ಗುಲ್ಬರ್ಗದ ಟ್ರಾಫಿಕ್ ಪೋಲೀಸ್ ಕಿರಿಕಿರಿ ವಿಡಿಯೋ ವೈರಲ್.

ವಾಹನ ಚಲಾಯಿಸುವವರಿಗೆ ಟ್ರಾಫಿಕ್ ಪೋಲೀಸರ ಕಿರಿಕಿರಿ ತಪ್ಪಿದ್ದಲ್ಲ. ಇದೇ ಘಟನೆ ಗುಲ್ಬರಗ ನಗರದಲ್ಲೂ ನಡೆದಿದೆ.  ಕಲಬುರ್ಗಿ ನಗರದ ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್​ ಬಂಕ್​​ ಬಳಿ ರಸ್ತೆ ಬದಿ ದ್ವಿಚಕ್ರವಾಹನ​​ ನಿಲ್ಲಿಸಿ ಅಂಗಡಿಗೆ ಹೋಗಿದ್ದ ಮಹಿಳೆಗೆ ಭಾರೀ ದಂಡ ವಿಧಿಸಿದ್ದಾರೆ. ಟ್ರಾಫಿಕ್​​ ರೂಲ್ಸ್​ ನೆಪದಲ್ಲಿ ಕಲಬುರಗಿ ಟ್ರಾಫಿಕ್ ಪೊಲೀಸರು ಕಿರಿಕಿರಿ ಮಾಡ್ತಿದ್ದಾರೆ ಅಂತ ಮಹಿಳೆಯೊಬ್ಬಳು ಗಲಾಟೆ ಮಾಡಿದ್ದಾಳೆ.

ಆ ವೇಳೆಗೆ ಟ್ರಾಫಿಕ್​ ಪೊಲೀಸ್​ ಅಧಿಕಾರಿ ಭಾರತಿ ಕೂಡಾ ಸ್ಥಳಕ್ಕೆ ಬಂದಿದ್ದಾರೆ. ನಾನೇನು ತಪ್ಪೇ ಮಾಡಿಲ್ಲ. ಏಕೆ ದಂಡ ಹಾಕ್ತೀರಿ..ಅಂತಾ ಯುವತಿ ವಾಗ್ವಾದಕ್ಕೆ ಇಳಿದಿದ್ದಾಳೆ. ಅಷ್ಟೇ ಅಲ್ಲದೇ ಬೈಕ್​​ ಎಲ್ಲಿಗೆ ಬೇಕಾದ್ರೂ ಹೊತ್ತೊಯ್ರಿ ಅಂತಾ ಕಿಡಿ ಕಾರಿದ್ದಾಳೆ. ಪೊಲೀಸ್ ಅಧಿಕಾರಿ ಮತ್ತು ಯುವತಿ ನಡುವೆ ನಡೆದ ವಾಗ್ವಾದ ಸಖತ್ ವೈರಲ್​​ ಆಗಿದೆ.