ಹಾಸನದಲ್ಲಿ ಜೆಡಿಎಸ್ ಹೊಸ ತಂತ್ರ – ಪ್ರಜ್ವಲ್ ಬದಲು ಸೂರಜ್ ಕಣಕ್ಕೆ..?

Suraj Revanna

ಹಾಸನದಲ್ಲಿ ಕಾಂಗ್ರೆಸ್ ನ್ನು ತಣ್ಣಗಾಗಿಸಲು ಜೆಡಿಎಸ್ ಹೊಸ ಯೋಜನೆ ಮಾಡಿದಂತಿದೆ. ಹಾಸನ ಲೋಕಸಭಾ ಕ್ಷೇತ್ರದಿಂದ ಸಚಿವ ಹೆಚ್​ಡಿ ರೇವಣ್ಣ ಅವ್ರ ಕಿರಿಯ ಪುತ್ರ ಪ್ರಜ್ವಲ್​​ ರೇವಣ್ಣ ಕಣಕ್ಕಿಳೀತಾರೆ ಅನ್ನೋ ಸುದ್ದಿ ಇತ್ತು. ಆದರೆ ಈಗ ಸೂರಜ್​​ ರೇವಣ್ಣ ಹೆಸರು ಕೇಳಿ ಬರುತ್ತಿದೆ.

 

Suraj Revanna
Prajwal Revanna

ನಾಲ್ಕು ಬಾರಿ ಸಿಎಂ ಹಾಸನಕ್ಕೆ ಆಗಮಿಸಿದಾಗ ಪ್ರಜ್ವಲ್ ರೇವಣ್ಣ ಎಲ್ಲೂ ಕಾಣಿಸಿಕೊಂಡಿಲ್ಲ. ಎಲ್ಲಾ ಸಂದರ್ಭದಲ್ಲೂ ಸೂರಜ್​​ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ರು. ಹಾಸನದಲ್ಲಿ ಋಣಮುಕ್ತ ಪತ್ರ ವಿತರಣಾ ಸಮಾರಂಭದಲ್ಲಿ ಸ್ವತಃ ರೇವಣ್ಣ ಸಿಎಂ ಇದ್ದ ವೇದಿಕೆಯ ಮೊದಲ ಸಾಲಿನಲ್ಲೇ ಸೂರಜ್​ರನ್ನು ಕೂರಿಸಿದ್ದರು. ಜೆಡಿಸ್ ನ ಕಾರ್ಯ ವೈಖರಿಗಳನ್ನು ಅವಲೋಕಿಸಿದರೆ ಸೂರಜ್ ರೇವಣ್ಣರನ್ನ ಕಣಕ್ಕಿಳಿಸಲು ಜೆಡಿಎಸ್ ಚಿಂತನೆ ನಡೆಸುತ್ತಿದೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ

ಪ್ರಜ್ವಲ್ ಸ್ಪರ್ಧಿಸಿದ್ರೆ ನಮ್ಮ ಬೆಂಬಲವಿಲ್ಲಾ ಎಂದು ಕಾಂಗ್ರೆಸ್ ನಾಯಕರು ಹೇಳ್ತಿರೋದ್ರಿಂದ ಜೆಡಿಎಸ್​ ಈ ನಿರ್ಧಾರಕ್ಕೆ ಬಂದಿದೆಯಾ ಅನ್ನೋ ಪ್ರಶ್ನೆಯೂ ಎದ್ದಿದೆ.