ಅರಕಲಗೂಡಲ್ಲಿ ಚಿನ್ನ ವಶಕ್ಕೆ

ಅರಕಲಗೂಡಲ್ಲಿ ಭರ್ಜರಿ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಮನೆಯೊಂದರಲ್ಲಿ ಜನರಿಗೆ ಹಂಚುವ ಸಲುವಾಗಿ ಸಂಗ್ರಹಿಸಲಾಗಿದ್ದ ಅಪಾರ ಪ್ರಮಾಣದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಮತದಾರರಿಗೆ ಹಂಚಲು ತಂದಿದ್ದ ಮೂಗಿನಬಟ್ಟು ಓಲೆಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಮನೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ad


ಕಾಂಗ್ರೆಸ್​ ಕಾರ್ಯಕರ್ತ ಹಾಗೂ ವಾಚ್​ ಅಂಗಡಿ ಮಾಲೀಕ ಅರುಣಕುಮಾರ್​​ ಎಂಬುವವರು ಸಚಿವ ಎ.ಮಂಜುಗೆ ವೋಟ್​ ಹಾಕುವಂತೆ ಅಮಿಷವೊಡ್ಡಲು ತಂದು ಸಂಗ್ರಹಿಸಿದ್ದರು ಎಂದು ಶಂಕಿಸಲಾಗಿದೆ. ಇನ್ನು ಚುನಾವಣಾಧಿಕಾರಿಗಳು ಈ ಚಿನ್ನಾಭರಣ ವಶಕ್ಕೆ ಪಡೆಯುವ ವೇಳೆ ಜೆಡಿಎಸ್​-ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು.