ಸಿದ್ದರಾಮಯ್ಯ ಗೆ ದೇವರೇ ಹೆದರುತ್ತಾನೆ : ಎಚ್ ಸಿ ಮಹದೇವಪ್ಪ ಗೆದ್ದಿದ್ದು ಹೇಗೆ ಗೊತ್ತಾ ? ಕೈ ದೇವರಾಟದ ಕತೆ ಬಿಚ್ಚಿಟ್ಟ ಪಿ ರಮೇಶ್ !!

ಸಿದ್ದರಾಮಯ್ಯ ಅಂತಿತ್ತಾ ಮುಖ್ಯಮಂತ್ರಿ ಅಲ್ಲ, ಅವರನ್ನು ಹತ್ತಿರದಿಂದ ಬಲ್ಲೆ, ದೇವರೇ ಸಿದ್ದರಾಮಯ್ಯಗೆ ಹೆದರುವಾಗ ರಾಹುಲ್ ಗಾಂಧಿ ಹೆದರುವುದಿಲ್ಲವೇ? ನನಗೆ ಟಿಕೆಟ್ ಸಿಗಲ್ಲ ಎನ್ನುವುದು ಖಚಿತ ವಾಗಿದ್ದು ಇಂದೇ ಪಕ್ಷಕ್ಕೆ ಗುಡ್ ಬೈ ಹೇಳಿ ಜೆಡಿಎಸ್ ಗೆ ಸೇರುತ್ತೇನೆ ಎಂದು ಸಿ ವಿ ರಾಮನ್ ನಗರ ಟಿಕೆಟ್ ಆಕಾಂಕ್ಷಿ ಪಿ ರಮೇಶ್ ಸ್ಪಷ್ಟಪಡಿಸಿದ್ದಾರೆ.

ad


ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2013 ರಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋತರೂ ಕೂಡ ‌ಕಾಂಗ್ರೆಸ್ ಸರ್ಕಾರದ‌ ಯೋಜನೆಗಳನ್ನ ಜನರಿಗೆ ಮುಟ್ಟಿಸಿದೆ‌ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೆ‌ ನನ್ನ ಸ್ವಂತ ಹಣದಿಂದ ಸಾಕಷ್ಟು ಕೆಲಸ ಮಾಡಿಸಿ ಕಷ್ಟಪಟ್ಟಿದ್ದೇನೆ‌ ಸಿಎಂ ಆಪ್ತ ಅಂತ ಅವರಿಂದ ಏನು ಪಡೆದುಕೊಂಡು ಬಂದಿಲ್ಲ ಒಂದೇ ಒಂದು ರೂಪಾಯಿ ಋಣ ನನ್ನ ಮೇಲಿಲ್ಲ ನನ್ನ ಜೊತೆ ನಿಂತು ನನ್ನ ಬೆಳಸಿದ ಕಾರ್ಯಕರ್ತರಿಗಾಗಿ ನಾನು ಒಂದು ನಿರ್ಧಾರ ತೆಗೆದುಕೊಳ್ಳಬೇಕಿದೆ. ಜನತಾದಳದಿಂದ ಉಚ್ಚಾಟನೆ ಆದಾಗಿನಿಂದ ಅವರ ಜೊತೆ ಇದ್ದೆ ಅವರಿಗೆ ಸ್ನೇಹಿತನಾಗಿ, ಮಗನಾಗಿ ಜೊತೆಯಲ್ಲಿ ಇದ್ದೆ‌ ಆದರೆ ಅವರ ಸ್ನೇಹಿತ ಮಹಾದೇವಪ್ಪ ಅವರಿಗೆ ಕ್ಷೇತ್ರ ಬಿಟ್ಟುಕೊಡು ಎಂದರು ನನಗೆ ಎಂಎಲ್ ಸಿ ಮಾಡುತ್ತೇನೆ ಅಂದರು. ಆದರೆ ಕ್ಷೇತ್ರ ಬಿಟ್ಟುಕೊಡೋದಕ್ಕೆ ನಾನು ಒಪ್ಪಲಿಲ್ಲ.‌ ಈಗ ಇರೋದು ಇಂದಿರಾ ಕಾಂಗ್ರೆಸ್ ಅಲ್ಲ ಸಿದ್ದರಾಮಯ್ಯ ಕಾಂಗ್ರೆಸ್ ಎಂದು ಟೀಕಿಸಿದರು.

