ಭೀಮಾತೀರದ ಹಂತಕನ ಹತ್ಯೆ ತನಿಖೆಯ ಹಿಂದೆ ಬಿದ್ದಿರುವ ಸಿಐಡಿ. ತನಿಖೆಯ ಪ್ರಗತಿಯಲ್ಲಿ ಏನೇನಾಯ್ತು?

ನಿಗೂಢವಾಗಿ ಹತ್ಯೆಯಾದ ಭೀಮಾತೀರದ ಹಂತಕ ಗಂಗಾಧರ ಚಡಚಣ ಪ್ರಕರಣದ ಹಿಂದೆ ಬಿದ್ದಿರುವ ಸಿಐಡಿ ತಂಡ ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಅಜ್ಞಾತ ಸ್ಥಳದಿಂದ ಬಿಟಿವಿಗೆ ಧರ್ಮರಾಜ್ ತಾಯಿ ವಿಮಲಾಬಾಯಿ ಚಡಚಣ ತನ್ನ ಮೂವರು ಮಕ್ಕಳು ಹಾಗೂ ಇಬ್ಬರು ಸಂಬಂಧಿಗಳ ಹತ್ಯೆಯಲ್ಲಿ ಭೀಮಾತೀರದ ಹಂತಕ ಮಹದೇವ ಸಾಹುಕಾರನ ಕೈವಾಡವಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…

ad

ಭೀಮಾತೀರದ ಹಂತಕ ಗಂಗಾಧರ ಚಡಚಣ ನಿಗೂಢ ಹತ್ಯೆ ಪ್ರಕರಣ ಮತ್ತಷ್ಟು ಚುರುಕುಗೊಂಡಿದೆ. ನಿನ್ನೆ ರಾತ್ರಿಯಿಂದ ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆಯಲ್ಲಿ ಆರು ಜನ್ರ ಆರೋಪಿಗಳನ್ನು ಸಕತ್ ಡ್ರಿಲ್ ಮಾಡಿದ್ದಾರೆ. ಇನ್ನು ಡ್ರಿಲ್ ನಲ್ಲಿ ಆಗಿನ ಝಳಕಿ ಪಿಎಸ್ ಐ ಆಗಿದ್ದ ಸುರೇಶ ಗಡ್ಡಿ ಕೂಡ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಬಂಧಿತ ಆರೋಪಿ ಪಿಎಸ್ ಐ ಗೋಪಾಲ ಹಳ್ಳೂರು ಬಹಿರಂಗ ಪಡಿಸಿದ್ದಾರೆ. ಗಂಗಾಧರನ ರುಂಡವಿಲ್ಲದ ಮುಂಡ ಹಿಂಗಣಿ ಬ್ಯಾರೇಜ್ ನಲ್ಲಿ ಪತ್ತೆಯಾದಾಗ ಅದನ್ನು ಹಿಂಗಣಿ ಬ್ಯಾರೇಜ್ ನಲ್ಲಿ ಮುಂದೆ ಹೋಗವಂತೆ ಮಾಡಿದ್ದಾರೆಂದು ಗೋಪಾಲ ಹಳ್ಳೂರು ಹೇಳಿಕೆಯಾಗಿದೆ. ಈ ಪ್ರಕರಣದಲ್ಲಿ ಈಗಿನ ವಿಜಯಪುರದ ಗ್ರಾಮೀಣ ಪಿಎಸ್ ಐ ಆಗಿರುವ ಸುರೇಶ ಗಡ್ಡಿ ವಿಚಾರಣೆ ಮಾಡುವ ಸಾಧ್ಯತೆಗಳಿವೆ…

