ಇಲ್ಲಿ ಸರ್ಕಾರಿ ಕೆಲಸ ಮಾರಾಟಕ್ಕಿದೆ- ರಾಜ್ಯ ಆರೋಗ್ಯ ಇಲಾಖೆಯಲ್ಲಿ ಲಂಚಕ್ಕೆ ಸಿಗುತ್ತೆ ಹುದ್ದೆ!

 

ರಾಜ್ಯ ಸರ್ಕಾದಲ್ಲಿ ಸರ್ಕಾರಿ ನೌಕರಿ ಮಾರಾಟಕ್ಕಿದೆ ಅನ್ನೋ ಅನ್ನೋ ಸ್ಪೊಟಕ ಸುದ್ದಿ ದಾಖಲೆಗಳು ಹಾಗೂ ವಿಡಿಯೋಗಳ ಮೂಲಕ ಬಿಟಿವಿಗೆ ಲಭ್ಯವಾಗಿದೆ. ಹೌದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯಲ್ಲಿ ಅಂತರಿಕ ಅರ್ಥಿಕ ಸಲಹೆಗಾರರಾಗಿರುವ ರಾಮಚಂದ್ರಯ್ಯ ಎಂಬಾತ ಹಣ ಪಡೆದು ಸರ್ಕಾರಿ ಉದ್ಯೋಗ ನೀಡೋದಾಗಿ ವಂಚಿಸುತ್ತಿರುವ ವಿಡಿಯೋಗಳು ಬಿಟಿವಿಗೆ ಲಭ್ಯವಾಗಿದೆ.

 

ರಾಮಚಂದ್ರಯ್ಯನಿಗೆ ಹನುಮಂತು ಮತ್ತು ಆನಂದ್ ಎಂಬವರು ಡೀಲರ್ ಗಳಾಗಿದ್ದು, ಇವರ ಮೂಲಕ ಕೆಲಸದ ಅಗತ್ಯವಿರುವವರು ರಾಮಚಂದ್ರಯ್ಯ ಅವರನ್ನು ಸಂಪರ್ಕಿಸಬಹುದಾಗಿದೆ. ಇವರಿಬ್ಬರ ಹೆಸರು ಹೇಳಿಕೊಂಡು ರಾಮಚಂದ್ರಯ್ಯನ ಭೇಟಿ ಮಾಡಿದ್ರೆ ಮೊದಲಿಗೆ ನಿಮ್ಮ ವಿಳಾಸ ನಂಬರ್ ಹಾಗೂ ವಿದ್ಯಾರ್ಹತೆ ಮಾಹಿತಿ ಪಡೆದುಕೊಳ್ತಾನೆ. ನಂತ್ರ ಸರ್ಕಾರಿ ಉದ್ಯೋಗವಕಾಶಗಳು ಬಂದಾಗ ಅವರ ವಿದ್ಯಾರ್ಹತೆಗೆ ತಕ್ಕ ಹಾಗೇ ಉದ್ಯೋಗ ವ್ಯವಸ್ಥೆಯಾಗುತ್ತೆ. ಮೊದಲಿಗೆ ವಿಧಾನಸೌಧದಲ್ಲಿ ಕುಳಿತು ಡೀಲ್ ಮಾಡಿಕೊಳ್ಳುವ ರಾಮಚಂದ್ರಯ್ಯ ಹಣವನ್ನು ಪಡೆಯಬೇಕಾದ್ರೆ ಕಬ್ಬನ್ ಪಾರ್ಕನಲ್ಲಿ ತೆಗೆದುಕೊಳ್ಳುತ್ತಾರೆ. ಇವ್ರಿಂದ ಕೆಲವರು ಕೆಲಸ ಪಡೆದುಕೊಂಡಿದ್ರೆ ಸಾಕಷ್ಟು ಜನ ಮೋಸ ಹೋಗಿ ಇನ್ನು ಇವ್ರ ಕಚೇರಿಗೆ ಅಲೆಯುತ್ತಿದ್ದಾರೆ. ಸದಾ ಸಮಾನತೆಯ ತಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಆರೋಗ್ಯ ಸಚಿವ ರಮೇಶ್ ಕುಮಾರ್ ಇನ್ನಾದ್ರು ಈ ಕಡೆ ನೋಡ್ತಾರ ಅನ್ನೋದನ್ನ ಕಾದು ನೋಡಬೇಕಿದೆ.