ಹಣಕಾಸಿನ ವಿಚಾರವಾಗಿ ಇಬ್ಬರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಹಾಸನದಲ್ಲಿ ನಡೆದಿದೆ. ಸೆಸ್ಕಾಂನಲ್ಲಿ ಸಹಾಯಕ ಲೈನ್ ಮ್ಯಾನ್ ಆಗಿ ಕೆಲ್ಸ ನಿರ್ವಹಿಸುತ್ತಿದ್ದ ನರಸಿಂಹಮೂರ್ತಿ ಕೊಲೆಯಾದ ದುರ್ದೈವಿ. ನರಸಿಂಹಮೂರ್ತಿಗೆ ಕಬ್ಬಿಣದ ರಾಡ್​ನಿಂದ ಹೊಡೆದು ಚಾಕುವಿನಿಂದ ಬರ್ಬರವಾಗಿ ಇರಿದ ಹಂತಕ ನಾಗರಾಜ್ ಪರಾರಿಯಾಗಿದ್ದು, ಸುಮಾರು ಅರ್ಧಗಂಟೆಗಳ ಕಾಲ ರಕ್ತದ ಮಡುವಿನಲ್ಲಿ ನರಸಿಂಹಮೂರ್ತಿ ಒದ್ದಾಡಿ ಸಾವನ್ನಪ್ಪಿದ್ದಾನೆ. ಇನ್ನು ಆರೋಪಿ ನಾಗರಾಜ್ ಹಾಸನದಲ್ಲಿ ಪ್ರಾವಿಜನ್ ಸ್ಟೋರ್ ನಡೆಸುತ್ತಿದ್ದು, ನರಸಿಂಹಮೂರ್ತಿಗೆ 50 ಸಾವಿರ ರೂಪಾಯಿ ಸಾಲ ನೀಡಿದ್ದ. ಈ ಸಾಲದ ವಿಚಾರವಾಗಿಯೇ ನಡೆದ ಗಲಾಟೆ ನರಸಿಂಹಮೂರ್ತಿಯ ಪ್ರಾಣವನ್ನ ತೆಗೆದಿದೆ. ಪೆನ್ಷನ್​​ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
============
ಬೈಟ್: ಪದ್ಮಾವತಿ, ಮೃತನ ತಾಯಿ
ಬೈಟ್: ಆನಂದ್, ಮೃತನ ಸಹೋದರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here