ಒಂಟಿಯಾಗಿ ಪ್ರಯಾಣಿಸೋ ಮಹಿಳೆಯರೇ ಎಚ್ಚರ! ಸಹಪ್ರಯಾಣಿಕರ ರೂಪದಲ್ಲಿ ಕಾದಿದೆ ಅಪಾಯ!!

ಬೆಂಗಳೂರಿನಲ್ಲಿ ಇತ್ತೀಚೆಗೆ ಕಳ್ಳರ ಹಾವಳಿ ಹೆಚ್ಚಾಗಿದೆ. ಗಮನ ಬೇರೆಡೆ ಸೆಳೆದು ಮಹಿಳೆಯರ ನಗ- ನಾಣ್ಯ ಕದ್ದು ತಮ್ಮ ಕೈ ಚಳಕ ತೋರಿಸುತ್ತಾರೆ. ಅಂತಹುದೇ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು  5 ರೂಪಾಯಿ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆಯಲು ಹೋಗಿ ತಮ್ಮ 5 ಲಕ್ಷ ರೂಪಾಯಿ ಚಿನ್ನಾಭರಣ ಕಳೆದುಕೊಂಡಿದ್ದಾರೆ.

ad

ಏಪ್ರಿಲ್​​ 28ರ ಸಂಜೆ 5.15 ರ ಸುಮಾರಿಗೆ ನಾದಿನಿ ಮದುವೆ ಮುಗಿಸಿ ಹಿಂದೂಪುರದಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ದುಬಾರಿ ಮೌಲ್ಯದ ಚಿನ್ನಾಭರಣಗಳ ಬ್ಯಾಗ್​ ಬಳಿ ಇಟ್ಟುಕೊಂಡು ಕೂತಿದ್ದರು. ಇದೇ ವೇಳೆ  ಕಳ್ಳಿಯರ ತಂಡ  ಬಸ್ ಹತ್ತಿದೆ.  ಕೊಡಿಗೆಹಳ್ಳಿ ಬಸ್ ಗಂಗೇನಹಳ್ಳಿಯ ಸಿಬಿಐ ಸ್ಟಾಪ್ ಗೆ ಬರೋ 15 ನಿಮಿಷಗಳ ಅಂತರದಲ್ಲಿ ಕಳ್ಳಿಯರು ತಮ್ಮ ಕರಾಮತ್ತು ತೋರಿದ್ದಾರೆ. ಐದು ರೂಪಾಯಿ ನೋಟುಗಳನ್ನು ಎಸೆದು ಚಿನ್ನದ ಬ್ಯಾಗ್​ನೊಂದಿಗೆ ಕೂತಿದ್ದ ಮಹಿಳೆ ಗಮನವನ್ನು ಬೇರೆಡೆಗೆ ಸೆಳೆದಿದ್ದಾರೆ. ಇವರ 5 ರೂಪಾಯಿ ನೋಟನ್ನು ಎತ್ತಿಕೊಡಲು ಹೋದ ಮಹಿಳೆಯನ್ನು ಯಾಮಾರಿಸಿ ಆಕೆ ಚಿನ್ನದ ಬ್ಯಾಗ್​ ಲಪಟಾಯಿಸಿ ಪರಾರಿಯಾಗಿದ್ದಾರೆ.

ಮಹಿಳೆಯ ಬ್ಯಾಗ್ ನಲ್ಲಿದ್ದ ಡೈಮಂಡ್ ನೆಕ್ಲೇಸ್, ಚಿನ್ನದ ಬಳೆ, ಕಿವಿಯೋಲೆಗಳು, 10 ಸಾವಿರ ನಗದು ಸೇರಿ ಒಟ್ಟಾರೆ 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ಇದೀಗ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಓರ್ವ ಮಹಿಳೆಯಬ್ಬರು 5 ರೂ ಕೊಡಲು ಹೋಗಿ 5 ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದಾರೆ. ಕಳೆದ ವಾರ ನಡೆದಿರೋ ಘಟನೆ ಇದೀಗಾ ತಡವಾಗಿ ಬೆಳಕಿಗೆ ಬಂದಿದೆ,

 

Gold theft in public transport bus|Woman thief caught while stealing gold ornaments in Bus

Gold theft in public transport bus|Woman thief caught while stealing gold ornaments in Bus#GoldTheft #PublicTransportBuses

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಮೇ 3, 2019