ಗಾಂಜಾ ಖರೀದಿಸಲು ಆತ ಏನು ಮಾಡ್ತಿದ್ದ ಗೊತ್ತಾ?

adಆ ಊರಿನ ಮನೆಗಳಲ್ಲಿ ನಿಲ್ಲಿಸಿದ ಸ್ಥಳದಲ್ಲೇ ಬೈಕ್​ಗಳು ಮಾಯವಾಗುತ್ತಿದ್ದವು. ಆದರೇ ಹೇಗೆ ಕಳ್ಳತನ ಆಗುತ್ತೆ ಅನ್ನೋದೆ ಜನರಿಗೆ ಗೊತ್ತಾಗ್ತಿರಲಿಲ್ಲ. ಇದರಿಂದ ಬೇಸತ್ತ ಜನರು ಬೈಕ್​ ಕದಿಯೋರ್ಯಾರು ಅನ್ನೋದರ ಮೇಲೆ ಕಣ್ಣಿಟ್ಟಿದ್ದರು. ಕೊನೆಗೂ ಜನರ ಕೈಗೆ ಬೈಕ್​ ಕಳ್ಳ ಸಿಕ್ಕಿಬಿದ್ದಿದ್ದಾನೆ. ಹೀಗೆ ಸಿಕ್ಕಿಬಿದ್ದ ಕಳ್ಳನಿಗೆ ಜನರು ಸಖತ್ತಾಗಿಯೇ ಗೂಸಾ ನೀಡಿದ್ದಾರೆ. ವಿಜಯಪುರ ನಗರದ ಬಾಗಲಕೋಟೆ ಕ್ರಾಸ್​ ಬಳಿ ಕಳೆದ ಹಲವಾರು ದಿನಗಳಿಂದ ನಿಲ್ಲಿಸಿದ ಬೈಕ್​ಗಳು ಕಳ್ಳತನವಾಗುತ್ತಿತ್ತು. ಇಂದು ಕೂಡ ಕಳ್ಳನೊಬ್ಬ ಬೈಕ್​ ಪಾರ್ಕ್ ಮಾಡಲಾಗಿದ್ದ ಸುಜುಕಿ ಬೈಕ್​ ಕದಿಯುವ ಯತ್ನ ನಡೆಸಿದ್ದಾನೆ. ಈ ವೇಳೆ ಸಾರ್ವಜನಿಕರು ಗಮನಿಸಿದ್ದು, ಕಳ್ಳನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಕಂಬಕ್ಕೆ ಕಟ್ಟಿಹಾಕಿದ್ದಾರೆ.

ವಿಜಯರಪುರದ ಛಪ್ಪರಬಂದ ನಿವಾಸಿ ನಬಿರಸೂಲ ಹೊಟಗಿ (38) ಬೈಕ್​ ಕಳ್ಳತನಕ್ಕೆ ಯತ್ನಿಸಿದ ಹೊಡೆತ ತಿಂದ ಆರೋಪಿ. ಈತ ಗಾಂಜಾವ್ಯಸನಿಯಾಗಿದ್ದು, ತನ್ನ ಗಾಂಜಾ ಖರ್ಚಿಗಾಗಿ ಬೈಕ್​ ಕದ್ದು ಮಾರುವ ಪ್ರವೃತ್ತಿಹೊಂದಿದ್ದ. ಇದೀಗ ಗಾಂಧಿಚೌಕ್ ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.