ನಾನು ಎಮ್​ಎಲ್​ಎ ಅಭ್ಯರ್ಥಿ ನನ್ನ ಕಾರೇ ಚೆಕ್ ಮಾಡ್ತಿರಾ- ಪೊಲೀಸರಿಗೆ ಅವಾಜ್ ಹಾಕಿದ ಯುವಕ

ಕುಡಿದ ಮತ್ತಿನಲ್ಲಿ ಓಲಾಡುವ ಜನರು ಪೊಲೀಸರು ಎದುರಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ರೆಬೆಲ್ ಆಗೋದು ಸಾಮಾನ್ಯ ಸಂಗತಿ. ನಿನ್ನೆ ತಡರಾತ್ರಿ ಕೂಡ ಸಿಲಿಕಾನ ಸಿಟಿಯಲ್ಲಿ ಇಂತಹುದೇ ಘಟನೆಯೊಂದು ನಡೆದಿದ್ದು, ಡ್ರಿಂಕ್​ ಆ್ಯಂಡ್​ ಡ್ರೈವ್ ಪರಿಶೀಲನೆ ನಡೆಸುತ್ತಿದ್ದ ಪೊಲೀಸರಿಗೆ ಯುವಕನೊರ್ವ ತಾನು ಎಂಎಲ್​​ಎ ಮಗ ಎಂದು ಅವಾಜ್​ ಹಾಕಿದ ಘಟನೆ ನಡೆದಿದೆ.

ನಿನ್ನೆ ತಡರಾತ್ರಿ ಕಬ್ಬನ್ ಪಾರ್ಕ್ ಸಂಚಾರಿ ಪೊಲೀಸರು ಡ್ರಿಂಕ್​ ಆ್ಯಂಡ್​​ ಟ್ರೈವ್​ ಚೆಕ್ ಮಾಡುತ್ತಿದ್ದರು. ಈ ವೇಳೆ ರತನ್ ಎನ್ನುವ ಯುವಕನೊರ್ವ ಪೊಲೀಸರಿಗೆ ಕಿರಿಕ್​ ಮಾಡಿದ್ದು, ನಾನು ಮುಂದಿನ ಎಮ್​ಎಲ್​ಎ ಅಭ್ಯರ್ಥಿ ನನ್ನ ಕಾರನ್ನೇ ಚೆಕ್ ಮಾಡ್ತಿಯಾ ಎಂದು ಅವಾಜ ಹಾಕಿದ್ದಾನೆ. ಘಟನೆ ಬಳಿಕ ಪೊಲೀಸರು ರತನ್​ನ್ನು ವಶಕ್ಕೆ ಪಡೆದಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.

 

ಈ ವೇಳೆ ರತನ್​​ ಕುಡಿದಿರುವುದು ಪತ್ತೆಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ವೇಳೆ ರತನ್​ ಕೂಡ ಪೊಲೀಸರು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಬಳಿಕ ರತನ್​​ನಿಂದ ಕ್ಷಮಾಪಣೆ ಬರೆಸಿಕೊಂಡ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆಗೆ ಸಿದ್ಧತೆ ನಡೆದಿರುವಾಗಲೇ ರಾಜಕೀಯದ ಹೆಸರಿನಲ್ಲಿ ಹಾರಾಟ ಆರಂಭವಾಗಿದೆ.