ವಿಧಾನಸೌಧಕ್ಕೆ ಸೂಟ್​ಕೇಸ್​ ತೆಗೆದುಕೊಂಡು ಹೋಗದೇ ಯಾವುದೇ ಕೆಲಸ ಆಗಲ್ಲ  ಭಾರಿ ಭ್ರಷ್ಟಾಚಾರಕ್ಕೆ ಹಂಪಿ ಕನ್ನಡ ವಿವಿ ಕುಲಪತಿ ಮಲ್ಲಿಕಾ ಘಂಟಿ ಆಕ್ರೋಶ  ವಿಚಾರ ಸಂಕಿರಣದಲ್ಲಿ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಟ್ಟ ಹಂಪಿ ವಿವಿ ಕುಲಪತಿ
=============
ಪ್ರತಿಷ್ಠಿತ ಕನ್ನಡ ವಿವಿಯ ಕುಲಪತಿಗಳೇ ಭ್ರಷ್ಟಾಚಾರದ ಕರಾಳಮುಖವನ್ನು ಬಯಲು ಮಾಡಿದ್ದಾರೆ. ನಮ್ಮ ಕೆಲಸಗಳು ಆಗಬೇಕಂದ್ರೆ ನಾವೂ ಸೂಟಕೇಸ್​ ತಗೊಂಡು ಹೋಗ್ಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಮಲ್ಲಿಕಾ ಘಂಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡ ವಿವಿಯ ಬೆಳ್ಳಿಹಬ್ಬ ಅಂಗವಾಗಿ ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ ‘ಭವಿಷ್ಯದ ಕನ್ನಡ ವಿಶ್ವವಿದ್ಯಾಲಯ’ ವಿಚಾರ ಸಂಕಿರಣದಲ್ಲಿ ಘಂಟಿ ಈ ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಚಾರ ತಾಂಡವವಾಡ್ತಿದೆ ಅನ್ನೋ ವಾಸ್ತವ ತೆರೆದಿಟ್ಟಿರುವ ಅವ್ರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿ ಸೇರಿ ಸಿಬ್ಬಂದಿಗಳ ಸಂಬಳ, ಅಭಿವೃದ್ಧಿಯ ಅನುದಾನ ಹಾಗೂ ವಿವಿಯ ಒಟ್ಟಾರೆ ಕೆಲಸಗಳಿಗೆ ಅನುದಾನ ಪಡೆಯಲು ಲಂಚ ಕೊಡ್ಲೇ ಬೇಕು ಅಂದಿದ್ದಾರೆ.
=====

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here