ಸ್ಯಾಂಡಲವುಡ್ ಸಾರಥಿ ದರ್ಶನಗೆ ಪ್ರೆಂಡ್ಸ್ ಕೊಟ್ಟ ಗಿಫ್ಟ್ ಏನು ಗೊತ್ತಾ ?

ಚಾಲೆಂಜಿಂಗ್ ಸ್ಟಾರ್​ ದರ್ಶನ್​ಗೆ ಸ್ನೇಹಿತರು ಅಂದ್ರೆ ಪ್ರಾಣ. ಇದನ್ನು ದರ್ಶನ ಸ್ವತಃ ಹಲವು ಸಂದರ್ಭಗಳಲ್ಲಿ ನಿರೂಪಿಸಿದ್ದಾರೆ. ಅಷ್ಟೇ ಅಲ್ಲ ಸಭೆ-ಸಮಾರಂಭಗಳಲ್ಲಿ ಹಲವು ಭಾರಿ ಹೇಳಿಕೊಂಡಿದ್ದಾರೆ.

ಪ್ರತಿವರ್ಷ ದರ್ಶನ ಸೇರಿದಂತೆ ಅವರ ಜೊತೆ ಶಾಲಾ-ಕಾಲೇಜುಗಳಲ್ಲಿ ಓದಿದವರೆಲ್ಲ ಪರಸ್ಪರ ಭೇಟಿ ಮಾಡುವ ರಿಯೂನಿಯನ್​​ ಆಚರಿಸುತ್ತಾರೆ. ಇಂತಹುದೇ ರಿಯೂನಿಯನ್​ ಸಂದರ್ಭದಲ್ಲಿ ದಚ್ಚು ಸ್ನೇಹಿತರೆಲ್ಲ ಸೇರಿ ದರ್ಶನಗೆ ಹೂವಿನ ಉಡುಗೆ ತೊಡಿಸಿದ್ದು, ಆ ಪೋಟೋಗಳಿಗ ವೈರಲ್​ ಆಗಿದೆ. ದರ್ಶನ ಹಾಗೂ ಅವರ ಸ್ನೇಹಿತರು ಪ್ರತಿವರ್ಷ ಒಂದೆಡೆ ಸೇರುತ್ತಾರೆ.

ಹೀಗೆ ರಿ ಯೂನಿಯನ್​ ನಡೆಯೋ ವೇಳೆ ಎಲ್ಲ ಸ್ನೇಹಿತರೂ ಎಲ್ಲೇ ಇದ್ದರೂ ಕಡ್ಡಾಯವಾಗಿ ಹಾಜರಾಗಬೇಕು ಎಂಬುದು ಅವರ ತಂಡ ನಿಯಮ. ಹೀಗಾಗಿ ಪ್ರತಿವರ್ಷವೂ ತುಂಬಾ ಗ್ರ್ಯಾಂಡಾಗಿ ಸ್ನೇಹಿತರ ತಂಡದ ರಿಯೂನಿಯನ್​ ಆಚರಿಸಲಾಗುತ್ತದೆ. ಈ ವರ್ಷ ಈ ರಿ ಯೂನಿಯನ್​ ಮೈಸೂರಿನಲ್ಲಿ ನಡೆದಿದ್ದು, ಅದರ ಕಲರ್​ಫುಲ್​ ಸ್ಟಿಲ್ಸ್​​ ಈಗ ಎಲ್ಲೆಡೆ ಹರಿದಾಡುತ್ತಿದೆ.

ಮೈಸೂರಿನಲ್ಲಿ ದರ್ಶನ ಅಭಿನಯದ ಯಜಮಾನ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಹೀಗಾಗಿ ಎಲ್ಲ ಸ್ನೇಹಿತರು ಅಲ್ಲೇ ಸೇರಿ ರೀಯೂನಿಯನ್ ಆಚರಿಸಿದ್ದಾರೆ. ಈ ವೇಳೆ ದರ್ಶನರನ್ನು ಸನ್ಮಾನಿಸಲು ನಿರ್ಧರಿಸಿದ ಸ್ನೇಹಿತರು ಮಾಮೂಲಿ ಶಾಲು,ಹೂವು,ವಿಭಿನ್ನವಾಗಿ ಹೂವಿನಿಂದ ಮಾಡಿದ ವಿಶೇಷ ಉಡುಗೆಯನ್ನು ತಂದು ಸ್ನೇಹಿತನನ್ನು ಅಲಂಕರಿಸಿದ್ದಾರೆ. ಸ್ನೇಹಿತರ ಪ್ರೀತಿಯಲ್ಲಿ ಮುಳುಗಿದ ದರ್ಶನ ಮುಖ ಹೊಳೆಯುತ್ತಿತ್ತು. ಈ ವೇಳೆ ದರ್ಶನ ಆಪ್ತರಾದ ಸೃಜನ ಲೊಕೇಶ್​ ಕೂಡ ಹಾಜರಿದ್ದರು.