ಸಾಫ್ಟ್ ಡ್ರಿಂಕ್ಸ್‌ಗಳ ಭರಾಟೆಯ ನಡುವಲ್ಲೂ ಉಳಿದಿದೆ ಗೋಲಿಸೋಡಾ! ಶೀನಾನಾಯ್ಕ ಗೋಲಿಸೋಡಾ ಫುಲ್ ಫೇಮಸ್​​!!

ತಂಪುಪಾನೀಯ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅದ್ರಲ್ಲೂ ಬೇಸಿಗೆ ಕಾಲದಲ್ಲಿ ಚಿಲ್ಡ್ ಆದ ಜ್ಯೂಸ್ ಕುಡಿಯೋ ಮಜಾನೆ ಬೇರೆ. ಹಿಂದಿನ ಕಾಲದಲ್ಲೂ ಜ್ಯೂಸ್​ಗಳಿತ್ತು. ಆದರೆ ಆಧುನಿಕರಣದ ಭರಾಟೆಯಲ್ಲಿ  ಹಳೆ ಜ್ಯೂಸ್​ಗಳು ಅವುಗಳ ರುಚಿ ನಮ್ಮಿಂದ ಮರೆಯಾಗಿದೆ. ಆದರೆ ಉಡುಪಿಯ ಶೀನಾ ನಾಯ್ಕ ಇಂದಿಗೂ ಸಾಂಪ್ರದಾಯಿಕವಾದ  ಗೋಲಿ ಸೋಡಾವನ್ನು ತಮ್ಮ ಸೈಕಲ್​ ಮೂಲಕ ಜೀವಂತವಾಗಿ ಉಳಿಸುವ ಪ್ರಯತ್ನದಲ್ಲಿದ್ದಾರೆ.

ad

ಹೌದು ಕೇವಲ ಗೋಲಿ ಸೋಡಾ ರುಚಿಯನ್ನು ಜನರಿಗೆ ನೀಡುವ ಉದ್ದೇಶದಿಂದ ಶೀನಾ ನಾಯ್ಕ 15 ಲಕ್ಷಕಿ,ಮಿ, ಸೈಕಲ್ ತುಳಿದಿದ್ದಾರೆ. ಕರಾವಳಿಯ ಫೇಮಸ್ ಗೋಲಿ ಸೋಡಾವನ್ನು ಇಲ್ಲಿತನಕವೂ ಉಳಿಸಿಕೊಂಡು ಬಂದಿದ್ದಾರೆ.ಈಗೀನ ಕಾಲದಲ್ಲೂ ತಂಪು ಪಾನೀಯಗಳಿಗೆ ಬಾರಿ ಬೇಡಿಕೆ ಇದ್ದು . ಈ ಸಂದರ್ಭದಲ್ಲೂ ಗೋಲಿ ಸೋಡ ದಲ್ಲಿ ಬದುಕು ಕಟ್ಟಿಕೊಂಡು ಇರುವುದು ಮೆಚ್ಚುವ ವಿಷಯವಾಗಿದೆ.

ಹೌದು ಶೀನಾ ನಾಯ್ಕ 45 ವರ್ಷ ಬೇರೊಬ್ಬರ ಮಾಲೀಕತ್ವದಲ್ಲಿ ಗೋಲಿ ಸೋಡಾ ತಯಾರಿಕ ಕೆಲಸ ಮಾಡುತ್ತಿದ್ದರು. ಆದರೆ 15 ವರ್ಷದ ಹಿಂದೆ ಗೋಲಿ ಸೋಡಾ ಉದ್ಯಮ ನಷ್ಟ ಅನುಭವಿಸಿದಾಗ ಮಾಲೀಕರು, ಇವರಿಗೆ ಗೋಲಿ ಸೋಡಾ ತಯಾರಿಕ ಉಪಕರಣ ನೀಡಿದ್ರು. ಆ ಬಳಿಕ ಅಂಗಡಿ, ತಮ್ಮ ಮನೆಯಲ್ಲಿ ಈ ಗೋಲಿ ಸೋಡಾ ತಯಾರಿಸುತ್ತಿದ್ರು. ಈಗ ಸಾಫ್ಟ್ ಡ್ರಿಂಕ್ಸ್‌ಗಳ ಭರಾಟೆಯ ನಡುವೆ ಗೋಲಿ ಸೋಡಾಕ್ಕೆ ಬೇಡಿಕೆ ಕಡಿಮೆಯಾಗಿದೆ. ಆದ್ರೂ ಸಹ ಉಡುಪಿಯ 7ರಿಂದ 8 ಅಂಗಡಿಗಳಿಗೆ ನಿತ್ಯ 50 ಬಾಟಲ್ ಗೋಲಿಸೋಡಾ ಸರಬರಾಜು ಮಾಡುತಿದ್ದಾರೆ. ವಯಸ್ಸು 75 ಆಗ್ತಾ ಬಂದರು ಈ ಪ್ರಾಯದಲ್ಲಿಯೂ ಇವರು ಪ್ರತಿನಿತ್ಯ ಸೈಕಲ್‌ನಲ್ಲೇ 60 ಕಿ.ಮೀ ತೆರಳಿ ಗೋಲಿ ಸೋಡಾವನ್ನು ಅಂಗಡಿಗೆ ಸರಬರಾಜು ಮಾಡುತಿದ್ದಾರೆ.

ಶೀನಾ ನಾಯ್ಕರು ಇಷ್ಟುಕಷ್ಟು ಪಟ್ರು ಸಹಾ ನಿತ್ಯಾ ಸಂಪಾದನೆಯ ಲಾಭ ಮಾತ್ರ ಹೆಚ್ಚು ಅಂದ್ರೆ 200 ರೂಪಾಯಿ. ಆದ್ರೆ ಹಿಂದಿನಿಂದಲೂ ಮಾಡಿಕೊಂಡ ಉದ್ಯೋಗವನ್ನು ಬಿಡಬಾರದು, ಒಂದು ಕಾಲದಲ್ಲಿ ಮೆರೆದಿದ್ದ ಗೋಲಿ ಸೋಡಾ ಉದ್ಯಮ ನಶಿಸಬಾರದು ಎಂಬ ಉದ್ದೇಶದಿಂದ ಈ ಕಾರ್ಯ ಮಾಡುತ್ತಿದ್ದಾರೆ.