ಊರೂರು ಸುತ್ತಿ ಕೊನೆಗೂ ವಾರಸುದಾರೆಯನ್ನು ಸೇರಿತು ಲಕ್ಷಾಂತರ ಮೌಲ್ಯದ ಒಡವೆ. ಇದೂ ಸಾಧ್ಯನಾ ಅಂದ್ಕೋಬೇಡಿ.. ಇದು ನಡೆದಿದ್ದು ಹುಬ್ಬಳ್ಳಿಯಲ್ಲಿ.

ಬಸ್ ನಲ್ಲಿ ಬಿಟ್ಟುಹೋದ ಬೆಲೆ ಬಾಳುವ ಚಿನ್ನವನ್ನು ಮರಳಿ ನೀಡಿ ಆದರ್ಶ ಮೆರೆದಿದ್ದಾರೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು. ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದಲ್ಲಿ ಬೆಲೆ ಬಾಳುವ ದಾಖಲೆಗಳು ಹಾಗೂ ಚಿನ್ನವನ್ನು ಬಿಟ್ಟಿದ್ದ ಮಹಿಳೆಯ ವಸ್ತುಗಳನ್ನು ಒಂದು ಗಂಟೆಯಲ್ಲಿ ಸಾರಿಗೆ ಸಂಸ್ಥೆಯ ಅಧಿಕಾರಿಗಳು ವಾಪಾಸ್ಸ್ ನೀಡಿದ್ದಾರೆ.

ಕಲಘಟಗಿಯಿಂದ ವಿಜಯಪುರಕ್ಕೆ ತೆರಳುವಾಗ ಮಾರ್ಗ ಮಧ್ಯ ಹುಬ್ಬಳ್ಳಿಯಲ್ಲಿ ಬಸ್ ನಿಲ್ದಾಣದಲ್ಲಿ ಸ್ಟಾಪ್ ಆಗಿದೆ. ಆ ಬಸ್ ನಲ್ಲಿ ಪ್ರಯಾಣ ಮಾಡ್ತಾಯಿದ್ದ ಅನುಸುಯಮ್ಮಾ ಎನ್ನುವ ಮಹಿಳೆ ತನ್ನ ಬಂಗಾರ ಒಡವೆ ಹಾಗೂ ದಾಖಲೆಗಳನ್ನು ಬಿಟ್ಟು ಕೆಳಗೆ ಇಳದಿದ್ದಾಳೆ.

ಅಷ್ಟರಲ್ಲಿ ಬಸ್ ಹೋಗಿದೆ ಕೂಡಲೇ ಅನುಸುಯಮ್ಮಾ ಬಸ್ ನಿಲ್ದಾಣದಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾಳೆ. ಅವರು ಬಸ್ ಚಾಲಕನಿಗೆ ಕಾಲ್ ಮಾಡಿದ್ರೆ ಬಸ್ ಹುಬ್ಬಳ್ಳಿಯಿಂದ ವಿಜಯಪುರ ಸಮೀಪ ಹೋಗಿತ್ತು ಆಗ ಅಧಿಕಾರಿಗಳು ಬೇರೆ ಬಸ್ ನಲ್ಲಿ ಲಗೇಜ್ ಇಡುವಂತೆ ಹೇಳಿದ್ದಾರೆ. ಸುಮಾರು ಗಂಟೆಯ ನಂತ್ರ ಕಳೆದುಹೊಗಿದ್ದ ಚಿನ್ನ ವಾಪಾಸ್ಸ್ ಹುಬ್ಬಳ್ಳಿಗೆ ಬಂದಿದೆ…

ಹುಬ್ಬಳ್ಳಿ ಉಪನಗರ ಪೊಲೀಸರ ಸಮ್ಮುಖದಲ್ಲಿ ಸುಮಾರು‌ ಎರಡು ಲಕ್ಷ‌ ಐವತ್ತು ಸಾವಿರ ಮೌಲ್ಯದ ಬಂಗಾರ ಸೇರಿದಂತೆ ಬೆಲೆ ಬಾಳುವ ದಾಖಲೆಗಳನ್ನು ಮರಳಿ ನೀಡಿದ್ದಾರೆ. ಹೀಗಾಗಿ ಸಾರ್ವಜನಿಕರು ಸಾರಿಗೆ ಸಂಸ್ಥೆಯ ಕಾರ್ಯವನ್ನು ಮೆಚ್ಚುಗೆ ಪಾತ್ರರಾಗಿದ್ದಾರೆ.