ಇಂದಿನಿಂದ ಕುಮಾರಪರ್ವ ಆರಂಭ- ಸಂಜೆ 4.30 ಕ್ಕೆ 25 ನೇ ಮುಖ್ಯಮಂತ್ರಿಯಾಗಿ ಎಚ್​ಡಿಕೆ ಪದಗ್ರಹಣ!

 

ad

ಇಂದಿನಿಂದ ರಾಜ್ಯದಲ್ಲಿ ಕುಮಾರಪರ್ವ ಶುರುವಾಗಲಿದೆ. ನೂತನ ಸಿಎಂ ಆಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದು, ರಾಜ್ಯದೆಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪದಗ್ರಹಣಕ್ಕಾಗಿ ವಿಧಾನಸೌಧ ಮುಂಭಾಗದಲ್ಲಿ ಬೃಹತ್ ವೇದಿಕೆ ರೆಡಿಯಾಗಿದ್ದು, ದೇಶದ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಅಂದಾಜು 3 ಸಾವಿರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಗಣ್ಯರಿಗೆ 3 ಸಾವಿರ ಆಸನ ಸೇರಿದಂತೆ ಸುಮಾರು 15 ಸಾವಿರ ಜನರಿಗೆ ವಿಧಾನಸೌಧದ ಮುಂಭಾಗದಲ್ಲಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ರಾಜಧಾನಿ ಪೊಲೀಸರು ಕಾರ್ಯಕ್ರಮಕ್ಕೆ ಸನ್ನದ್ದವಾಗಿದ್ದು, ಬಾಂಬ್​ ನಿಷ್ಕ್ರಿಯದಳ, ಶ್ವಾನದಳ ಸೇರಿದಂತೆ ಹಲವು ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಸಂಜೆ 4.30 ರ ಶುಭ ಮುಹೂರ್ತದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದು, ಇದೇ ವೇಳೆ ಡಿಸಿಎಂ ಆಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್​ ಹಾಗೂ ಕಾಂಗ್ರೆಸ್​ನಿಂದ 21 ಮತ್ತು ಜೆಡಿಎಸ್​ನ 11 ಮಂದಿಗೆ ಮೈತ್ರಿ ಸರಕಾರದಲ್ಲಿ ಮಂತ್ರಿ ಪದವಿ ಸಿಗಲಿದೆ. ಇನ್ನು ಈ ಸಮಾರಂಭಕ್ಕೆ ಗೈರಾಗಲು ಬಿಜೆಪಿ ನಾಯಕರು ನಿರ್ಧರಿಸಿದ್ದು, ಬಿಜೆಪಿ ರಾಜ್ಯದಾದ್ಯಂತ ಕರಾಳ ದಿನಾಚರಣೆ ನಡೆಸುತ್ತಿದೆ.