ಜಮೀರ್ ಗೆ ಅಲ್ತಾಫ್ ಮದ್ದು !! ದೇವೇಗೌಡರ ಪೊಲಿಟಿಕಲ್ ಮೆಡಿಕಲ್ ನಲ್ಲಿ ಎಲ್ಲದಕ್ಕೂ ಪರಿಹಾರ !! ಒಕ್ಕಲಿಗ – ಮುಸ್ಲಿಂ ಕಾಂಬಿನೇಷನ್ !!

HD Devegowda chosen a strong candidate against Zamir Ahmed Khan
HD Devegowda chosen a strong candidate against Zamir Ahmed Khan

ಎಚ್ ಡಿ ದೇವೇಗೌಡರ ಸವಾಲು ಅಂದ್ರೆ ಅಷ್ಟು ಸುಲಭವಲ್ಲ. ಎಂತಹ ರಾಜಕೀಯ ಕ್ಲಿಷ್ಟತೆಗೂ ಗೌಡರ ಬಳಿ ಪರಿಹಾರವಿರುತ್ತದೆ. ಅಂತಹುದರಲ್ಲಿ ಚಾಮರಾಜಪೇಟೆಯೊಂದನ್ನು ಗೆಲ್ಲುವುದು ಗೌಡರಿಗೇನು ಅಸಾದ್ಯವಲ್ಲ.

ಅದಕ್ಕಾಗಿಯೇ ಗೌಡರು ಅಲ್ತಾಫ್ ಖಾನ್ ಹೆಸರನ್ನು ಚಾಮರಾಜಪೇಟೆಯ ಜೆಡಿಎಸ್ ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ.ಹೌದು. ಜೆಡಿಎಸ್ ಪಕ್ಷದಿಂದ ಬಂಡಾಯ ಎದ್ದು ಕಾಂಗ್ರೆಸ್​ಗೆ ಪಕ್ಷಾಂತರವಾಗಿರುವ ಜಮೀರ್ ಅಹ್ಮದ್ ಅವರನ್ನು ಚಾಮರಾಜಪೇಟೆ ಕ್ಷೇತ್ರ ದಲ್ಲಿ ಶತಾಯಗತಾಯ ಸೋಲಿಸಲು ಜೆಡಿಎಸ್ ಸಂಕಲ್ಪ ತೊಟ್ಟಿದೆ. ಚಾಮರಾಜಪೇಟೆಯಲ್ಲಿ ಜಮೀರ್ ಭದ್ರಕೋಟೆಯನ್ನು ಭೇದಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ, ರಾಜಕೀಯ ಪಟ್ಟುಗಳನ್ನು ಕರತಲಾಮಲಕ ಮಾಡಿಕೊಂಡಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಜಮೀರ್ ಹಣಿಯಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರಿಗೆ ರಾಜಕೀಯ ಅಸ್ತ್ರವಾಗಿ ಸಿಕ್ಕಿರುವುದು ಅಲ್ತಾಫ್ ಖಾನ್. ಅಲ್ತಾಫ್ ಖಾನ್ ಅವರನ್ನು ಜಮೀರ್ ವಿರುದ್ಧ ಚಾಮರಾಜಪೇಟೆಯಲ್ಲಿ ಕಣಕ್ಕಿಳಿಸುವುದು ಹೆಚ್​ಡಿಡಿ ಪ್ಲಾನ್ ಆಗಿದೆ. ಅಲ್ತಾಫ್ ಖಾನ್ ಕೂಡ ಚಾಮರಾಜಪೇಟೆಯಲ್ಲಿ ಪ್ರಭಾವಿ ಮುಖಂಡ. ಕಾಂಗ್ರೆಸ್ ಪಕ್ಷದಿಂದ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಅಲ್ತಾಫ್​ಗೆ ಜಮೀರ್ ಅಹ್ಮದ್ ಎಂಟ್ರಿ ತಣ್ಣೀರೆರಚಿದೆ. ಜಮೀರ್ ಅಹ್ಮದ್​ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕುವುದು ಖಚಿತವಾಗಿದೆ. ಇದರಿಂದ ಅಲ್ತಾಫ್ ಖಾನ್​ ಅಸಮಾಧಾನಗೊಂಡಿದ್ದು, ಜೆಡಿಎಸ್ ಸೇರಿದ್ದಾರೆ. ಚಾಮರಾಜಪೇಟೆ ಕ್ಷೇತ್ರದಲ್ಲಿ ಒಕ್ಕಲಿಗ ಮತ್ತು ಮುಸ್ಲಿಮ್ ವೋಟುಗಳು ಹೆಚ್ಚಿನ ಪ್ರಮಾಣದಲ್ಲಿವೆ. ಹೀಗಾಗಿ, ಪ್ರಬಲ ಮುಸ್ಲಿಮ್ ಅಭ್ಯರ್ಥಿ ಸಿಕ್ಕಿದರೆ ಜೆಡಿಎಸ್ ಪಕ್ಷಕ್ಕೆ ಈ ಕ್ಷೇತ್ರವನ್ನು ಗೆಲ್ಲುವ ಅವಕಾಶ ಇದ್ದೇ ಇದೆ.

ಜಮೀರ್​ಗೆ ಸರಿಸಮಾನವಾಗಿ ನಿಲ್ಲಬಲ್ಲ ಮುಸ್ಲಿಮ್ ಮುಖಂಡನೆಂದರೆ ಅಲ್ತಾಫ್ ಖಾನ್. ಜಮೀರ್ ಅವರನ್ನು ಮಣಿಸಲು ದೇವೇಗೌಡರಿಗೆ ಸರಿಯಾದ ದಾಳ ಅಲ್ತಾಫ್ ಖಾನ್ ಅವರೇ ಎನ್ನಲಾಗುತ್ತಿದೆ.ಅಲ್ತಾಫ್ ಜೊತೆಗೆ ಈಗಾಗಲೇ ದೇವೇಗೌಡರು ಚರ್ಚೆ ನಡೆಸಿದ್ದಾರೆ. ಹಲವು ಕಾಮಗಾರಿಗಳಿಗೆ ಜಮೀರ್ ಅಹಮ್ಮದ್ ದೇವಸ್ಥಾನದ ಗೋಡೆ ಒಡೆದಿರೋ ಪ್ರಕರಣ ಸೇರಿದಂತೆ ಹಲವು ಕಾರಣಗಳಿಗೆ ಒಕ್ಕಲಿಗರಿಗೆ ಜಮೀರ್ ಬಗ್ಗೆ ಅಸಮಾದಾನ ಇದೆ. ಕಾರ್ಪೋರೇಟರ್ ಸೀಮಾ ಅಲ್ತಾಫ್ ಪತಿಯಾಗಿರುವ ಅಲ್ತಾಫ್ ಖಾನ್ ಒಕ್ಕಲಿಗರು ಮತ್ತು ಮುಸ್ಲೀಮರ ಮದ್ಯೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಂದೆರಡು ಬಾರಿ ದೇವೇಗೌಡರು ಕ್ಷೇತ್ರದಲ್ಲಿ ಓಡಾಡಿದರೆ ಒಕ್ಕಲಿಗರ ಮತಗಳು ಒಂದೂ ತಪ್ಪದಂತೆ ಜೆಡಿಎಸ್ ಮತಪೆಟ್ಟಿಗೆಗೆ ಬೀಳಲಿದೆ ಎಂಬುದು ಜೆಡಿಎಸ್ ಲೆಕ್ಕಾಚಾರ.