ಹುಡುಗಿಯರೇ ಕಾರ್​ನಲ್ಲಿ ಡ್ರಾಪ್​ ತೆಗೆದುಕೊಳ್ಳೋ ಮುನ್ನ ಎಚ್ಚರ- ಡ್ರಾಪ್​ ನೆಪದಲ್ಲಿ ನಡೆಯುತ್ತೆ ದರೋಡೆ!

 

ಅವರೆಲ್ಲ ಡ್ರಾಪ್​ ಗಾಗಿ ಕಾಯೋ ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡ್ತಿದ್ದರು. ಬಳಿಕ ಕಾರ್ ನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಒಂಟಿ ಮಹಿಳೆಯರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿ ಪರಾರಿಯಾಗ್ತಿದ್ದರು. ಇಂತಹ ಖರ್ತನಾಕ ಕಳ್ಳರನ್ನು ಸಕ್ಕರೆ ನಾಡಿನ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಮೂಲದ ಗುಡ್ಡೇದಹಳ್ಳಿಯ ನಿವಾಸಿ ಬಿ.ಸೋಮಶೇಖರ್ ಬಂಧಿತ ಆರೋಪಿಯಾಗಿದ್ದು ಆರೋಪಿಯಿಂದ ಸುಮಾರು‌ ೫೦ ಲಕ್ಷ ರೂ ಮೌಲ್ಯದ ೧. ೬೫೦ ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕೃತ್ಯಕ್ಕೆ ಬಳಸಿದ ಎರಡು ಕಾರನ್ನು ಕೂಡ ಪೊಲೀಸರು ಜಪ್ತಿ ಮಾಡಿದ್ದಾರೆ.ಬಂಧಿತ ಆರೋಪಿ ಒಂಟಿ ಮಹಿಳೆಯನ್ನು ಪರಿಚಿತರಂತೆ ಮಾತನಾಡಿಸಿ ಕೊಂಡು ಕಾರಿನಲ್ಲಿ ಡ್ರಾಪ್ ಕೊಡುವುದಾಗಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ನಡೆಸುತ್ತಿದ್ದ‌. ಇತ್ತೀಚೆಗೆ ನಾಗಮಂಗಲ ಪೊಲೀಸ್ ರು ನಡೆಸಿದ ಕಾರ್ಯಾಚರಣೆ ವೇಳೆ ಈತ ರಾಜ್ಯದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು 25 ಪ್ರಕರಣಗಳಲ್ಲಿ ದರೋಡೆ ನಡೆಸಿರೋದು ಪತ್ತೆಯಾಗಿದೆ.

Avail Great Discounts on Amazon Today click here