ಇಂದು ಗುಜರಾತ್ ಎರಡನೇ ಹಂತದ ಚುನಾವಣೆ : ದೇಶದ ರಾಜಕಾರಣಕ್ಕೆ ಹೊಸ ಭಾಷ್ಯ ಬರೆಯಲಿರೋ ಮತದಾರರು !

2019 ಲೋಕಸಭಾ ಚುನಾವಣೆ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಂತಲೇ ಬಿಂಬಿತವಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ನಡೆಯುತ್ತಿದೆ.

2ನೇ ಹಂತದ ಮತದಾನ ರಾಜಧಾನಿ ಅಹ್ಮದಾಬಾದ್​ ಸೇರಿ ಒಟ್ಟು 14 ಜಿಲ್ಲೆಗಳ 93 ಕ್ಷೇತ್ರಗಳಲ್ಲಿ ನಡೆಯಲಿದೆ. ಕಣದಲ್ಲಿ 851 ಅಭ್ಯರ್ಥಿಗಳಿದ್ದು, 2.22 ಕೋಟಿ ಮತದಾರರಿದ್ದಾರೆ. ಸೆಂಟ್ರಲ್​​​ ಗುಜರಾತ್​​ನ 61 ಮತ್ತು ಉತ್ತರ ಗುಜರಾತ್​​ನ 32 ಕ್ಷೇತ್ರಗಳಲ್ಲಿ ಇವತ್ತು ಮತದಾನ ನಡೆಯುತ್ತಿದೆ. ಪಂಚಮಹಲ್ಸ್, ದೋಹಾದ್, ಖೇಡಾ, ಆನಂದ್, ವಡೋಧರಾ, ಮಹಿಸಾಗರ್, ಚೋಟಾ ಉದೇಪುರ್​​ ಉತ್ತರ ಗುಜರಾತ್​​ನ ಅಹ್ಮದಾಬಾದ್, ಗಾಂಧಿನಗರ, ಮೆಹ್ಸಾನಾ, ಪಟಾನ್, ಸಾಬರ್ ಕಾಂತಾ, ಬನಾಶ್ಕಾಂತ ಮತ್ತು ಅರವಲ್ಲಿ ಜಿಲ್ಲೆಗಳು ನಿರ್ಣಾಯಕವಾಗಿವೆ. ಸ್ವತಃ ಪ್ರಧಾನಿ ಮೋದಿ ಅವ್ರು ಉತ್ತರ ಗುಜರಾತ್​​ನ ಮಣ್ಣಿನ ಮಗ. ಅವರ ತವರು ಇದೇ ಆಗಿದೆ. ದಲಿತ ಮುಖಂಡ ಜಿಗ್ನೇಶ್​ ಮೇವಾನಿ, ಪಟೇಲ್​​ ಸಮುದಾಯದ ನಾಯಕ ಹಾರ್ದಿಕ್​​ ಪಟೇಲ್​​ ಕೂಡಾ ಇದೇ ಭಾಗಕ್ಕೆ ಸೇರಿದ್ದು ಎರಡನೇ ಹಂತ ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದೆ.

ಇಂದು 2ನೇ ಹಂತದ ಮತದಾನ ಮುಗಿಯಲ್ಲಿದ್ದು, 18ರಂದು ಅಭ್ಯರ್ಥಿಗಳ ಹಣೆಬರಹ ತಿಳಿಯಲಿದೆ. ಇನ್ನು 2012ರ 2ನೇ ಹಂತದ ಚುನಾವಣೆಯಲ್ಲಿ ಬಿಜೆಪಿ – 52, ಕಾಂಗ್ರೆಸ್-39 ಮತ್ತು ಇತರೆ ಪಕ್ಷಗಳು -2 ಸ್ಥಾನಗಳಲ್ಲಿ ಜಯಸಿದ್ವು. ಪ್ರಧಾನಿ ನರೇಂದ್ರ ಮೋದಿ ರಾಣಿಪ್ ಪ್ರದೇಶದ ನಿಶಾನ್ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಮತಗಟ್ಟೆಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ಬಿಗು ಪೊಲೀಸ್ ಭದ್ರತೆಯನ್ನು ನೀಡಲಾಗಿದೆ.