‘ಚಮ್ಮಕ್’ ಕೊಡೋಕೆ ಸಜ್ಜಾದ ಗೋಲ್ಡನ್ ಸ್ಟಾರ್ – ನಾಳೆಯಿಂದ ತೆರೆಮೇಲೆ ‘ಚಮ್ಮಕ್’ ದರ್ಬಾರ್ .!

ಸ್ಯಾಂಡಲ್ ವುಡ್ ಸಿನಿ ರಸಿಕರಿಗೆ ನಾಳೆಯಿಂದ ಗಣೇಶ್ ಚಮಕ್ ಕೊಡ್ತಿದ್ದಾರೆ. ಅರೆ ಇದೇನಿದು..? ಗಣೇಶ್ ಯಾಕಪ್ಪಾ ಸಿನಿಮಾ ಬಿಟ್ಟು ಚಮಕ್ ಕೊಡ್ತಾರೆ ಅಂತ ಅನ್ಕೊಬೇಡಿ. ಚಮಕ್ ಗೊಲ್ಡನ್ ಸ್ಟಾರ್ ನಟನೆಯ ಮೋಸ್ಟ್ ಎಕ್ಸ್ ಪೆಕ್ಟೆಡ್ ಚಿತ್ರ. ಈ ಸಿನಿಮಾ ನಾಳೆ ಬಿಡುಗಡೆಯಾಗ್ತಿದೆ. ಹಾಗಾದ್ರೆ ನಾಳೆ ರಿಲೀಸ್ ಆಗ್ತಿರೋ ಚಮಕ್ ಚಿತ್ರದ ಸ್ಪೆಶಾಲಿಟಿ ಏನು ? ಆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ…

ಗೋಲ್ಡನ್ ಸ್ಟಾರ್ ಗಣೇಶ್ ಮುಗುಳು ನಗೆ ಬೀರಿ ಈಗ ಚಮಕ್ ಕೊಡ್ತಿದ್ದಾರೆ. ಅಂದ್ರೆ ಗಣೇಶ್ ಚಮಕ್ ಅನ್ನೋ ಕ್ಲಾಸಿ ಟೈಟಲ್ ಇರೋ ಕ್ಯೂಟ್ ಸ್ಟೋರಿಯಲ್ಲಿ ನಟಿಸಿದ್ದು, ಈ ಸಿನಿಮಾ ರಾಜ್ಯದ್ಯಂತ ರಿಲೀಸ್ ಆಗ್ತಿದೆ. ಹೌದು, ಈಗಾಗ್ಲೆ ಟೈಟಲ್ ನಿಂದ್ಲೇ ಕ್ಯೂರಿಯಾಸಿಟಿ ಈ ಚಿತ್ರ ನಾಳೆ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಗಣೇಶ್​​ ಸಿನಿಮಾ ಅಂದ್ಮೇಲೆ ಅಲ್ಲೊಂದಿಷ್ಟ ತಮಾಷೆ, ಸ್ಟೈಲೀಶ್​​ ಫೈಟ್​​​, ಒಂದಿಷ್ಟು  ಕಣ್ಣೀರು ಎಲ್ಲವೂ ಇರುತ್ತೆ. ಇದಕ್ಕೆ ಗಣಿಯ ಚಮಕ್ ಸಿನಿಮಾ ಹೊರತೇನಲ್ಲ ಅನ್ನೋದು ಚಿತ್ರದ ಟೀಸರ್ ನೋಡಿದ್ರೇನೆ ತಿಳಿಯತ್ತೆ. ಹೌದು, ಗಣೇಶ್ ಮತ್ತು ಕಿರಿಕ್ ಬ್ಯೂಟಿ ರಶ್ಮಿಕಾನ ಫಸ್ಟ್ ನೈಟ್ ಟೀಸರ್ ನಿಂದ್ಲೆ ಸಿನಿ ಪ್ರೇಕ್ಷಕರಲ್ಲಿ ಭರ್ತಿ ಕುತೂಹಲ ಹುಟ್ಟಿಸಿದ್ದು. ಇದೀಗ ಚಮಕ್ ಸಿನಿಮಾ ನಾಳೆ ಬೆಳ್ಳಿ ತೆರೆಮೇಲೆ ಬರ್ತಿದೆ..

ಗೋಲ್ಡನ್ ಸ್ಟಾರ್ ಗಣೇಶ್ ಈಗ ಗೈನಕಾಲಜಿಸ್ಟ್!

