ಐರಾವತ ಬೇಬಿಯ ಮನಸ್ಸು ಮುರಿದ ಹಾರ್ದಿಕ್​ ಪಾಂಡ್ಯಾ! ಇಷ್ಟಕ್ಕೂ ಇಬ್ಬರ ಮಧ್ಯೆ ನಡೆದಿದ್ದೇನು ಗೊತ್ತಾ?!

ಕ್ರಿಕೆಟ್​ ಆಟಗಾರರು ಹಾಗೂ ಸಿನಿಮಾ ನಟಿಯರ ನಡುವೆ ನಂಟಿರೋದು ತುಂಬಾ ಕಾಮನ್. ಸಾಮಾನ್ಯವಾಗಿ ಲವ್​ ಸ್ಟೋರಿಗಳು ಕೇಳಿಬರೋ ಕ್ರಿಕೆಟ್​-ಸಿನಿಮಾ ರಂಗದಲ್ಲಿ ಮೊದಲ ಬಾರಿಗೆ ಒಂದು ಹಾರ್ಟ್ ಬ್ರೇಕ್​ ನಡೆದಿರೋ ಸಂಗತಿ ಸುದ್ದಿಯಾಗಿದೆ. ಹೌದು ಟೀಮ್ ಇಂಡಿಯಾದ ಸ್ಟೈಲ್​ಕಿಂಗ್ ಪ್ರತಿ ಸರಣಿಯಲ್ಲು ತಮ್ಮ ಡಿಫ್ರೆಂಟ್​ ಹೇರ್​ ಸ್ಟೈಲ್, ಲುಕ್​ನಿಂದ ಅಭಿಮಾನಿಗಳನ್ನ ಆಕರ್ಷಿಸುವ. ಹಾರ್ದಿಕ್ ಪಾಂಡ್ಯಾ​ ನಟಿಮಣಿಯ ಹೃದಯ ಒಡೆದಿದ್ದಾರಂತೆ.

ad

ಹೌದು ಪಾಂಡ್ಯ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಚಿತ್ರದ ಬೇಬಿ ಡಾಲ್ ಊರ್ವಶಿ ರೌಟೇಲಾಗೆ ಹಾರ್ಟ್​ ಬ್ರೇಕ್ ಮಾಡಿದ ಆರೋಪ ಕೇಳಿಬಂದಿದೆ.  ಬಾಲಿವುಡ್​ ಹಾಟ್ ಬ್ಯುಟೀಸ್ ಹಾರ್ದಿಕ್​ಗೆ ಕ್ಲೋಸ್ ಫ್ರೆಂಡ್ಸ್​​. ಹಲವು ನಟಿಯರೊಂದಿಗೆ ಹಾರ್ದಿಕ್ ಕೈ ಹಿಡಿದು ಡೇಟಿಂಗ್ ಮಾಡಿದ್ದಾರೆ. ನಟಿ ಊರ್ವಶೀ ರೌಟೇಲಾ ಕೂ ಹಾರ್ದಿಕ್​ಗೆ ಕ್ಲೋಸ್ ಫ್ರೆಂಡ್. ಲೆಕ್ಕವಿಲ್ಲದಷ್ಟು ಡಿನ್ನರ್​, ಪಾರ್ಟಿಗಳಲ್ಲಿ ಹಾರ್ದಿಕ್ ಹಾಗು ಊರ್ವಶಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.  ಆದರೇ  ಹಾರ್ದಿಕ್ ಮಾತ್ರ ಊರ್ವಶಿ ಮನಸ್ಸು ನೋಯಿಸಿದ್ದಾರಂತೆ.

ನಟಿ ಊರ್ವಶಿ ರೌಟೇಲಾ ಭಾರತ-ಪಾಕ್ ಪಂದ್ಯ ನೋಡಲೇಬೇಕೆಂದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಿಂದೆ ಬಿದ್ದಿದ್ರಂತೆ. ಭಾರತ-ಪಾಕ್ ಪಂದ್ಯಕ್ಕೆ ಕೆಲ ದಿನಗಳು ಬಾಕಿ ಇರುವಂತೆ, ಊರ್ವಶಿ ಹಾರ್ದಿಕ್ ಪಾಂಡ್ಯಾಗೆ ಎರಡು ಪಾಸ್ ನೀಡುವಂತೆ, ಮೆಸೇಜ್ ಮೇಲೆ ಮೆಸೇಜ್ ಮಾಡಿ. ತಾನು ಮತ್ತು ತನ್ನ ತಾಯಿ ಬದ್ಧವೈರಿಗಳ ಪಂದ್ಯ ನೋಡಲು ಕಾದು ಕುಳಿತಿರುವುದಾಗಿ ಊರ್ವಶಿ, ಪಾಂಡ್ಯಾಗೆ ತಿಳಿಸಿದ್ರಂತೆ.

ಊರ್ವಶಿ ಸಾಲು ಸಾಲು ಮೆಸೇಜ್ ಮಾಡಿದ್ರೂ ಕೇರ್ ಮಾಡದ ಹಾರ್ದಿಕ್ ಆಕೆಯ ಯಾವ ಮೆಸೇಜ್ ಗಳಿಗೆ ಕೇರೇ ಮಾಡಿಲ್ವಂತೆ. ಪಾಂಡ್ಯ ಮ್ಯಾಚ್​ಗೆ ಪ್ರಿಪೇರ್ ಆಗ್ತಿದ್ದ ಕಾರಣ, ಊರ್ವಶಿಗೆ ರಿಪ್ಲೈ ಮಾಡಿಲ್ಲ ಅಂತ ಹೇಳಲಾಗ್ತಿದೆ.ವಿಷಯ ಅದೇನೆ ಇರ್ಲಿ ಹಾರ್ದಿಕ್ ರವರ ಈ ನಡೆ ಊರ್ವಶಿಗೆ ನೋವು ತಂದಿರುವುದಂತು ಸುಳ್ಳಲ್ಲ.

ಆದರೆ ಈ ವಿಚಾರ ಕುರಿತು ಬಾಯಿ ಬಿಡದ ನಟಿ ಈ ವಿಚಾರವನ್ನ ತಳ್ಳಿ ಹಾಕಿದ್ದಾರೆ. ನಾನು ಲಂಡನ್ನಲ್ಲಿ ಶೂಟಿಂಗ್ನಲ್ಲಿದ್ದೆ. ಹೀಗಾಗಿ ಮ್ಯಾಚ್ ನೋಡೋಕೆ ನನಗೆ ಟೈಮೇ ಇರಲಿಲ್ಲ ಅಂತ ಹೇಳಿಕೆ ನೀಡಿದ್ದು ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