ರಾಜ್ಯ ಕಾಂಗ್ರೆಸ್​ ನಾಯಕರ​ ಬಂಡಾಯಕ್ಕೆ ಹೈಕಮಾಂಡ್​ ಗರಂ! ಬೆಂಗಳೂರಿನತ್ತ ಮುಖಮಾಡಿದ ಸೆಂಟ್ರಲ್​ ಟ್ರಬಲ್​ ಶೂಟರ್ಸ್​!!

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ಕಾಂಗ್ರೆಸ್ ಪಕ್ಷದ ಅತೃಪ್ತ ಶಾಸಕರು ಈಗಾಗಲೇ ಒಬ್ಬರ ನಂತರ ಮತ್ತೊಬ್ಬರು ರಾಜೀನಾಮೆ ನೀಡಲಾರಂಭಿಸಿದ್ದಾರೆ. ಅಲ್ಲದೆ ಅತೃಪ್ತರ ಮನವೊಲಿಸಲು ಮೈತ್ರಿ ಸರ್ಕಾರ ಸ್ಪೀಕರ್ ಪ್ರಯತ್ನಿಸಿದ್ದಾರೆ. ಇನ್ನೊಂದೆಡೆ ಹೈಕಮಾಂಡ್ ಆದೇಶದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಹಾಗೂ ಬಿ.ಕೆ ಹರಿಪ್ರಸಾದ್ ಇಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ad

ಬೆಂಗಳೂರಿಗೆ ಆಗಮಿಸಿ ಕೆಕೆ ಗೆಸ್ಟ್ ಹೌಸ್ ನಲ್ಲಿ ಮೈತ್ರಿ ಪಕ್ಷದ ನಾಯಕರ ಜೊತೆ ಸಭೆ ನಡೆಸಲಿದ್ದು, ಜೆಡಿಎಸ್ ನಾಯಕರಿಗಿಂತಲೂ ಮೊದಲಿಗೆ ಕಾಂಗ್ರೆಸ್ ನಾಯಕರ ಜೊತೆಗೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ಧಾರೆ ಎಂಬ ಮಾಹಿತಿ ದೊರೆತಿದೆ. ನಂತರ ಜೆಡಿಎಸ್ ನಾಯಕರೊಂದಿಗೆ ಸಭೆ ನಡೆಯಲಿದೆ.

ಈಗಾಗಲೇ ಅತೃಪ್ತ ಶಾಸಕರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡುತ್ತಿರುವುದಾಗಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಇನ್ನೂ ಅತೃಪ್ತರು ಬೆಂಗಳೂರಿಗೆ ಆಗಮಿಸುವ ಸಾಧ್ಯತೆಗಳಿದ್ದು, ಸ್ಪೀಕರ್ ಅವರು ಭೇಟಿಗೆ ಸಮಯ ನೀಡಿರುವುದರಿಂದ 2ನೇ ಬಾರಿಗೆ ನಿಯಮಗಳಿಗೆ ಅನುಗುಣವಾಗಿ ರಾಜೀನಾಮೆ ಸಲ್ಲಿಸುವ ಅವಕಾಶ ಇದೆ. ಇದೆ ವೇಳೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಅಜಾದ್ ಅತೃಪ್ತರ ಮನವೊಲಿಕೆ ಕಾರ್ಯವನ್ನು ನಡೆಸುತ್ತಾರಾ ಎಂಬ ಕುತೂಹಲ ಮೂಡಿದೆ. ಇನ್ನೂ ಬಂಡಾಯ ಶಾಸಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದೆ ಆದಲ್ಲಿ ಗುಲಾಂ ನಬಿ ಅಜಾದ್ ಅವರು 3 ದಿನಗಳ ಕಾಲ ಬೆಂಗಳೂರಿನಲ್ಲೇ ಇರಲಿದ್ದರೆನ್ನಲಾಗುತ್ತಿದೆ.

ಜೊತೆಗೆ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಹಾಗೂ ರೋಷನ್ ಬೇಗ್ ರಾಜೀನಾಮೆ ನೀಡಿರುವುದರಿಂದ ಅವರೊಂದಿಗೂ ಸಹ ಗುಲಾಂ ನಬಿ ಅಜಾದ್ ಭೇಟಿ ಮಾಡಿ ಚರ್ಚೆ ನಡೆಸಿ, ಅವರ ಮನವೊಲಿಸುವ ಪ್ರಯತ್ನಿಸಲಿದ್ದಾರೆ. ಇನ್ನೂ ಈ ಹಿಂದೆ ರಾಜೀನಾಮೆ ವಿಚಾರವಾಗಿ ಮಾತನಾಡಿರುವ ರಾಮಲಿಂಗ ರೆಡ್ಡಿಯವರು ನಾನು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ, ಸದ್ಯ ಇನ್ನೂ ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಸ್ಪೀಕರ್ ಕೇಳಿದರೆ ಮತ್ತೊಮ್ಮೆ ರಾಜೀನಾಮೆ ನೀಡುತ್ತೇನೆ ಎಂದಿದ್ದರು.