ಹ್ಯಾಟಿಕ್ ಹೀರೋ ಶಿವಣ್ಣನಿಂದ ಕುಮಾರಣ್ಣ ಭೇಟಿ !! ಗೀತಾ ಲೋಕಸಭಾ ಚುನಾವಣಾ ಕಣಕ್ಕೆ ? //Hatric hero Shivarajkumar met CM Kumaraswamy

ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಿವಾಸಕ್ಕೆ ಹ್ರ್ಯಾಟಿಕ್ ಹಿರೋ ಶಿವರಾಜ್ ಕುಮಾರ ಭೇಟಿ ನೀಡಿ ಕುತೂಹಲ ಮೂಡಿಸಿದರು.ಜೆ.ಪಿ ನಗರದಲ್ಲಿರುವ ಮುಖ್ಯಮಂತ್ರಿ ಎಚ್ ಡಿ ಕೆ ನಿವಾಸಕ್ಕೆ ಪತ್ನಿ ಗೀತಾ ಜೊತೆ ಆಗಮಿಸಿದ ಶಿವರಾಜ್ ಕುಮಾರ್, ಕೆಲ ಕಾಲ ಚರ್ಚೆ ನಡೆಸಿದರು.

ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವ ಶಿವರಾಜ್ ಕುಮಾರ್ ಹಾಗೂ ಎಚ್ ಡಿ ಕೆ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚೆ ನಡೆಸಿದ್ರು.

 

 

ಭೇಟಿ ಬಳಿಕ ಮಾತನಾಡಿದ ಹ್ರ್ಯಾಟಿಕ್ ಹಿರೋ ಶಿವರಾಜ್ ಕುಮಾರ್, ಕುಮಾರಣ್ಣ ಸಿಎಂ ಆದ ನಂತರ ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದೇವೆ. ಹೊಸ ಜವಾಬ್ದಾರಿ ವಹಿಸಿಕೊಂಡ ಹಿನ್ನಲೆಯಲ್ಲಿ ಭೇಟಿ ಮಾಡಿ ಅವರಿಗೆ ವಿಷ್ ಮಾಡಿದೆ. ಸಿನಿಮಾ ಪ್ರೋಡಕ್ಷನ್ ಇಂಡಸ್ಟ್ರಿಯಿಂದ ಬಂದು ಎರಡನೇ ಭಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. ನಮ್ಮ ಕುಟುಂಬಕ್ಕೆ ದೇವೆಗೌಡರ ಕುಟುಂಬ ತುಂಬ ಆತ್ಮೀಯರು ಕೂಡಾ ಎಂದರು.

ಪ್ರಮಾಣವಚನ ಸ್ವೀಕರಿಸಿದ ತಕ್ಷಣ ವಿಶ್ ಮಾಡಬೇಕಿತ್ತು. ಆದರೆ ಸಿನಿಮಾ ಶೂಟಿಂಗ್ ನಲ್ಲಿ ನಾನು ಬ್ಯೂಸಿ ಇದ್ದೆ. ಇವತ್ತು ಫ್ರೀ ಮಾಡಿಕೊಂಡು ನಾನು ಗೀತಾ ಬಂದು ವಿಷ್ ಮಾಡಿದೆ. ತುಂಬ ಸಲ ಪೋನ್ ಮೂಲಕ ಸಹ ಮಾತನಾಡಿದ್ದೀನಿ ಎಂದು ಶಿವರಾಜ್ ಕುಮಾರ್ ಹೇಳಿದರು.

 

ಮುಂದಿನ ಲೋಕಸಭೆಗೆ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ ಮಾಡುತ್ತಾರೆಯೇ ಎಂದು ಶಿವಣ್ಣರನ್ನು ಪತ್ರಕರ್ತರು ಪ್ರಶ್ನಿಸಿದಾಗ, ಲೋಕಸಭೆ ಚುನಾವಣೆಗೆ ಇನ್ನೂ ಸಮಯ ಇದೆ. ಗೀತಾ ಈ ಬಾರಿ ಜೆಡಿಎಸ್ ಪರ ಪ್ರಚಾರ ಸಹ ಮಾಡಿದ್ರು. ಮುಂದೆ ಏನೇನಾಗುತ್ತೋ ನೋಡೋಣ ಎಂದರು.