“ಟಿಕೇಟ್ ಕೊಡಿ, ಇಲ್ಲ ವಿಷ ಕೊಡಿ”

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಮೀಸಲು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ಆಕಾಂಕ್ಷಿಯಾಗಿದ್ದ ರಾಜ್ಯ ಎಸ್ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಕೂಡ್ಲೂರು ಶ್ರೀಧರ್ ಮೂರ್ತಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿದ ಪರಿ.

ಚಾಮರಾಜನಗರದ ಪ್ರೆಸ್ ಕ್ಲಭ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕೂಡ್ಲೂರು ಶ್ರೀಧರ್ ಮೂರ್ತಿ, 15 ವರ್ಷಗಳಿಂದಲೂ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದೇನೆ.  ಕ್ಷೇತ್ರದಲ್ಲಿ ಟಿಕೇಟ್ ಆಕಾಂಕ್ಷಿಯಾಗಿದ್ದೆ, ಆದರೆ ನನಗೆ ಟಿಕೇಟ್ ಸಿಗದೆ ಅನ್ಯಾಯವಾಗಿದೆ, ಸಮೀಕ್ಷೆಯಲ್ಲಿ ನಾನೆ ಮುಂದೆ ಇದ್ದೆ, ಸಮೀಕ್ಷೆ ಮಾಡಿದ್ದಾದರೂ ಏಕೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಅವರು, ಪಕ್ಷ ವಿರೋಧ ಚಟುವಟಿಕೆ ಮಾಡಿದವರಿಗೆ ಟಿಕೇಟ್ ನೀಡಲಾಗಿದೆ.

ಮಾನ್ಯ ಯಡಿಯೂರಪ್ಪನವರೇ ಕೈ ಮುಗಿದು ಕೇಳಿಕೊಳ್ಳುತ್ತೇನೆ ನನಗೆ ಟಿಕೇಟ್ ಕೊಟ್ಟಿಲ್ಲ ನನಗೆ ವಿಷ ಕೊಡಿ, ನಾನು ಪಕ್ಷ ಬಿಟ್ಟು ಹೋಗುತ್ತೇನೆ, ಸಾಯುತ್ತೇನೆ, ಬೆಂಬಲಿಗರೊಂದಿಗೆ ಮಾತನಾಡಿ ಬಂಡಾಯ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ.

ವರದಿ: ಸುರೇಶ್ ಬಿಟಿವಿ ಚಾಮರಾಜನಗರ.