ಸ್ಯಾಂಡಲ್ ವುಡ್ ನಟಿಗೆ ಕಿರುಕುಳ- ಪೋಷಕ ನಟ ಮಾಡಿದ್ದೇನು ?

Harassment of Sandalwood actress from 'Ice Mahal' film Hero.
Harassment of Sandalwood actress from 'Ice Mahal' film Hero.

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಕಿರುಕುಳ ಪ್ರಕರಣ ಕೇಳಿಬಂದಿದೆ. ಮೊನ್ನೆಯಷ್ಟೇ ಹೊಂಬಣ್ಣ ಚಿತ್ರದ ನಾಯಕ ಸುಬ್ರಹ್ಮಣ್ಯ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದ ಬೆನ್ನಲ್ಲೆ ಇದೀಗ ಐಸ್ ಮಹಲ್ ಚಿತ್ರದ ನಾಯಕಿಗೆ ಅದೇ ಚಿತ್ರದ ಪೋಷಕ ನಟನೊಬ್ಬ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

ಐಸ್ ಮಹಲ್‌ಚಿತ್ರದ ನಟಿಗೆ ಅದೇ ಚಿತ್ರದಲ್ಲಿ ಅಭಿನಯಿಸಿದ್ದ ರಾಜಶೇಖರ ಎಂಬ ಪೋಷಕ ನಟ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ‌. ನಟಿಯ ಮೊಬೈಲ್ ಗೆ ರಾಜಶೇಖರ ಅಶ್ಲೀಲ ಸಂದೇಶ ಕಳಿಸಿದ್ದಾರೆ. ಅಲ್ಲದೇ ಆಕೆಯ ಚಾರಿತ್ರ್ಯದ ಬಗ್ಗೆ ಪ್ರಶ್ನೆ.

ನಟಿಯ ಚಾರಿತ್ರ್ಯದ ಬಗ್ಗೆ ಪ್ರಶ್ನೆ ಮಾಡಿ ಮೇಸೆಜ್​ ಕಳಿಸಿದ್ದ ರಾಜ್​ಶೇಖರ್ ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ನೊಂದ ನಟಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಪೊಲೀಸರು ಆರೋಪಿ ರಾಜಶೇಖರನನ್ನು ಬಂಧಿಸಿದ್ದಾರೆ.
ಒಟ್ಟಿನಲ್ಲಿ ಇತ್ತಿಚಿಗೆ ಸ್ಯಾಂಡಲವುಡ್ ಚಿತ್ರಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗ್ತಿರೋದು ಮಾತ್ರ ದುರಂತವೇ ಸರಿ.

ಪ್ರತ್ಯುತ್ತರ ನೀಡಿ

Please enter your comment!
Please enter your name here