ಗುಜರಾತ್ ನಲ್ಲಿ ಬಿಜೆಪಿ ಗೆದ್ದರೂ ಹಿನ್ನಡೆ ! ಕಾಂಗ್ರೆಸ್ ಅಧಿಕಾರಕ್ಕೆ ಬರದೇ ಇದ್ದರೂ ಮುನ್ನಡೆ : ಎಬಿಪಿ ಸಮೀಕ್ಷೆ !!

ಗುಜರಾತ್ ನಲ್ಲಿ ಈ ಬಾರಿ ಸರಳ ಬಹುಮತದೊಂದಿಗೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದರೂ ಗೆಲ್ಲುವ ಕ್ಷೇತ್ರಗಳಲ್ಲಿ ಇಳಿಕೆಯಾಗಲಿದೆ ಎಂದು ಎಬಿಪಿ ನ್ಯೂಸ್ ನ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಹೌದು. ಗುಜರಾತ್​​ನಲ್ಲಿ ಮತ್ತೆ ಕಮಲ ಪಕ್ಷಕ್ಕೇ ಬಹುಮತ ಸಿಗಲಿದೆ ಅಂತ ಎಬಿಪಿ ಚುನಾವಣಾ ಪೂರ್ವ ಸಮೀಕ್ಷೆ ಹೇಳಿದೆ. ಸರಳ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಏರಲಿದೆ ಅಂತ ತಿಳಿಸಿದೆ. ಅದೇ ಸಂಧರ್ಭದಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್​ ಬಿಜೆಪಿಗೆ ಭಾರೀ ಪೈಪೋಟಿ ನೀಡುತ್ತಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ad

ಬಿಜೆಪಿ ಈ ಚುನಾವಣೆಯಲ್ಲಿ 91-99 ರಷ್ಟು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್​ಗೆ 78-86 ಸ್ಥಾನ ಸಿಗೋದಾಗಿ ಸಮೀಕ್ಷೆ ಭವಿಷ್ಯ ನುಡಿದಿದೆ.ಬಿಜೆಪಿ-ಕಾಂಗ್ರೆಸ್​ ನಡುವೆ ಕೇವಲ 4-5 ಸ್ಥಾನಗಳ ಅಂತರವಿದ್ದು, ಇತರೆ ಪಕ್ಷಗಳಿಗೆ 3 ರಿಂದ 7 ಕ್ಷೇತ್ರಗಳು ಲಭಿಸುವ ಸಾಧ್ಯತೆ ಇದೆ. 182 ಸದಸ್ಯ ಬಲ ಹೊಂದಿರುವ ಗುಜರಾತ್​ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು 92 ಸದಸ್ಯ ಬಲ ಬೇಕಿದೆ. ಕಳೆದ ಬಾರಿಗಿಂತ ಈ ಬಾರಿ ಬಿಜೆಪಿಗೆ ಕಡಿಮೆ ಸ್ಥಾನ ಸಿಗೋದಾಗಿ ಸಮೀಕ್ಷೆ ತಿಳಿಸಿದೆ. ಪಟೇಲ್ ಸಮುದಾಯ ಈ ಹಿಂದೆ ಬಿಜೆಪಿ ಜೊತೆ ಗುರುತಿಸಿಕೊಂಡಿತ್ತು. ಈಗ ಪಟೇಲ್ ಸಮುದಾಯ ಬಿಜೆಪಿ ವಿರುದ್ದ ಇರುವುದು ಬಿಜೆಪಿಗೆ ಹೊಡೆತ ನೀಡಿದೆ. ಜೊತೆ ಪಟೇಲ್ ಸಮುದಾಯದ ಚಳುವಳಿಯ ಮುಖಂಡ ಹಾರ್ದಿಕ್ ಪಟೇಲ್ ಮತ್ತು ದಲಿತ ಚಳುವಳಿಗಾರ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಗೆ ಬೆಂಬಲ ಘೋಷಿಸಿರೋದು 43 ಇದ್ದ ಶಾಸಕರ ಸಂಖ್ಯೆ 80 ಕ್ಕೆ ಏರಲಿದೆ ಎನ್ನಲಾಗ್ತಿದೆ