ಯೆಸ್, ಚಮಕ್ ಚಿತ್ರದಲ್ಲಿ ಫಸ್ಟ್ ಟೈಮ್ ಗಣಿ ಡಾಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಾಯಕಿ ರಶ್ಮಿಕಾ ಕಂಪ್ಲೀಟ್ ಟ್ರೆಡಿಶನಲ್ ಪಾತ್ರದಲ್ಲಿ ಮಿಂಚಲಿದ್ದಾರೆ. ಒಳ್ಳೆಯ ಗಂಡ ಸಿಗ್ಲಿ ಅಂತ ಯಾವಾಗ್ಲೂ ವೃತ, ಉರುಳುಸೇವೆ ಮಾಡ್ಕೊಂಡಿರೋ ಸಂಪ್ರದಾಯಸ್ಥ ಮನೆ ಹುಡುಗಿಯಾಗಿ ನಟಿಸ್ತಿದ್ದಾರೆ. ಇನ್ನು ಚಮಕ್ ಟೈಟಲ್ ಹಿಂದೆ ಆ್ಯಶ್ ಟ್ಯಾಗ್ ಸಿಂಬಲ್ ಇದೆ. ಆ್ಯಶ್ ಟ್ಯಾಗ್ ಅನ್ನೋದು ಎಲ್ರನ್ನು ಒಗ್ಗೂಡಿಸೋ ಸಿಂಬಲ್.. ಹಾಗೇ ಚಿತ್ರದಲ್ಲೂ ಎಲ್ರೂ ಒಟ್ಟೊಟ್ಟಿಗೆ ಚಮಕ್ ಕೊಡ್ತಾನೇ ಇರ್ತಾರೆ. ಜೊತೆಗೆ ದೇವ್ರು ಕೂಡ ಇಲ್ಲಿ ಹೇಗೆ ಚಮಕ್ ಕೊಡ್ತಾನೆ ಅನ್ನೋದು ಚಮಕ್​​ನ ಇಂಟ್ರೆಸ್ಟಿಂಗ್ ಪಾಯಿಂಟ್ ಆಗಿದೆ.

ಚಮಕ್​ ಪಕ್ಕಾ ಯೂತ್​ ಸಬ್ಜೆಕ್ಟ್ ಇರೋ ಪಕ್ಕಾ ಎಂಟ್ರಟೈನರ್ ಮೂವಿ. ಜೊತೆಗೆ ಚಿತ್ರದಲ್ಲಿ ಅದ್ಬುತವಾದ ಕಥೆಯಿದೆ. ಈಗಾಗ್ಲೇ ಜೂಡ ಸ್ಯಾಂಡಿ ಚಂದದ ಸಂಗೀತ ನೀಡಿರೋ ಚಿತ್ರದ ಎಲ್ಲಾ​​ ಹಾಡುಗಳು ಕೇಳುಗರಿಗೆ ಸಖತ್ ಕಿಕ್ ಕೊಡ್ತಿದೆ. ಹೀಗಾಗಿ ಈ ಸಿನಿಮಾದ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ…ಅಂದ್ಹಾಗೆ ಚಮಕ್ ಚಿತ್ರದಲ್ಲಿ ಗಣೇಶ್ ಗೆ ಜೋಡಿಯಾಗಿ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಹಾಗೆ ಗಣಿ ಪುತ್ರಿ ಚಾರಿತ್ರ್ಯ ಕೂಡ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಮತ್ತೊಂದು ವಿಶೇಷ.

ನಿರ್ದೇಶಕ ಸಿಂಪಲ್ ಸುನಿ ಈ ಚಿತ್ರವನ್ನ ತುಂಬಾ ಮುತ್ತುವರ್ಜಿ ವಹಿಸಿ ಮಾಡಿದ್ದಾರೆ. ಟಿ ಆರ್​ ಚಂದ್ರಶೇಖರ್​ ನಿರ್ಮಾಣದ ‘ಚಮಕ್’ ಸಿನಿಮಾವನ್ನು ತುಂಬಾ ಅದ್ದೂರಿಯಾಗಿ ಸೆರೆ ಹಿಡಿಯಲಾಗಿದೆ. ನಾಳೆ ರಾಜ್ಯಾದ್ಯಂತ 200ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ  ‘ಚಮಕ್’ ರಿಲೀಸ್ ಆಗ್ತಿದೆ. ವಿದೇಶಗಳಲ್ಲೂ ನಾಳೆಯೇ ಚಮಕ್ ಬಿಡುಗಡೆ ಆಗ್ತಿದ್ದು. ಚಿತ್ರ ಪ್ರೇಕ್ಷಕರಿಗೆ ಪಕ್ಕಾ ಮನೋರಂಜನೆ ನಿಡೋದ್ರಲ್ಲಿ ಡೌಟೇ ಇಲ್ಲ.