ಇದನ್ನು ಇವತ್ತು ನೋಡದಿದ್ದರೆ ನೀವು ಮುಂದೆ 12 ವರ್ಷ ಕಾಯಬೇಕು !!

ಹಾಸನ ಜಿಲ್ಲೆ ಶ್ರವಣಬೆಳಗೊಳದ ವಿಂಧ್ಯಗಿರಿ ಮೇಲೆ ವಿರಾಜ ಮಾನರಾಗಿರುವ ಬಾಹುಬಲಿ ಮೂರ್ತಿಗೆ ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಮಸ್ತಕಾಭಿಷೇಕಕೆ ಕ್ಷಣಗಣನೆ ಶುರುವಾಗಿದೆ. ಬೆಳಗ್ಗೆ ಸಂಪ್ರದಾಯದಂತೆ ಬೃಹನ್ಮೂರ್ತಿಗೆ ಪೂಜಾ ವಿಧಿವಿಧಾನಗಳು ನಡೆಯಲಿವೆ.
ಮಧ್ಯಾಹ್ನ ಕ್ಕೆ 108 ಕಳಶಗಳ ಮೂಲಕ ಮೊದಲ ಜಲಾಭಿಷೇಕ ಆರಂಭವಾಗಲಿದೆ. ನಂತರ ಪಂಚಾಮೃತ ಅಭಿಷೇಕ, ಅಷ್ಟದ್ರವ್ಯ, ಮಹಾ ಮಂಗಳಾರತಿ ನಡೆಯಲಿದೆ.

ad


ಸಿಎಂ ಸಿದ್ರಾಮಯ್ಯ, ಮುನಿವರೇಣ್ಯರು ಸೇರಿದಂತೆ ಹಲವು ಗಣ್ಯರು ಅಪರೂಪದ ಸಂದರ್ಭಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಪ್ರಕ್ರಿಯೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನೆರವೇರಲಿದ್ದು, ಸಂಜೆ 6.30 ರ ನಂತರ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿರಾಟ ವಿರಾಗಿಯ ಮಜ್ಜನಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ದೇಶದ ನಾನಾ ಕಡೆಯಿಂದ ತರಿಸಲಾಗಿದೆ. ಕಾಶ್ಮೀರದಿಂದ ಕೇಸರಿಯನ್ನು ಐದು ಕಿಲೋ ಕೇಸರಿಯನ್ನು ತರಿಸಿಕೊಳ್ಳಲಾಗಿದೆ. ಅಭಿಷೇಕದಲ್ಲಿ ಪ್ರಮುಖವಾಗಿರುವ ಕೇಸರಿಯನ್ನು ಪ್ರತಿದಿನ ಬಳಸಿಕೊಳ್ಳಲಾಗುತ್ತದೆ. ಒಂದು ಕೆಜಿ ಕೇಸರಿಗೆ 3.5 ಲಕ್ಷ ರೂ. ಗಳಂತೆ ಒಟ್ಟು 17.5 ಲಕ್ಷ ರೂ. ಮೊತ್ತದ ಐದು ಕಿಲೋ ಕೇಸರಿಯನ್ನು ಖರೀದಿಸಲಾಗಿದೆ.

ಸಾಮಾನ್ಯವಾಗಿ ಮಸ್ತಕಾಭಿಷೇಕದ ಸಂದರ್ಭದಲ್ಲಿ ರಕ್ತಚಂದನ, ಚಂದನವನ್ನು ಆಂಧ್ರಪ್ರದೇಶದಿಂದ ತರಿಸಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಗಂಧದ ನಾಡಿನ ಮೈಸೂರಿನಿಂದ ರಕ್ತ ಚಂದನ, ಬೆಂಗಳೂರಿನಿಂದ ಶ್ರೀಗಂಧ ತರಿಸಲಾಗಿದೆ. ಮದ್ದೂರು ಎಪಿಎಂಸಿಯಿಂದ ಸುಮಾರು 2,500 ಎಳನೀರನ್ನು ತರಿಸಲಾಗಿದೆ. 53 ಬಣ್ಣದ ಹೂವುಗಳನ್ನು ಪುಷ್ಪವೃಷ್ಟಿಗೆ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಆಂಧ್ರಪ್ರದೇಶ, ತಮಿಳುನಾಡಿನಿಂದ ಬಗೆಬಗೆಯ ಹೂವುಗಳನ್ನು ತರಿಸಿಕೊಳ್ಳಲಾಗಿದೆ. ಕನಕಾಂಬರ, ಮೈಸೂರು ಮಲ್ಲಿಗೆ, ಗುಲಾಬಿ, ಕಾಕಡ, ಸಂಪಿಗೆ ಸೇರಿದಂತೆ ನಾನಾ ಬಗೆಯ ಹೂವುಗಳನ್ನು ಹೆಲಿಕಾಪ್ಟರ್‌ ಮೂಲಕ ಪುಷ್ಪ ವೃಷ್ಟಿ ಮಾಡಲಾಗುತ್ತದೆ. ಒಟ್ಟು 250 ಕಿಲೋ ಹೂವುಗಳು ಬಾಹುಬಲಿ ಮೇಲೆ ಪುಷ್ಪವೃಷ್ಟಿಗೆ ಕಾದಿವೆ.