರ ಮಾತನಾಡಿದ ಬೆನ್ನಲ್ಲೇ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಮಾಜಿ ಸಚಿವ ಬಿ.ಶಿವರಾಂ ವಾಗ್ದಾಳಿ ನಡೆಸಿದ್ದು, ರೋಹಿಣಿ ಅವಧಿಯಲ್ಲಿ ದಲಿತರ ಮೇಲೆ ದೌರ್ಜನ್ಯ ನಡೆದಿದೆ.

adಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಒಂದೇ ಒಂದು ಜನತಾದರ್ಶನ ಮಾಡಿಲ್ಲ, ಇವರು ದಕ್ಷರಾ? ಪ್ರಾಮಾಣಿಕರಾ? ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಚಿವ ಬಿ.ಶಿವರಾಂ ಸಚಿವ ಎ.ಮಂಜು ಮೇಲೆ ಒತ್ತಡ ಹಾಕಿ ರೋಹಿಣಿ ಸಿಂಧೂರ ವರ್ಗಾವಣೆ ಮಾಡಿಸಿರೋದು ಶಿವರಾಂ ಆಡಿಯೋ ಮೂಲಕ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡು ಮಾತನಾಡಿದ ಮಾಜಿ ಸಚಿವ ಬಿ.ಶಿವರಾಂ, ಮಸ್ತಕಾಭಿಷೇಕ ಕೆಲಸ ಮಾಡುತ್ತಿರುವವರು ಇವರು ಒಬ್ಬರೇನಾ? ಇವರ ವಿರುದ್ಧ ತನಿಖೆಗೆ ಗೃಹ ಸಚಿವರಿಗೆ ದಾಖಲೆ ನೀಡುವೆ, ಇಂಥ ಡಿಸಿಯನ್ನು ವರ್ಗ ಮಾಡಿದ್ದು ಸರಿಯಾಗಿದೆ ಎಂದರು. ಹಾಸನದಲ್ಲಿ ಬಿ.ಶಿವರಾಂ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ್ರು, ಹಾಸನ ಜಿಲ್ಲೆಯಲ್ಲಿ ಅಭಿವೃದ್ಧಿ ಕುಂಠಿಕವಾಗೋಕೆ ಈ ಸರ್ಕಾರವೇ ಕಾರಣ. ಈ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಜಿಲ್ಲಾಧಿಕಾರಿಗಳ ವರ್ಗವಾಗಿದೆ. ಸದ್ಯ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಇರೋದ್ರಿಂದ ವರ್ಗಾವಣೆ ಸರಿಯಲ್ಲ.

ಕೆಆರ್ ಡಿಸಿಎಲ್ ಗೆ ಕೆಲಸ ಕೊಡಿಸಲು ಸಚಿವರಿಗೇಕೆ ಅಷ್ಟೊಂದು ಆಸಕ್ತಿ ಯಾಕೆ ? ಚುನಾವಣೆ ಆಯೋಗದ ಸ್ಪಷ್ಟ ನಿರ್ದೇಶನವಿದ್ರೂ ಏಕಾಏಕಿ ವರ್ಗ ಮಾಡಿಸಿದ್ದೇಕೆ.. ? ಹಾಸನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪ್ರಶ್ನಿಸಿದ್ದಾರೆ. ಅಲ್ಲದೇ ರೋಹಿಣಿ ಸಿಂಧೂರಿ ನಮ್ಮ ಪರ ಯಾವುದೇ ಕೆಲಸ ಮಾಡಿಕೊಟ್ಟಿಲ್ಲ. ಅವರ ಬಗ್ಗೆ ನಮಗೇನು ವಿಶೇಷ ಕಾಳಜಿ ಇಲ್ಲ, ಅವರ ಪರಿಚಯವೂ ನನಗಿಲ್ಲ.. ಆದ್ರೆ ಮಹಾಮಸ್ತಾಕಾಭಿಷೇಕ ಸಂದರ್ಭದಲ್ಲಿ ವರ್ಗಾವಣೆ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ ನಿಷ್ಟಾವಂತರ ವರ್ಗಾವಣೆ ನಿರಂತರವಾಗಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದಕ್ಕೆ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಕಾರಣ. ಸಿಎಂಗೆ ಏನೋ ದಾಕ್ಷಣ್ಯ ಇದೆ. ಈ ಮಂತ್ರಿಯನ್ನೇನಾದರೂ ಏಜೆಂಟ್ ಆಗಿ ಇಟ್ಟುಕೊಂಡಿದ್ದೀರಾ ಎಂದು ಹೆಚ್ಡಿಡಿ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ರೋಹಿಣಿ ಸಿಂಧೂರಿ ವರ್ಗಾವಣೆ ಸಿಎಂ ಹಾಗೂ ಎ.ಮಂಜು ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದು, ಎಚ್​ಡಿಡಿ ರಾಜ್ಯ ಸರ್ಕಾರದ ವಿರುದ್ಧ ಫುಲ್ ಗರಂ ಆಗಿರೋದಂತು ಸತ್ಯ.