IPLನಲ್ಲಿ ಬಂಗಾರದ ಮನುಷ್ಯ !! ಸ್ಕೋರ್ ಬೋರ್ಡ್ ಪಕ್ಕದಲ್ಲಿ ರಾರಾಜಿಸಿದ ಅಣ್ಣಾವ್ರ ಭಾವಚಿತ್ರ!!

ಬೆಂಗಳೂರಿನಲ್ಲಿ ರಾಜ್ ಕುಮಾರ್ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ಬಾರಿಯೂ ಅಭಿಮಾನಿಗಳು ಈ ದಿನವನ್ನು ಆಚರಣೆ ಮಾಡಿದ್ದಾರೆ.ಈ ವರ್ಷದ ಹುಟ್ಟುಹಬ್ಬ ಕೆಲವು ವಿಶೇಷ ಕಾರಣಗಳಿಂದ ಬಹಳಷ್ಟು ಖುಷಿ ನೀಡಿದೆ.

ad

ಹೌದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯದಲ್ಲಿ ರಾಜ್ ದರ್ಶನ ಆಗಿದೆ. ರಾಜ್ ಕುಮಾರ್ ಅವರ ಫೋಟೋವನ್ನು ಹಾಕುವ ಮೂಲಕ ಅಭಿಮಾನಿಗಳಿಗೆ ಸರ್ ಪ್ರೈಸ್ ನೀಡಿದೆ. ದೊಡ್ಡ ಪರದೆ ಮೇಲೆ ರಾಜ್ ಕುಮಾರ್ ಫೋಟೋ ಹಾಗೂ ಅವರ ಹಾಡನ್ನು ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇಡೀ ಕ್ರೀಡಾಂಗಣ ಈ ಸಂದರ್ಭವನ್ನು ಸಂಭ್ರಮಿಸಿತು.

ಇನ್ನು ಬೆಂಗಳೂರು ಹಾಗೂ ಪಂಜಾಬ್ ನಡುವೆ ನಡೆದ, ಈ ಪಂದ್ಯವನ್ನು ವೀಕ್ಷಣೆ ಮಾಡಲು ನಟ ಶಿವರಾಜ್ ಕುಮಾರ್ ಬಂದಿದ್ದರು. ನಿರ್ಮಾಪಕ ಶ್ರೀಕಾಂತ್ ಹಾಗೂ ನಿರ್ದೇಶಕ ರಘುರಾಮ್ ಇಬ್ಬರು ಶಿವಣ್ಣನ ಜೊತೆ ಪಂದ್ಯ ನೋಡಿ ಆನಂದಿಸಿದರು.

ಈ ಎಲ್ಲ ವಿಶೇಷತೆಗಳ ಜೊತೆಗೆ ಪಂಜಾಬ್ ವಿರುದ್ಧ ಆರ್ ಸಿಬಿ ಪಂದ್ಯವನ್ನು ಗೆದ್ದಿದೆ. 17 ರನ್ನಗಳಿಂದ ಬೆಂಗಳೂರು ತಂಡ ನಿನ್ನೆಯ ಪಂದ್ಯದಲ್ಲಿ ಜಯ ಪಡೆದಿದೆ.

ವರನಟ ಡಾ.ರಾಜಕುಮಾರ್ ಗೆ ಗೌರವ ಸಲ್ಲಿಸಿದ ಐಪಿಎಲ್. ಸ್ಕೋರ್ ಬೋರ್ಡ್ ಪಕ್ಕದಲ್ಲಿ ರಾರಾಜಿಸಿದ ಡಾ.ರಾಜ್ ಭಾವಚಿತ್ರ.

ವರನಟ ಡಾ.ರಾಜಕುಮಾರ್ ಗೆ ಗೌರವ ಸಲ್ಲಿಸಿದ ಐಪಿಎಲ್. ಸ್ಕೋರ್ ಬೋರ್ಡ್ ಪಕ್ಕದಲ್ಲಿ ರಾರಾಜಿಸಿದ ಡಾ.ರಾಜ್ ಭಾವಚಿತ್ರ.

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಏಪ್ರಿಲ್ 24, 2019