ಅವರ ಸ್ವಾರ್ಥಕ್ಕಾಗಿ ಮಹದೇವಪ್ಪನಿಗೆ ಕ್ಷೇತ್ರ ಬಿಟ್ಟುಕೊಡು ಎಂದು ಸಿಎಂ ನನಗೆ ಹೇಳಿದ್ದರು. ಕಳೆದ ಚುನಾವಣೆಯಲ್ಲಿ ಟಿ ನರಸೀಪುರದಲ್ಲಿ ಕೇವಲ 200 ಮತಗಳಿಂದ ಮಹದೇವಪ್ಪ ಗೆದ್ದಿದ್ದರು. ಸಿದ್ದರಾಮಯ್ಯ ಹೋಗಿ ಡಿಸಿಗೆ ಹೇಳಿ ಅಂಚೆಮತಗಳನ್ನು ಹಾಕಿಸಿ ಮಹದೇವಪ್ಪರನ್ನ ಗೆಲ್ಲಿಸಿದ್ದರು. ಸಿಎಂ ಕೂಡ ಇದನ್ನು ನನಗೆ ಆಗ ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಪಕ್ಷದಲ್ಲಿ ಅಸಹಾಯಕರಾಗಿದ್ದಾರೆ.ಅವರು ಸಿಎಂ ವಿರುದ್ಧ ಏನೂ ಮಾತನಾಡಲ್ಲ ಸಿಎಂ ಕಾಂಗ್ರೆಸ್ ನಲ್ಲಿ ತುಘಲಕ್ ದರ್ಬಾರ್ ಮಾಡುತ್ತಿದ್ದಾರೆ, ಬಿಜೆಪಿ ಕಾಂಗ್ರೆಸ್ ಮುಕ್ತ ಕರ್ನಾಟಕ ಎಂದು ಹೇಳಿದೆ ಬಿಜೆಪಿ ಕಾಂಗ್ರೆಸ್ ಕರ್ನಾಟಕ ಮಾಡೋದು ಬದಲು ಕಾಂಗ್ರೆಸ್ ನಾಯಕರೇ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲಿದ್ದಾರೆ ಈಗ ಎಚ್ಚೆತ್ತುಕೊಳ್ಳದಿದ್ರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸದ್ಯ ಇರುವ 44 ಸೀಟ್ ಬದಲು 4 ಬರಲಿದೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದವರು ಸಿಎಂ ಸಿದ್ದರಾಮಯ್ಯ ಅವರನ್ನು ನೋಡಿ ಗಡ ಗಡ ಗಡ ನಡುಗುತ್ತಿದ್ದಾರೆ, ಎಲ್ಲರ ಬಂಡವಾಳ ಚುನಾವಣಾ ಫಲಿತಾಂಶದಂದು ಬಯಲಾಗಲಿದೆ, ಕೆಪಿಸಿಸಿ ಸರ್ವೆಯಲ್ಲೇ 70 ಮುಟ್ಟಲ್ಲಾ ಎಂದು ಬಂದಿದೆ, ಮಾಧ್ಯಮಗಳ ಸರ್ವೆಯಲ್ಲೂ 80 ಸ್ಥಾನ ತಲುಪುವುದು ಹೆಚ್ಚು ಎಂದು ಬಂದಿದೆ, ಎಲ್ಲಾ ಸರ್ವೆಯಲ್ಲೂ ಸಿ.ವಿ ರಾಮನ್ ನಗರ ಕ್ಷೇತ್ರದಲ್ಲಿ ನಾನೇ ಗೆಲ್ಲುವುದು ಎಂದು ಬಂದಿದ್ದರೂ ನನಗೆ ಟಿಕೆಟ್ ನೀಡಲ್ಲ ಎಂದಿದ್ದಾರೆ, ಹಾಗಾಗಿ ಜೆಡಿಎಸ್ ಸೇರಲು ನಾನು‌ ನಿರ್ಧಾರ ಮಾಡಿದ್ದೇನೆ ನಿನ್ನೆ ಜೆಡಿಎಸ್ ವರಿಷ್ಠ‌ ಹೆಚ್‌.ಡಿ.ದೇವೇಗೌಡ ಹಾಗು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಜೊತೆ ನಾನು ಚರ್ಚೆ ಮಾಡಿದ್ದೇನೆ‌ ನಾನು ಸಿ.ವಿ.ರಾಮನ್ ನಗರ ಕ್ಷೇತ್ರದಿಂದ ಜೆಡಿಎಸ್ ನಿಂದ ಸ್ಪರ್ಧಿಸುತ್ತೇನೆ.

 

ಇಂದೇ ನಮ್ಮ ಕ್ಷೇತ್ರದ ಎರಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ಪದಾಧಿಕಾರಿಗಳು ಕಾಂಗ್ರೆಸ್ ಗೆ ರಾಜೀನಾಮೆ ನೀಡುತ್ತಿದ್ದು ಜೆಡಿಎಸ್ ಪಕ್ಷವನ್ನು ಸೇರಲಿದ್ದೇವೆ ಎಂದರು.