ಕಣ್ಮನ ತಣಿಸಲಿರುವ ಖಾನಾಪುರದ ಜಾತ್ರೆ – ಅಪರೂಪದ ಜಾತ್ರೆಗೆ ವಿಶೇಷ ಮೆರಗು !!

​ಕರ್ನಾಟಕ ರಾಜ್ಯದ ಗಡಿಯಲ್ಲಿರುವ ಬೆಳಗಾವಿ ಜಿಲ್ಲೆಯ ಖಾನಾಪೂರ ಪಟ್ಟಣದಲ್ಲಿ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಶ್ರೀ ಲಕ್ಷ್ಮೀದೇವಿ ಜಾತ್ರೆ ಈ ಬಾರಿ ವಿಷೇಶ ಮೆರಗು ನೀಡಲಿದೆ.

ಖಾನಾಪೂರ ವಿಧಾನಸಭಾ ಕ್ಷೇತ್ರದ ಶಾಸಕಿಯಾಗಿ ಡಾ. ಅಂಜಲಿ ಹೇಮಂತ್ ನಿಂಬಾಳಕರ್ ರವರು ಆಯ್ಕೆಯಾದ ಪ್ರಸ್ತುತ ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುತ್ತಾರೆ. ಈ ಸಂದರ್ಭದಲ್ಲಿ ಜರುಗುತ್ತಿರುವ ಜಾತ್ರೆಯಲ್ಲಿ ಭಕ್ತರ ಅನುಕೂಲಕ್ಕಾಗಿ ಡಾ. ಅಂಜಲಿ ಹೇಮಂತ್ ನಿಂಬಾಳಕರ್ ರವರು ವಿಶೇಷ ಆಸಕ್ತಿ ವಹಿಸಿ ಜಾತ್ರೆಯನ್ನು ಮತ್ತಷ್ಟು ವಿಜೃಂಭಿಸಲು ಸಕಲ ಸಿದ್ದತೆಗಳನ್ನೂ ಮಾಡಿರುತ್ತಾರೆ. ಸುಮಾರು 9 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಕೆಳಕಂಡ ಅಭಿವೃದ್ದಿ ಕಾಮಗಾರಿಗಳನ್ನು ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುತ್ತಾರೆ.

1. ಶ್ರೀ ಲಕ್ಷ್ಮೀದೇವಿ ಜಾತ್ರೆ ನಡೆಯುವ ಪ್ರದೇಶವನ್ನು ಸಂಪರ್ಕಿಸುವ ಎರಡು ಲೋಕೋಪಯೋಗಿ ಇಲಾಖೆಯ ರಸ್ತೆಗಳನ್ನು ತಕ್ಷಣ ಮಂಜೂರು ಮಾಡಿಸಿ ರೂ.3.40 ಕೋಟಿಗಳ ವೆಚ್ಚದಲ್ಲಿ ಕಾಮಗಾರಿ ಕೈಗೊಂಡು ಗುಣಮಟ್ಟದ ರಸ್ತೆಯನ್ನು ಭಕ್ತಾದಿಗಳಿಗೆ ಒದಗಿಸಿರುತ್ತಾರೆ.
2. ಖಾನಾಪೂರ ಪಟ್ಟಣದೊಳಗೆ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಲಾಗಿದೆ.
3. ಪಟ್ಟಣದ ಸುಂದರೀಕರಣಕ್ಕಾಗಿ ವಿಶೇಷ ದೀಪಗಳನ್ನು ಪಟ್ಟಣದ ರಸ್ತೆ ವಿಭಜಕದಲ್ಲಿ ಅಳವಡಿಸುವ ಕಾಮಗಾರಿ ಮತ್ತು ಚರಂಡಿ ಕಾಮಗಾರಿಗಳೂ ಚಾಲನೆಯಲ್ಲಿವೆ.
4. ಭಕ್ತಾದಿಗಳಿಗೆ ಸುಗಮ ಸಂಚಾರಕ್ಕೆ ಅನುವು ಮಾಡಲು ಫಿಶ್ ಮಾರ್ಕೆಟ್ ಮತ್ತು ತರಕಾರಿ ಮಾರುಕಟ್ಟೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸಲಾಗಿದೆ.
5. ಅನಧಿಕೃತ ರಸ್ತೆ ಅತಿಕ್ರಮಣಗಳನ್ನು ತೆರವುಗೊಳಿಸಿ ದೇವಿಯ ಮೆರವಣಿಗೆಗ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಮಾಡಲಾಗಿದೆ.
6. ಸುರಕ್ಷತೆಯ ದೃಷ್ಠಿಯಿಂದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ 27 ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
7. ಭಕ್ತಾದಿಗಳ ಸೌಲಭ್ಯಕ್ಕಾಗಿ 40 ಕುಡಿಯುವ ನೀರಿನ ಟ್ಯಾಂಕ್ ಗಳು, ಸಂಚಾರಿ(ಮೊಬೈಲ್) ಶೌಚಾಲಯ, ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್ ಗಳು, 4 ಕಡೆ ವಾಹನ ಪಾರ್ಕಿಂಗ್ ವ್ಯವಸ್ಥೆಮಾಡಲಾಗಿದೆ.