ಇತ್ತ ಸಿಐಡಿ ಎಸ್ಪಿ ಆನಂದಕುಮಾರ್ ನೇತೃತ್ವದ ಸಿಐಡಿ ತಂಡ ಮೂವರು ಆರೋಪಿಗಳನ್ನು ವಿಜಯಪುರದ ಆಲಮಟ್ಟಿ ಪ್ರವಾಸಿ ಮಂದಿರದಲ್ಲಿದಲ್ಲಿಟ್ಟು ಡ್ರಿಲ್ ಮಾಡ್ತಾ ಇದ್ದಾರೆ. ಒಂದು ಕಡೆಗೆ ಪಿಎಸ್ ಐ ಗೋಪಾಲ ಹಳ್ಳೂರ ಹಾಗೂ ಹನುಮಂತ ಪೂಜಾರು ಮತ್ತು ಮತ್ತೊಂದು ಕಡೆಗೆ ಮೂವರು ಪೇದೆ, ಸಿದ್ದಗೊಂಡನಿಗೆ ವಿಚಾರಣೆ ನಡೆಸಿದ್ದಾರೆ. ಈ ಮಧ್ಯದಲ್ಲಿ ಗಂಗಾಧರ ಚಡಚಣ ತಾಯಿ ವಿಮಲಾಬಾಯಿ ಭೀಮಾತೀರದ ಹಂತಕ ಮಹದೇವ ಸಾಹುಕಾರನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನನ್ನ ಮೂರು ಮಕ್ಕಳಾದ ಶಾಂತಪ್ಪ, ಧರ್ಮರಾಜ್, ಗಂಗಾಧರ ಚಡಚಣ ಹತ್ಯೆ ಹಾಗೂ ಸಂಬಂಧಿಗಳಾದ ಶ್ರೀಶೈಲ್ ಚಡಚಣ ಹಾಗೂ ಅಂಬಾಜಿ ಹತ್ಯೆಯಲ್ಲಿ ಸಾಹುಕಾರ ಹಾಗೂ ಹನುಮಂತ ಪೂಜಾರಿ ಕೈವಾಡವಿದೆ ಎಂದು ಹೇಳಿದ್ದಾರೆ. ಅಲ್ಲದೆ, ಮಹದೇವ ಸಾಹುಕಾರ ಹಾಗೂ ಧರ್ಮರಾಜ್ ನಡುವೆ ಒಪ್ಪಂದ ಮಾಡಿಸಲು ಸ್ವತಃ ಬಂಧಿತ ಆರೋಪಿಯಾಗಿರುವ ಪಿಎಸ್ ಐ ಗೋಪಾಲ ಹಳ್ಳೂರು ಮುಂದಾಗಿದ್ರು ಎಂದು ವಿಮಲಾಬಾಯಿ ಹೇಳಿದ್ದಾರೆ…

ಇತ್ತ ಸಿಐಡಿ ತನಿಖೆ ಚುರುಕುಗೊಂಡಿದ್ದರೇ, ಮತ್ತೊಂದು ಕಡೆಗೆ ಸಿಐಡಿ ಕಸ್ಟಡಿಯಲ್ಲಿರುವ ಆರೋಪಿಗಳು ದಿನಕ್ಕೊಂದು ವಿಚಾರಣೆಯಲ್ಲಿ ಹಲವು ಮಾಹಿತಿಗಳು ಬಹಿರಂಗ ಮಾಡ್ತಾ ಇದ್ದಾರೆ. ಇನ್ನು ಪರಾರಿಯಾಗಿರುವ ಮಹದೇವ ಸಾಹುಕಾರನ ಬಂಧನದ್ಮೇಲೆ ಇನ್ನಷ್ಟು ಸ್ಪೋಟಕ್ ಮಾಹಿತಿ ಹೊರಬರಲಿದೆ. ಒಟ್ಟಿನಲ್ಲಿ ಸಾಹುಕಾರನ ಬಂಧನದ ನಂತರ ಗಂಗಧಾರ ಚಡಚಣ ಹತ್ಯೆಯ ಭಯಾನಕರ ಸತ್ಯಗಳು ಬರುವಲ್ಲಿ ಎರಡು ಮಾತಿಲ್ಲ…