ಕೊಡಗಿನ ಸಂತ್ರಸ್ಥರ ರಕ್ಷಣೆಗೆ ಗರುಡಾ ಪಡೆ- ಜನರ ಪ್ರಾಣ ಕಾಪಾಡಿದ ಕಮಾಂಡೋಗಳು!

ಕೊಡಗಿನಲ್ಲಿ ಮಳೆ ತಂದ ಅವಾಂತರದಿಂದ ಜನರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು ಸಂತ್ರಸ್ಥರ ರಕ್ಷಣೆ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸಂತ್ರಸ್ಥರ ರಕ್ಷಣೆಗಾಗಿ ಇದೀಗ ರಾಜ್ಯದ ಆಂತರಿಕ ಭದ್ರತೆ ಪಡೆಯ ಗರುಡ ಕಮಾಂಡೋಗಳ ತಂಡವನ್ನು ಇದೇ ಮೊದಲ ಭಾರಿಗೆ ಬಳಸಿಕೊಳ್ಳಲಾಗುತ್ತಿದೆ.

 

ಕೊಡಗಿನ ಗುಡ್ಡಗಾಡು ಪ್ರದೇಶದಲ್ಲಿ ಮನೆಯೊಂದರಲ್ಲಿ ಸಿಲುಕಿದ 94 ವರ್ಷದ ವೃದ್ದೆಯನ್ನ ಗರುಡಾ ಕಮಾಂಡೋಗಳು ರಕ್ಷಣೆ ಮಾಡಿ ನಿರಶಿತರ ತಾಣಕ್ಕೆ ಸೇರಿಸಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಯಾವುದೇ ಸ್ಟಚರ್ ವ್ಯವಸ್ಥೆ ಇಲ್ಲದಿದ್ದಾಗ ಬಿದಿರಿನ ಮರಗಳನ್ನು ಸೇರಿಸಿ ಸ್ಟಚರ್ ರೀತಿ ರೆಡಿ ಮಾಡಿ ವೃದ್ದೆಯನ್ನು 3 ಕಿ.ಮೀ ಕಮಾಂಡೋ ಎತ್ತಿಕೊಂಡು ಬಂದು ಸುರಕ್ಷಿತ ತಾಣಕ್ಕೆ ಸೇರಿಸಿದ್ದಾರೆ.

 

ಬಾಂಬ್ ಸ್ಪೋಟ, ಗಲಭೆ, ಸಂದಿಗ್ದ ಪರಿಸ್ಥಿತಿಯಲ್ಲಿ ಮಾತ್ರ ಗರುಡಾ ಕಮಾಂಡೋಗಳನ್ನು ನಿಯೋಜನೆ ಮಾಡಲಾಗುತ್ತದೆ. ಆದರೇ ಪ್ರಸ್ತುತ ಕೊಡಗಿನ ಸ್ಥಿತಿ ಅತ್ಯಂತ ಸೂಕ್ಷ್ಮವಾಗಿರೋದರಿಂದ ಜನರ ಪ್ರಾಣ, ಆಸ್ತಿ ರಕ್ಷಣೆಯಲ್ಲಿ ಗರುಡಾ ಕಮಾಂಡೋಗಳು ನಿಯೋಜನೆಯಲ್ಲಿದ್ದು 22 ಜನರನ್ನು ಇಲ್ಲಿಯವರೆಗೂ ರಕ್ಷಣೆ ಮಾಡಿ ಕಾರ್ಯಚಾರಣೆ ಮುಂದುವರೆಸಿದ್ದಾರೆ.