ಪರಸ್ಪರ ಮುಖಾಮುಖಿಯಾದಾಗ ರೇವಣ್ಣ ಕತ್ತಿಗೆ ಡಿಕೆಶಿ ಕೈಹಾಕಿದ್ಯಾಕೆ ಗೊತ್ತಾ?

ಸಹಜವಾಗಿಯೇ ಬೇರೆ-ಬೇರೆ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ರಾಜಕೀಯ ನಾಯಕರು ಒಬ್ಬರೊಬ್ಬರನ್ನು ಟೀಕಿಸುವುದು ಸಾಮಾನ್ಯ ಸಂಗತಿ.

ad

ಆದರೇ ಇದೇ ನಾಯಕರು ಯಾವುದಾದರೂ ಸಮಾರಂಭದಲ್ಲಿ ಮುಖಾಮುಖಿಯಾದಾಗ ಪರಸ್ಪರ ಖುಷಿಯಿಂದಲೇ ಒಬ್ಬರನ್ನೊಬ್ಬರು ಮಾತನಾಡಿಸುತ್ತಾರೆ. ಇಂತಹುದೇ ಘಟನೆಯೊಂದಕ್ಕೆ ಹಾಸನ ಕೂಡ ಸಾಕ್ಷಿಯಾಯಿತು. ಹೌದು ಮದುವೆ ಸಮಾರಂಭದಲ್ಲಿ ಮುಖಾಮುಖಿಯಾದ ರಾಜ್ಯ ಇಂದನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಜೆಡಿಎಸ್​ ನಾಯಕ ಎಚ್.ಡಿ.ರೇವಣ್ಣ ಪರಸ್ಪರ ಪ್ರೀತಿ-ವಿಶ್ವಾಸದಿಂದ ಹಸ್ತಲಾಘವ ಮಾಡಿದರು. ಉಭಯ ಕುಶಲೋಪರಿ ವಿಚಾರಿಸಿದರು. ಅಷ್ಟೇ ಅಲ್ಲ ಡಿಕೆಶಿ ರೇವಣ್ಣ ಕತ್ತಿನಲ್ಲಿರುವ ಏಲಕ್ಕಿ ಹಾರವನ್ನು ಒಮ್ಮೆ ಕೈಯಲ್ಲಿ ಮುಟ್ಟಿ ನೋಡಿ ನಗು ಚೆಲ್ಲಿದರು.

ರೇವಣ್ಣ ಯಾವಾಗಲೂ ತಮ್ಮ ಕತ್ತಿನಲ್ಲಿ ಏಲಕ್ಕಿ ಹಾರವನ್ನು ಹಾಕಿಕೊಂಡಿರುತ್ತಾರೆ. ಇದು ಶತ್ರುನಾಶಕ್ಕೆ ನೆರವಾಗುತ್ತದೆ ಎಂಬ ಮಾತಿದೆ. ಹೀಗಾಗಿ ರೇವಣ್ಣ ಹಾರವನ್ನು ಡಿಕೆಶಿ ಒಮ್ಮೆ ನೋಡಿ ನಕ್ಕರು. ಚುನಾವಣೆಯ ಲೆಕ್ಕಾಚಾರದಲ್ಲಿ ತೊಡಗಿರುವ ರಾಜಕೀಯ ನಾಯಕರು, ಪರಸ್ಫರ ಹೀಗೆ ಖುಷಿ-ಖುಷಿಯಿಂದ ಒಬ್ಬರನ್ನೊಬ್ಬರು ಮಾತನಾಡಿಸಿಕೊಂಡಿದ್ದನ್ನು ಕಂಡು ಕಾರ್ಯಕರ್ತರು ಫುಲ್ ಖುಷಿಯಾಗಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.